New Bike Launch! ಶೀಘ್ರದಲ್ಲೇ ತನ್ನ ಗ್ರಾಹಕರಿಗೆ ಅಗ್ಗದ ಬೈಕ್ ಉಡುಗೊರೆ ನೀಡಲಿದೆ ಹೀರೋ, ಸ್ಪೋರ್ಟಿ ಲುಕ್ ಜೊತೆಗೆ ಅತ್ಯುತ್ತಮ ಮೈಲೇಜ್!
Hero Passion XPro: ಈ ಮೋಟಾರ್‌ಸೈಕಲ್ 70-75 ಸಾವಿರ (ಎಕ್ಸ್ ಶೋ ರೂಂ, ದೆಹಲಿ) ಬೆಲೆ ಶ್ರೇಣಿಯಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಹೊಂದಲಾಗಿದೆ. ಈ ಮೋಟಾರ್‌ಸೈಕಲ್ ಭಾರತೀಯ ಮಾರುಕಟ್ಟೆಯಲ್ಲಿ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್, ಹೋಂಡಾ ಶೈನ್ 100 ಮತ್ತು ಬಜಾಜ್ ಪ್ಲಾಟಿನಾ 110 ಗಳೊಂದಿಗೆ ಪೈಪೋಟಿಗೆ ಇಳಿಯಲಿದೆ.
Hero MotoCorp ಈಗ ಭಾರತೀಯ ಮಾರುಕಟ್ಟೆಯಲ್ಲಿ ಹೊಸ Passion Xpro ಅನ್ನು ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಂಡಿದೆ. ಇದು ಕಂಪನಿಯ ಕೈಗೆಟುಕುವ ಮತ್ತು ಉತ್ತಮ ಮೈಲೇಜ್ ಬೈಕ್ ಆಗಿರಲಿದೆ ಎನ್ನಲಾಗಿದೆ. ಕಂಪನಿಯು ಟಿವಿ ಮತ್ತು ಡಿಜಿಟಲ್ ಜಾಹೀರಾತುಗಳಿಗಾಗಿ ಈ ಹೊಸ ಬೈಕ್‌ನ ಚಿತ್ರೀಕರಣವನ್ನು ಕೂಡ ಪ್ರಾರಂಭಿಸಿದೆ ಎನ್ನಲಾಗಿದೆ. ಹೊಸ Passion Xpro ಕೆಲವು ಪ್ರಮುಖ ಬದಲಾವಣೆಗಳನ್ನು ಒಳಗೊಂಡಿದೆ ಎಂದು ಸ್ಪೈ ಶಾಟ್ಸ್ ವರದಿಮಾಡಿವೆ. ಇದು ಹೊಸ ಹೆಡ್‌ಲ್ಯಾಂಪ್ ಜೊತೆಗೆ ಸ್ಪ್ಲಿಟ್ ವಿನ್ಯಾಸವನ್ನು ಹೊಂದಿದೆ ಎನ್ನಲಾಗುತ್ತಿದೆ, ಇದು ಈ ಬೈಕ್ ಈ ಬೈಕ್ ಗೆ ಸ್ಪೋರ್ಟಿ ಲುಕ್ ನೀಡುತ್ತದೆ. ಇದರ ಎರಡು ದೀಪಗಳ ನಡುವೆ 'H' ಗಾತ್ರದ DRL ಕೂಡ ಇದೆ.
BikeWale ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, ಹೊಸ ಬೈಕ್ Passion XPro ಅನ್ನು ಜಾಹೀರಾತುಗಳಿಗಾಗಿ ಚಿತ್ರೀಕರಿಸಲಾಗುತ್ತಿದೆ, ಈ ವೇಳೆ ಆದರ ಕೆಲ ಆಯ್ದ ಚಿತ್ರಗಳು ಮುನ್ನೆಲೆಗೆ ಬಂದಿವೆ. ಹೊಸ ಬೈಕ್ ವಿಂಡ್‌ಸ್ಕ್ರೀನ್‌ನ ಹೊಸ ವಿನ್ಯಾಸವನ್ನು ಹೊಂದಿದ್ದು ಅದು ಸಂಪೂರ್ಣ ಕಪ್ಪು ಬಣ್ಣದಲ್ಲಿ ಇರಲಿದೆ. ಇಂಧನ ಟ್ಯಾಂಕ್‌ನ ಕೌಲ್ ಕೂಡ ವಿನ್ಯಾಸ ಬದಲಾವಣೆಗೆ ಒಳಪಟ್ಟಿದ್ದು, ಬೈಕ್‌ಗೆ ಹೊಸ ರೂಪ ನೀಡಿದೆ. ಹೊಸ ಮ್ಯಾಟ್ ಫಿನಿಶ್ ಪೇಂಟ್ ಸ್ಕೀಮ್‌ನೊಂದಿಗೆ ಬೈಕ್ ಹೆಚ್ಚು ಆಕರ್ಷಕವಾಗಿರಲಿದೆ ಎನ್ನಲಾಗಿದೆ. ಹೊಸ Passion XPro ಬಿಡುಗಡೆಯನ್ನು ಶೀಘ್ರದಲ್ಲೇ ನಿರೀಕ್ಷಿಸಲಾಗುತ್ತಿದೆ.
ಹೊಸ ಬೈಕ್ 110cc ಸಿಂಗಲ್-ಸಿಲಿಂಡರ್ ಏರ್ ಕೂಲ್ಡ್ ಎಂಜಿನ್‌ನಿಂದ ಚಾಲಿತವಾಗಿದ್ದು, 7000rpm ನಲ್ಲಿ ಸುಮಾರು 8bhp ಪವರ್ ಮತ್ತು 5500rpm ನಲ್ಲಿ 9Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಬೈಕ್ 4-ಸ್ಪೀಡ್ ಗೇರ್ ಬಾಕ್ಸ್ ಗೆ ಸಂಪರ್ಕ ಹೊಂದಿದೆ. ಈ ಹೊಸ ಬೈಕ್‌ನ ಬಿಡುಗಡೆ ದಿನಾಂಕವನ್ನು ಕೆಲವೇ ತಿಂಗಳುಗಳಲ್ಲಿ ಘೋಷಣೆಯಾಗುವ ಸಾಧ್ಯತೆ ಇದೆ.
ಸಂಭಾವ್ಯ ಬೆಲೆ ಮತ್ತು ಸ್ಪರ್ಧೆ
ಇತ್ತೀಚಿನ ಮಾದರಿಯು ಅದರ ಹಿಂದಿನದಕ್ಕಿಂತ ಹೆಚ್ಚಿನ ಬೆಲೆಯನ್ನು ಹೊಂದಿರಬಹುದು. ಈ ಮೋಟಾರ್‌ಸೈಕಲ್ 70-75 ಸಾವಿರ (ಎಕ್ಸ್ ಶೋ ರೂಂ, ದೆಹಲಿ) ಬೆಲೆ ಶ್ರೇಣಿಯಲ್ಲಿ ಬರಲಿದೆ ಎಂದು ನಿರೀಕ್ಷಿಸಲಾಗುತಿದೆ. ಈ ಮೋಟಾರ್‌ಸೈಕಲ್ ಭಾರತೀಯ ಮಾರುಕಟ್ಟೆಯಲ್ಲಿ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್, ಹೋಂಡಾ ಶೈನ್ 100 ಮತ್ತು ಬಜಾಜ್ ಪ್ಲಾಟಿನಾ 110 ಗಳೊಂದಿಗೆ ಸ್ಪರ್ಧೆಗಿಳಿಯುವ ಸಾಧ್ಯತೆ ಇದೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.