ಈ ಏಳು ಕಾರ್ಡ್ ಬಳಸಿ ಶಾಪಿಂಗ್ ಮಾಡಿದರೆ ಆನ್ಲೈನ್ ಆಫ್ ಲೈನ್ ಎರಡರಲ್ಲೂ ಸಿಗುವುದು ಭರ್ಜರಿ ಕ್ಯಾಶ್ ಬ್ಯಾಕ್
Credit Card Cashback: ಇತ್ತೀಚಿನ ದಿನಗಳಲ್ಲಿ ಶಾಪಿಂಗ್ ಮಾಡುವಾಗ ಕೆಲವು ಕಾರ್ಡ್ ಗಳನ್ನು ಬಳಸಿದರೆ, ಕ್ಯಾಶ್‌ಬ್ಯಾಕ್ ಪಡೆಯಬಹುದು. ಈ ಮೂಲಕ, ನಮಗೆ ಬೇಕಾದ ರೀತಿಯಲ್ಲಿ ಖರೀದಿಯೂ ಮಾಡಬಹುದು, ಹಣ ಕೂಡಾ ಉಳಿಸಬಹುದು.
Credit Card Cashback : ಹಬ್ಬದ ಸೀಸನ್ ಪ್ರಾರಂಭವಾದಂತೆ, ಆಫರ್ ಗಳು ಮತ್ತು ರಿಯಾಯಿತಿಗಳು ಕೂಡಾ ಸದ್ದು ಮಾಡುತ್ತಿವೆ. ದೀಪಾವಳಿಗಾಗಿ ಶಾಪಿಂಗ್ ಮಾಡುವುದು ಸಾಮಾನ್ಯವಾಗಿ ನಡೆದುಕೊಂಡು ಬಂದಿರುವ ವಾಡಿಕೆ. ನಿಮ್ಮ ನೆಚ್ಚಿನ ಗ್ಯಾಜೆಟ್ ಅಥವಾ ಹಬ್ಬದ ಬಟ್ಟೆಗಳನ್ನು ಖರೀದಿಸುವಾಗ ಎಲಿ ಆಫರ್ ಗಳಿವೆ? ಎಲ್ಲಿ ಡಿಸ್ಕೌಂಟ್ ಸೇಲ್ ಇದೆ ಎನ್ನುವುದನ್ನು ಗಮನಿಸುತ್ತೇವೆ. ಆಫರ್ ಇದ್ದಾಗ ಶಾಪಿಂಗ್ ಮಾಡಿದರೂ ಹಣ ಉಳಿಸುವುದು ಸಾಧ್ಯವಾಗುತ್ತದೆ. ಹೌದು, ಇತ್ತೀಚಿನ ದಿನಗಳಲ್ಲಿ ಶಾಪಿಂಗ್ ಮಾಡುವಾಗ ಕೆಲವು ಕಾರ್ಡ್ ಗಳನ್ನು ಬಳಸಿದರೆ, ಕ್ಯಾಶ್‌ಬ್ಯಾಕ್ ಪಡೆಯಬಹುದು. ಈ ಮೂಲಕ, ನಮಗೆ ಬೇಕಾದ ರೀತಿಯಲ್ಲಿ ಖರೀದಿಯೂ ಮಾಡಬಹುದು, ಹಣ ಕೂಡಾ ಉಳಿಸಬಹುದು.
ಖರೀದಿ ಮೇಲೆ ಸಿಗುವುದು ಕ್ಯಾಶ್‌ಬ್ಯಾಕ್ :
ಕ್ಯಾಶ್‌ಬ್ಯಾಕ್ ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸಿದಾಗ, ಆ ವಸ್ತುವಿನ ಬೆಲೆಯ ಶೇಕಡಾವಾರು ಮೊತ್ತವನ್ನು ಕ್ಯಾಶ್‌ಬ್ಯಾಕ್ ಆಗಿ ಪಡೆಯಬಹುದು. ಹೆಚ್ಚಿನ ಕ್ರೆಡಿಟ್ ಕಾರ್ಡ್ ಪೂರೈಕೆದಾರರು ಪ್ರತಿ ತಿಂಗಳು ನಿಮ್ಮ ಕ್ರೆಡಿಟ್ ಕಾರ್ಡ್ ಸ್ಟೇಟ್‌ಮೆಂಟ್‌ನಲ್ಲಿ ಕಾಣಿಸಿಕೊಳ್ಳುವ ಖಾತೆಗೆ ನೀವು ಗಳಿಸಿದ ಮೊತ್ತವನ್ನು ಠೇವಣಿ ಮಾಡುತ್ತಾರೆ.
ಇದನ್ನೂ ಓದಿ : Arecanut today price: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತೆ ಏರಿಕೆ!
ಆನ್‌ಲೈನ್, ಆಫ್‌ಲೈನ್ ಶಾಪಿಂಗ್ ಮಾಡಿದರೂ ಸಿಗುವುದು ಕ್ಯಾಶ್‌ಬ್ಯಾಕ್:
Flipkart Axis ಬ್ಯಾಂಕ್ ಕ್ರೆಡಿಟ್ ಕಾರ್ಡ್
ಅಮೆಜಾನ್ ICICI ಕ್ರೆಡಿಟ್ ಕಾರ್ಡ್
ರಿಲಯನ್ಸ್ SBI ಕಾರ್ಡ್
ರಿಲಯನ್ಸ್ SBI ಕಾರ್ಡ್ ಪ್ರೈಮ್
Myntra Kotak ಕ್ರೆಡಿಟ್ ಕಾರ್ಡ್
Swiggy HDFC ಕ್ರೆಡಿಟ್ ಕಾರ್ಡ್
ಏರ್ಟೆಲ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್
ಇದೀಗ ಹಬ್ಬದ ಹಿನ್ನೆಲೆಯಲ್ಲಿ ಬಹಳಷ್ಟು ಆನ್ಲೈನ್ ಸೈಟ್ ಗಳು ಆಫರ್ ಘೋಷಿಸಿವೆ. ಈ ಸೈಟ್ ಗಳಲ್ಲಿ ಭಾರೀ ರಿಯಾಯಿತಿಯೊಂದಿಗೆ ಖರೀದಿ ಮಾಡುವುದು ಸಾಧ್ಯವಾಗುತ್ತದೆ. ಜೊತೆಗೆ ಕ್ಯಾಶ್ ಬ್ಯಾಕ್ ಆಫರ್ ಕೂಡಾ ಸೇರಿಕೊಂಡರೆ ನೀವು ಖರೀದಿಸಬೇಕು ಎಂದುಕೊಂಡಿರುವ ವಸ್ತು ಅತಿ ಕಡಿಮೆ ಬೆಲೆಗೆ ನಿಮ್ಮದಾಗುವುದು ಸಾಧ್ಯವಾಗುತ್ತದೆ.
ಇದನ್ನೂ ಓದಿ : ಧನತ್ರಯೋದಶಿಯಂದೇ ಭರ್ಜರಿ ಇಳಿಕೆಯಾಯಿತು ಚಿನ್ನದ ದರ ! ಬೆಳ್ಳಿ ಕೂಡಾ ಬಲು ಅಗ್ಗ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.