Mutual Funds SIP: ಎಸ್ಐಪಿ ಬಗ್ಗೆ ಜನರಲ್ಲಿರುವ ಸಾಮಾನ್ಯ ತಪ್ಪು ತಿಳುವಳಿಕೆಗಳು
ವ್ಯವಸ್ಥಿತ ಹೂಡಿಕೆ ಯೋಜನೆ (SIP) ಮೂಲಕ ಹೂಡಿಕೆ ಮಾಡುವ ಬಗ್ಗೆ ನೀವು ಸಹ ತಪ್ಪು ತಿಳುವಳಿಕೆ ಹೊಂದಿದ್ದರೆ ಈ ಸುದ್ದಿಯನ್ನು ನೀವು ಓದಲೇಬೇಕು. SIPಗೆ ಸಂಬಂಧಿಸಿದ ಉಪಯುಕ್ತ ಮಾಹಿತಿ ಇಲ್ಲಿದೆ ನೋಡಿ.
ನವದೆಹಲಿ: ನಿಮ್ಮಲ್ಲಿಯೂ ಸಹ ಮ್ಯೂಚುವಲ್ ಫಂಡ್ SIP(ವ್ಯವಸ್ಥಿತ ಹೂಡಿಕೆ ಯೋಜನೆ) ಹೂಡಿಕೆಯ ಬಗ್ಗೆ ಕೆಲವು ತಪ್ಪು ತಿಳುವಳಿಕೆಗಳಿರಬಹುದು. ಅನೇಕ ಜನರು ಎಸ್‍ಐಪಿಯಲ್ಲಿ ಹೂಡಿಕೆ ಮಾಡುವ ಬಗ್ಗೆ ಕೆಲವು ಮಿಥ್ಯಗಳನ್ನು ಇಟ್ಟುಕೊಂಡಿರುತ್ತಾರೆ. ಹಾಗಾದ್ರೆ ನೀವು ಈ ಸುದ್ದಿಯನ್ನು ಓದಲೇಬೇಕು. ಇಲ್ಲಿ ನಿಮ್ಮ ಎಲ್ಲಾ ತಪ್ಪು ತಿಳುವಳಿಕೆಗಳು ದೂರವಾಗುತ್ತವೆ. SIP ಹೂಡಿಕೆ ಮಾಡಬೇಕಾದರೆ ನಿಮಗೆ ಗೊಂದಲವನ್ನುಂಟು ಮಾಡುವ ಇಂತಹ ಅಂಶಗಳ ಬಗ್ಗೆ ಇಂದು ನಾವು ನಿಮಗೆ ಮಾಹಿತಿ ನೀಡಲಿದ್ದೇವೆ.
1) SIP ಕೇವಲ ಸಣ್ಣ ಹೂಡಿಕೆದಾರರಿಗೆ ಮಾತ್ರ
ಸತ್ಯ- SIP ಕೇವಲ ಸಣ್ಣ ಹೂಡಿಕೆದಾರರಿಗೆ ಮಾತ್ರವೆಂದು ನೀವು ಭಾವಿಸಿದರೆ ಇದು ಸಂಪೂರ್ಣ ತಪ್ಪು. SIP ಅನ್ನು ಸಣ್ಣ ಮೊತ್ತದಿಂದ ಪ್ರಾರಂಭಿಸಬಹುದು. ಆದರೆ, ನೀವು ಮೊತ್ತವನ್ನು ಹೆಚ್ಚಿಸಬಹುದು. ನೀವು 1 ಲಕ್ಷ ರೂ. ಅಥವಾ ಅದಕ್ಕಿಂತ ಹೆಚ್ಚಿನ SIP ಮೂಲಕ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಸಹ ಮಾಡಬಹುದು.
