7th Pay Commission : ಕೇಂದ್ರ ನೌಕರರಿಗೆ ಮತ್ತೊಮ್ಮೆ ಸಿಹಿ ಸುದ್ದಿ ಸಿಕ್ಕಿದೆ.  ಜುಲೈ ತಿಂಗಳಲ್ಲಿ ತುಟ್ಟಿಭತ್ಯೆಯಲ್ಲಿ ಬಂಪರ್ ಹೆಚ್ಚಳವಾಗಲಿದೆ. ಮೇ ತಿಂಗಳ ಎಐಸಿಪಿಐ ಸೂಚ್ಯಂಕದ ದತ್ತಾಂಶದಿಂದ ಈ ಬಾರಿ ಡಿಎಯಲ್ಲಿ ಭರ್ಜರಿ ಹೆಚ್ಚಳವಾಗಲಿದೆ ಎನ್ನಲಾಗಿದೆ.  


COMMERCIAL BREAK
SCROLL TO CONTINUE READING

ಎಐಸಿಪಿಐ ಸೂಚ್ಯಂಕದಲ್ಲಿ ಭಾರೀ ಜಿಗಿತ :
ಫೆಬ್ರವರಿ ನಂತರ, ಜುಲೈನಲ್ಲಿ ಡಿಎ ಹೆಚ್ಚಳವು ಕನಿಷ್ಠ 6 ಪ್ರತಿಶತದಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಏಪ್ರಿಲ್ ನಂತರ, ಮೇ ತಿಂಗಳ ಎಐಸಿಪಿಐ ಸೂಚ್ಯಂಕದಲ್ಲಿ ಭಾರೀ ಹೆಚ್ಚಳವಾಗಿದೆ.  ಈ ಬಾರಿ 1.3 ಅಂಶ ಏರಿಕೆಯಾಗಿದೆ.  ಜೂನ್‌ನಲ್ಲಿ AICPI ಸೂಚ್ಯಂಕ ಬಿಡುಗಡೆಯಾದ ಬಳಿಕ DA ಯಲ್ಲಿ 6 ಪ್ರತಿಶತದಷ್ಟು  ಹೆಚ್ಚಳವಾಗುವ ಸಾಧ್ಯತೆ ಇದೆ. 


ಇದನ್ನೂ ಓದಿ : ಈ ನಂಬರ್‌ ಇರೋ ಹಳೆ ನೋಟು ನಿಮ್ಮಲ್ಲಿದ್ರೆ ಕುಳಿತಲ್ಲೇ ಲಕ್ಷ ಗಳಿಸೋದು ಪಕ್ಕಾ!


ಫೆಬ್ರವರಿ ನಂತರ ಎಐಸಿಪಿಐ ಸೂಚ್ಯಂಕದಲ್ಲಿ ಹೆಚ್ಚಳ : 
ಜನವರಿ 2022 ರಲ್ಲಿ, ಎಐಸಿಪಿಐ ಸೂಚ್ಯಂಕವು 125.1 ರಷ್ಟಿತ್ತು. ಫೆಬ್ರವರಿಯಲ್ಲಿ ಇದು 125 ಕ್ಕೆ ಇಳಿದಿತ್ತು. ಫೆಬ್ರವರಿ ಅಂಕಿಅಂಶ ಬಿಡುಗಡೆಯಾದ ನಂತರ ಡಿಎಯಲ್ಲಿ ಯಾವುದೇ ರೀತಿಯ ಹೆಚ್ಚಳ ಇಲ್ಲ ಎಂದೇ ಹೇಳಲಾಗುತ್ತಿತ್ತು. ಆದರೆ ಅದರ ನಂತರ ಈ ಅಂಕಿ ಅಂಶವು ಮತ್ತೆ ವೇಗ ಪಡೆದುಕೊಂಡಿತು.  ಇದೀಗ ಮೇ ತಿಂಗಳಲ್ಲಿ ಈ  ಸೂಚ್ಯಂಕ129 ಅಂಕಗಳನ್ನು ತಲುಪುವುದರೊಂದಿಗೆ, ಡಿಎ ಹೆಚ್ಚಳದ ದಾರಿಯನ್ನು ಸುಗಮಗೊಳಿಸಿದೆ. 


