ನವದೆಹಲಿ: Demat Account Update - ಷೇರು ಮಾರುಕಟ್ಟೆ ಹೂಡಿಕೆದಾರರಿಗೆ ಮಹತ್ವದ ಸುದ್ದಿಯೊಂದು ಪ್ರಕಟವಾಗಿದೆ. ನೀವೂ ಕೂಡ ಒಂದು ವೇಳೆ ಷೇರು ಮಾರುಕಟ್ಟೆಯಲ್ಲಿ ಹಣವನ್ನು ಹೂಡಿಕೆ ಮಾಡುತ್ತಿದ್ದರೆ ಮತ್ತು ನೀವು ಡಿಮ್ಯಾಟ್ ಖಾತೆ (Demat Account) ಅಥವಾ ಟ್ರೇಡಿಂಗ್ ಖಾತೆಯನ್ನು ಹೊಂದಿದ್ದರೆ, ಈ ಸುದ್ದಿ ನಿಮಗಾಗಿ. ನೀವೂ ಕೂಡ ಇನ್ನೂ ನಿಮ್ಮ KYC ಅನ್ನು ಅಪ್‌ಡೇಟ್ ಮಾಡದಿದ್ದರೆ, ನಂತರ ಅದನ್ನು ಮಾರ್ಚ್ 31 ರೊಳಗೆ ನವೀಕರಿಸಿ. ಇಲ್ಲದಿದ್ದರೆ ನಿಮ್ಮ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಈ ಕುರಿತು ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳೋಣ ಬನ್ನಿ.


COMMERCIAL BREAK
SCROLL TO CONTINUE READING

ಮಾರ್ಚ್ 31 ರೊಳಗೆ KYC ಅನ್ನು ನವೀಕರಿಸಿ
ಠೇವಣಿದಾರರಾದ ನ್ಯಾಷನಲ್ ಸೆಕ್ಯುರಿಟೀಸ್ ಡಿಪಾಸಿಟರಿ ಲಿಮಿಟೆಡ್ (NSD) ಮತ್ತು ಸೆಂಟ್ರಲ್ ಡಿಪಾಸಿಟರಿಸ್ ಸರ್ವಿಸಸ್ ಲಿಮಿಟೆಡ್ (CDSL) ಹೊರಡಿಸಿದ ಸುತ್ತೋಲೆಯಲ್ಲಿ ಖಾತೆದಾರರು ಒಟ್ಟು  6 ಕೆವೈಸಿ ಮಾಹಿತಿಗಳನ್ನು ಹಂಚಿಕೊಳ್ಳಬೇಕು ಎನ್ನಲಾಗಿದೆ. ಈ ವಿವರಗಳಲಿ ಹೆಸರು, ವಿಳಾಸ, ಪ್ಯಾನ್, ಮೊಬೈಲ್ ಸಂಖ್ಯೆ, ಇ-ಮೇಲ್ ಐಡಿ ಮತ್ತು ಆದಾಯ ಶ್ರೇಣಿ ಶಾಮೀಲಾಗಿವೆ.


6 KYC ವಿವರಗಳನ್ನು ನವೀಕರಿಸಬೇಕು
ಜೂನ್ 1, 2021 ರ ನಂತರ ತೆರೆಯಲಾದ ಹೊಸ ಖಾತೆಗಳಿಗೆ ಎಲ್ಲಾ 6 ಮಾಹಿತಿಯನ್ನು ಕಡ್ಡಾಯಗೊಳಿಸಲಾಗಿದೆ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ. ಅಸ್ತಿತ್ವದಲ್ಲಿರುವ ಖಾತೆಗಳಿಗೆ, ಮಾರುಕಟ್ಟೆ ನಿಯಂತ್ರಕ SEBI ಎಲ್ಲಾ 6 KYC ಗಳನ್ನು ನವೀಕರಿಸಲು ಠೇವಣಿದಾರರನ್ನು (Trading Account) ಕೇಳಿದೆ ಮತ್ತು ಅಗತ್ಯವಿರುವಲ್ಲಿ ಅದನ್ನು ನವೀಕರಿಸಲು ಗ್ರಾಹಕರಿಗೆ ಸೂಚಿಸಿದೆ.