2) ಇದು ‘ಹೂಡಿಕೆ ಉತ್ಪನ್ನ’
ಸತ್ಯ- SIP ಎಂದರೆ ವ್ಯವಸ್ಥಿತ ಹೂಡಿಕೆ ಯೋಜನೆ. ಅಂದರೆ ಇದು ಹೂಡಿಕೆಯ ವಿಧಾನವಾಗಿದ್ದು, ನಿಯಮಿತವಾಗಿ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಮೂಲಕ ನೀವು ಉತ್ತಮ ಲಾಭ ಗಳಿಸುವಿರಿ. ಇಲ್ಲಿ ನೀವು SIP ವಿಧಾನದ ಮೂಲಕ ಹೂಡಿಕೆ ಮಾಡುತ್ತೀರಿ ವಿನಃ ಎಸ್‍ಐಪಿಯಲ್ಲೇ ಹೂಡಿಕೆ ಮಾಡುವುದಿಲ್ಲ.
ಇದನ್ನೂ ಓದಿ: HDFC Express Car Loan: ಕೇವಲ ಅರ್ಧ ಗಂಟೆಯಲ್ಲಿ ಸಿಗಲಿದೆ ಎಕ್ಸ್‌ಪ್ರೆಸ್ ಕಾರ್ ಲೋನ್'
3) ಮಾರುಕಟ್ಟೆ ಕುಸಿತ ಕಂಡಾಗ SIP ಮಾಡಬೇಕು
ಸತ್ಯ: ಮಾರುಕಟ್ಟೆಯಲ್ಲಿ ಕುಸಿತವಾದಾಗ ಎಸ್‌ಐಪಿ ಮಾಡಬೇಕು ಎಂಬ ಮಿಥ್ಯ ಜನರಲ್ಲಿದೆ. ಆದರೆ ಇದು ಸಂಪೂರ್ಣವಾಗಿ ತಪ್ಪು. ನೀವು ದೀರ್ಘಕಾಲದವರೆಗೆ SIP ಮಾಡಿದಾಗ ಮಾರುಕಟ್ಟೆ ಏರಿಳಿತವಿದ್ದರೂ ನಿಮ್ಮ ಹಣಕ್ಕೆ ಯಾವುದೇ ತೊಂದರೆಯಾಗುವುದಿಲ್ಲ.
4) SIP ಮೊತ್ತ ಬದಲಾಯಿಸಲು ಸಾಧ್ಯವಿಲ್ಲ
ಸತ್ಯ: SIP ಮೂಲಕ ಮಾಡಿದ ಹೂಡಿಕೆಯ ಮೊತ್ತವನ್ನು ಬದಲಾಯಿಸಲು ಸಾಧ್ಯವಿಲ್ಲವೆಂದು ಅನೇಕರು ಭಾವಿಸಿರುತ್ತಾರೆ. ಆದರೆ, ಇದು ತಪ್ಪು. SIP ಮಾಡುವಾಗ ನೀವು ಯಾವಾಗ ಬೇಕಾದರೂ ಹೂಡಿಕೆ ಮೊತ್ತವನ್ನು ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು. ಇದರಲ್ಲಿ ಹೂಡಿಕೆಯ ಸಮಯದ ಮಿತಿಯನ್ನು ಕೂಡ ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು.