ಡಿಎ ಎಷ್ಟು ಆಗುತ್ತದೆ ? :
ಡಿಎಯಲ್ಲಿ ಶೇ 6ರಷ್ಟು ಹೆಚ್ಚಳವಾದರೆ  ತುಟ್ಟಿ ಭತ್ಯೆ ಶೇ 40ಕ್ಕೆ ಹೆಚ್ಚಾಗುತ್ತದೆ. ಪ್ರಸ್ತುತ ಕೇಂದ್ರ ನೌಕರರಿಗೆ ಸರ್ಕಾರದಿಂದ ಶೇ.34 ತುಟ್ಟಿ ಭತ್ಯೆ ನೀಡಲಾಗುತ್ತಿದೆ. ಡಿಎ ಶೇಕಡಾ 40 ಕ್ಕೆ ಹೆಚ್ಚಳವಾಗುವುದರಿಂದ ವೇತನದಲ್ಲಿಯೂ ಭಾರೀ ಹೆಚ್ಚಳ ಕಂಡು ಬರಲಿದೆ. 6 ಶೇಕಡಾ DA ಯೊಂದಿಗೆ ಕನಿಷ್ಠ ಮತ್ತು ಗರಿಷ್ಠ ಮೂಲ ವೇತನವು ಎಷ್ಟು ಹೆಚ್ಚಾಗುತ್ತದೆ ನೋಡೋಣ?


ಇದನ್ನೂ ಓದಿ : ಈ ನಂಬರ್‌ ಇರೋ ಹಳೆ ನೋಟು ನಿಮ್ಮಲ್ಲಿದ್ರೆ ಕುಳಿತಲ್ಲೇ ಲಕ್ಷ ಗಳಿಸೋದು ಪಕ್ಕಾ!


ಕನಿಷ್ಠ ಮೂಲ ವೇತನದ ಲೆಕ್ಕಾಚಾರ :
1. ನೌಕರನ ಮೂಲ ವೇತನ ರೂ 18,000 
2. ಹೊಸ ತುಟ್ಟಿಭತ್ಯೆ (40%) ರೂ 7,200/ತಿಂಗಳು
3. ಇದುವರೆಗಿನ ತುಟ್ಟಿಭತ್ಯೆ (34%) ರೂ 6120/ತಿಂಗಳು
4. ಹೆಚ್ಚಾದ ತುಟ್ಟಿ ಭತ್ಯೆ 7200-6120 = ರೂ 1080/ತಿಂಗಳು
5. ವಾರ್ಷಿಕ ವೇತನದಲ್ಲಿ ಹೆಚ್ಚಳ 1080 X12 = ರೂ 12,960


ಗರಿಷ್ಠ ಮೂಲ ವೇತನದ ಲೆಕ್ಕಾಚಾರ :
1. ನೌಕರನ ಮೂಲ ವೇತನ ರೂ 56,900 
2. ಹೊಸ ತುಟ್ಟಿಭತ್ಯೆ (40%) ರೂ 22,760/ತಿಂಗಳು
3. ಇದುವರೆಗಿನ ತುಟ್ಟಿಭತ್ಯೆ (34%) ರೂ 19,346/ತಿಂಗಳು
4. ಹೆಚ್ಚಾದ ತುಟ್ಟಿ ಭತ್ಯೆ   22,760 ಹೆಚ್ಚಾಗಿದೆ -19,346 = ರೂ 3,414/ತಿಂಗಳು
5. ವಾರ್ಷಿಕ ವೇತನದಲ್ಲಿ ಹೆಚ್ಚಳ 3,414 X12 = ರೂ 40,968


ತುಟ್ಟಿಭತ್ಯೆಯನ್ನು ಎಐಸಿಪಿಐ ಸೂಚ್ಯಂಕದ ಆಧಾರದ ಮೇಲೆ ಅಂದಾಜಿಸಲಾಗಿದೆ. ಎಐಸಿಪಿಐ ಅಂಕಿಅಂಶಗಳನ್ನು ಕಾರ್ಮಿಕ ಸಚಿವಾಲಯ ಬಿಡುಗಡೆ ಮಾಡಿದೆ. 88 ಕೇಂದ್ರಗಳಿಗೆ ಮತ್ತು ಇಡೀ ದೇಶಕ್ಕೆ ಸೂಚ್ಯಂಕವನ್ನು ಸಿದ್ಧಪಡಿಸಲಾಗಿದೆ. AICPI ಅನ್ನು ಪ್ರತಿ ತಿಂಗಳ ಕೊನೆಯ working day ಬಿಡುಗಡೆ ಮಾಡಲಾಗುತ್ತದೆ. ಇತ್ತೀಚಿನ ಡೇಟಾವನ್ನು ಜೂನ್ 30 ರಂದು ಬಿಡುಗಡೆ ಮಾಡಲಾಗಿದೆ.


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.