PAN ಪರಿಶೀಲಿಸಿ
ಸೆಕ್ಯುರಿಟೀಸ್ ಮಾರುಕಟ್ಟೆಯಲ್ಲಿನ ವಹಿವಾಟುಗಳಿಗಾಗಿ ಗ್ರಾಹಕರ ಪರವಾಗಿ ಪ್ಯಾನ್ ಸಲ್ಲಿಸುವ ಅವಶ್ಯಕತೆಯು ಅನುಮತಿಸಲಾದ ವಿನಾಯಿತಿಯೊಂದಿಗೆ ಮುಂದುವರಿಯುತ್ತದೆ ಎಂದು ಈ ಸುತ್ತೋಲೆಯಲ್ಲಿ ಹೇಳಲಾಗಿದೆ, ಹೂಡಿಕೆದಾರರು ಆದಾಯ ತೆರಿಗೆ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಪ್ಯಾನ್ ಕಾರ್ಡ್ ಅನ್ನು ಪರಿಶೀಲಿಸಲು ಕೋರಲಾಗಿದೆ. ಪ್ಯಾನ್ ಕಾರ್ಡ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದರೆ, ಪ್ಯಾನ್ ಕಾರ್ಡ್ ಅನ್ನು ಮಾನ್ಯವೆಂದು ಪರಿಗಣಿಸಲಾಗುವುದಿಲ್ಲ.


ಈ ಮಾಹಿತಿಯನ್ನೂ ಕೂಡ ನವೀಕರಿಸಿ
ಎಲ್ಲಾ ಖಾತೆದಾರರು ಪ್ರತ್ಯೇಕ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ವಿಳಾಸವನ್ನು ಒದಗಿಸಬೇಕಾಗುತ್ತದೆ. ಆದರೆ, ಲಿಖಿತ ಘೋಷಣೆಯನ್ನು ನೀಡಿದ ನಂತರ, ಖಾತೆದಾರನು ತನ್ನ ಕುಟುಂಬದ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ವಿಳಾಸವನ್ನು ನವೀಕರಿಸಬಹುದು. ಕುಟುಂಬ ಎಂದರೆ ಸ್ವಯಂ, ಸಂಗಾತಿ, ಅವಲಂಬಿತ ಪೋಷಕರು ಮತ್ತು ಮಕ್ಕಳು.


ಇದನ್ನೂ ಓದಿ-Arecanut Price 01-03-2022: ಇಂದಿನ ರಾಶಿ ಅಡಿಕೆ ಧಾರಣೆ ಎಷ್ಟಿದೆ ತಿಳಿಯಿರಿ


ಕುಟುಂಬದ ಮಾಹಿತಿಯನ್ನು ನವೀಕರಿಸಿ (Share Market Trading)
ಒಂದೇ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಐಡಿ ಒಂದಕ್ಕಿಂತ ಹೆಚ್ಚು ಡಿಮ್ಯಾಟ್ ಖಾತೆಗಳಲ್ಲಿ ಕಂಡುಬಂದರೆ ಮತ್ತು ಕುಟುಂಬದ ಮಾಹಿತಿಯನ್ನು ನವೀಕರಿಸದಿದ್ದರೆ, ಅಂತಹ ಡಿಮ್ಯಾಟ್ ಖಾತೆದಾರರಿಗೆ ಮೊಬೈಲ್ ಸಂಖ್ಯೆ, ಇಮೇಲ್ ಐಡಿ ಬದಲಾವಣೆ ಫಾರ್ಮ್ ಅಥವಾ ವಿನಂತಿಯನ್ನು ಸಲ್ಲಿಸಲು 15 ದಿನಗಳ ನೋಟಿಸ್ ನೀಡಲಾಗುತ್ತದೆ. 


ಇದನ್ನೂ ಓದಿ-PM Kisan:ಮಾರ್ಚ್ 31 ರೊಳಗೆ ಈ ಕೆಲಸ ಮಾಡದಿದ್ದರೆ ಖಾತೆಗೆ ಬರುವುದಿಲ್ಲ ಪಿಎಂ ಕಿಸಾನ್ ಹಣ


ಖಾತೆದಾರರು ತಮ್ಮ ಆದಾಯ ಶ್ರೇಣಿಯನ್ನು ಠೇವಣಿದಾರರಿಗೆ ಪ್ರತ್ಯೇಕವಾಗಿ ವೈಯಕ್ತಿಕ ಮತ್ತು ವೈಯಕ್ತಿಕವಲ್ಲದ ರೂಪದಲ್ಲಿ ಬಹಿರಂಗಪಡಿಸಬೇಕು. ವ್ಯಕ್ತಿಗಳ ಆದಾಯ ಶ್ರೇಣಿಯು ರೂ 1 ಲಕ್ಷ ರೂ. ಗಳಿಂದ ಹಿಡಿದು 25 ಲಕ್ಷದವರೆಗಿನ ವ್ಯಾಪ್ತಿಯನ್ನು ಒಳಗೊಂಡಿರುತ್ತದೆ. ಆದರೆ ವ್ಯಕ್ತಿಗಳಲ್ಲದವರ ವ್ಯಾಪ್ತಿಯು 1 ಕೋಟಿ ರೂ. ಆಗಿರಲಿದೆ.


ಇದನ್ನೂ ಓದಿ-01-03-2022 Today Gold Price: ಇಂದಿನ ಚಿನ್ನ-ಬೆಳ್ಳಿ ದರ ಹೀಗಿದೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.