5) ಮಾರುಕಟ್ಟೆ ಕುಸಿದಿರುವಾಗ SIP ನಿಲ್ಲಿಸಬೇಕು
ಸತ್ಯ- ಷೇರು ಮಾರುಕಟ್ಟೆಯಲ್ಲಿ ಕುಸಿತ ಕಂಡಾಗ SIP ನಿಲ್ಲಿಸಬೇಕು ಎಂದು ಅನೇಕರು ಹೇಳುತ್ತಾರೆ. ಇದಕ್ಕೆ ಕಾರಣ ಎಲ್ಲಿ ಹೂಡಿಕೆ ಮಾಡಿದ ಹಣ ಗುಳುಂ ಆಗುತ್ತೋ ಅನ್ನೋ ಭಯ. ನೀವು ಬೀಳುತ್ತಿರುವ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದನ್ನು ನಿಲ್ಲಿಸಿದಾಗ SIP ಮೂಲಕ ಹೂಡಿಕೆ ಮಾಡುವ ಉದ್ದೇಶ ವಿಫಲಗೊಳ್ಳುತ್ತದೆ. ಮಾರುಕಟ್ಟೆ ಬಿದ್ದ ಸಮಯದಲ್ಲಿ ಉತ್ತಮ ಮ್ಯೂಚುವಲ್ ಫಂಡ್‌ಗಳನ್ನು ಆಯ್ಕೆ ಮಾಡಿ ಮತ್ತು ನಿಯಮಿತ SIP ಯೊಂದಿಗೆ ಮುಂದುವರಿಯಿರಿ. ಇದರಿಂದ ನಿಮಗೆ ಉತ್ತಮ ಲಾಭ ಸಿಗಲಿದೆ.
ಇದನ್ನೂ ಓದಿ: Baby Berth in Trains: ತಾಯಂದಿರಿಗಾಗಿ ರೈಲ್ವೆಯಿಂದ ವಿಶೇಷ ಸೇವೆ ಆರಂಭ
6) ದೀರ್ಘಕಾಲಿನ ಹೂಡಿಕೆ ತಪ್ಪು
ಸತ್ಯ- ಅನೇಕ ಜನರು ದೀರ್ಘಕಾಲಿನ ಹೂಡಿಕೆ ತಪ್ಪು ಎಂದು ಭಾವಿಸಿರುತ್ತಾರೆ. ಆದರೆ ಇದು ತಪ್ಪು ಕಲ್ಪನೆ. ನೀವು ಅನೇಕ ವರ್ಷಗಳ ಕಾಲ ಎಸ್‍ಐಪಿ ಮುಂದುವರೆಸಬೇಕು. ಕಾಲಕಾಲಕ್ಕೆ SIP ಮೊತ್ತವನ್ನೂ ಹೆಚ್ಚಿಸುತ್ತಿರಬೇಕು. ಅಂದರೆ ಪ್ರತಿ ವರ್ಷ ನಿಮ್ಮ ಸಂಬಳ ಹೆಚ್ಚಾಗುತ್ತಿದ್ದಂತೆ SIP ಮೊತ್ತವೂ ಹೆಚ್ಚಾಗಬೇಕು. ಇದರಿಂದ ನಿಮಗೆ ಭವಿಷ್ಯದಲ್ಲಿ ಉತ್ತಮ ಲಾಭ ಸಿಗಲಿದೆ.
7) SIP ಗ್ಯಾರಂಟಿ ರಿಟರ್ನ್ಸ್ ನೀಡುತ್ತದೆ
ಸತ್ಯ- SIP ಮೂಲಕ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದರಿಂದ ನಮಗೆ ಖಾತರಿ ಆದಾಯ ಸಿಗುತ್ತದೆ ಎಂದು ಅನೇಕರು ಭಾವಿಸಿರುತ್ತಾರೆ. ವಾಸ್ತವವಾಗಿ ಮ್ಯೂಚುವಲ್ ಫಂಡ್‌ಗಳು ಸಹ ಮಾರುಕಟ್ಟೆಯ ಅಧೀನಗಳಿಗೆ ಸಂಬಂಧಿಸಿರುತ್ತವೆ. ಷೇರು ಮಾರುಕಟ್ಟೆ ಯಾವ ರೀತಿ ಏರಿಕೆ ಕಾಣುತ್ತದೋ ಅದೇ ರೀತಿ ನಿಮ್ಮ ಹಣವು ವೃದ್ಧಿಯಾಗುತ್ತದೆ, ಒಂದು ವೇಳೆ ಮಾರುಕಟ್ಟೆ ಬಿದ್ದರೆ ನಷ್ಟವೂ ಆಗುತ್ತದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.