ಬೆಂಗಳೂರು : ದೀಪಾವಳಿಗೂ ಮುನ್ನ ಕೇಂದ್ರ ನೌಕರರಿಗೆ ಭರ್ಜರಿ ಉಡುಗೊರೆ ಸಿಕ್ಕಿದ್ದು, ಅವರ ತುಟ್ಟಿಭತ್ಯೆಯನ್ನು ಶೇ.3ರಷ್ಟು ಹೆಚ್ಚಿಸಲು ನಿರ್ಧರಿಸಲಾಗಿದೆ. ಸರ್ಕಾರವು ಡಿಎ ಮತ್ತು ಡಿಆರ್ ಎರಡನ್ನೂ ಶೇ 3 ರಷ್ಟು ಅಂದರೆ ಶೇ. 50 ರಿಂದ 53 ಕ್ಕೆ ಹೆಚ್ಚಿಸಿದೆ. ಈ ಹೆಚ್ಚಳದೊಂದಿಗೆ, ಡಿಎ ಈಗ ಮೂಲ ವೇತನದೊಂದಿಗೆ ವಿಲೀನಗೊಳ್ಳಲಿದೆಯೇ ಎಂಬ ಚರ್ಚೆ ಹುಟ್ಟಿಕೊಂಡಿದೆ. ಇದೇ ವೇಳೆ ಸರ್ಕಾರಿ ನೌಕರರ ವೇತನದಲ್ಲಿ ಭಾರಿ ಬದಲಾವಣೆ ಕಾಣಲಿದೆ. 


COMMERCIAL BREAK
SCROLL TO CONTINUE READING

ತುಟ್ಟಿಭತ್ಯೆಯನ್ನು ಮೂಲ ವೇತನದೊಂದಿಗೆ ವಿಲೀನಗೊಳಿಸುವುದೇ? : 
ಅಕ್ಟೋಬರ್ 16 ರಂದು, ಕೇಂದ್ರ ನೌಕರರ ತುಟ್ಟಿಭತ್ಯೆಯನ್ನು ಶೇಕಡಾ 3 ರಷ್ಟು ಹೆಚ್ಚಿಸಲಾಯಿತು. ಈ ಮೂಲಕ ಸರ್ಕಾರಿ ನೌಕರರ ಡಿಎಯನ್ನು ಶೇಕಡಾ 50 ರಿಂದ 53 ಕ್ಕೆ ಹೆಚ್ಚಿಸಲಾಯಿತು. ಇದಾದ ಬಳಿಕ ತುಟ್ಟಿಭತ್ಯೆಯನ್ನು ಮೂಲ ವೇತನಕ್ಕೆ ಸೇರಿಸಬೇಕು ಎಂಬ ಚರ್ಚೆ ಆರಂಭವಾಯಿತು. ಈ ಹಿಂದೆ ತುಟ್ಟಿಭತ್ಯೆ ಶೇ 50 ದಾಟಿದಾಗ ಆರನೇ ವೇತನ ಆಯೋಗದಲ್ಲೂ ಈ ಶಿಫಾರಸು ಮಾಡಲಾಗಿತ್ತು.ಇದೀಗ ಈ ಬಗ್ಗೆ ಮತ್ತೊಮ್ಮೆ ಚರ್ಚೆ ಆರಂಭವಾಗಿದೆ. ಆದರೆ ಈ ಬಗ್ಗೆ ಸರ್ಕಾರ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.   ಈ ಹಿಂದೆ, ಐದನೇ ಮತ್ತು ಆರನೇ ವೇತನ ಆಯೋಗದ ಅವಧಿಯಲ್ಲಿ, ತುಟ್ಟಿಭತ್ಯೆಯನ್ನು ಮೂಲ ವೇತನದೊಂದಿಗೆ ವಿಲೀನಗೊಳಿಸಲಾಗಿತ್ತು. ಇದರ ಆಧಾರದ ಮೇಲೆ, 2004ರಲ್ಲಿ, 50 ಪ್ರತಿಶತ ಡಿಎಯನ್ನು ಮೂಲ ವೇತನದಲ್ಲಿ ವಿಲೀನಗೊಳಿಸಲಾಯಿತು. 


ಇದನ್ನೂ ಓದಿ : ಪಾತಾಳಕ್ಕೆ ಕುಸಿದ ಬಂಗಾರದ ಬೆಲೆ !ಇನ್ನು ಬಂಗಾರ ಬಲು ಅಗ್ಗ! ಚಿನ್ನದ ದರ ಇಳಿಕೆ ಹಿಂದಿರುವುದು ಡಾಲರ್ ಮಹಿಮೆ


ವೇತನದ ಮೇಲಾಗುವುದು ನೇರ ಪರಿಣಾಮ : 
ಪ್ರಸ್ತುತ, ಕೇಂದ್ರೀಯ ನೌಕರರು 53 ಪ್ರತಿಶತದಷ್ಟು ತುಟ್ಟಿಭತ್ಯೆಯನ್ನು ಪಡೆಯುತ್ತಿದ್ದಾರೆ. ಇದನ್ನು ಮೂಲ ವೇತನದೊಂದಿಗೆ ವಿಲೀನಗೊಳಿಸಿದರೆ, ವೇತನ ರಚನೆಯಲ್ಲಿ ಶಾಶ್ವತ ಬದಲಾವಣೆಗಳಾಗುತ್ತವೆ.ಇದರ ಪರಿಣಾಮವು ಭತ್ಯೆಗಳು ಮತ್ತು ಪ್ರಯೋಜನಗಳ ಮೇಲೂ ಗೋಚರಿಸುತ್ತದೆ.ಸರ್ಕಾರ ಪ್ರಸ್ತುತ ಈ ವಿಲೀನದ ಕುರಿತು ಚಿಂತನೆ ನಡೆಸುತ್ತಿದೆ.ಯಾವುದೇ ನಿರ್ಧಾರ ಕೈಗೊಂಡಿಲ್ಲ. 


ಇದನ್ನೂ ಓದಿ :  Arecanut Price Today: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತಷ್ಟು ಏರಿಕೆ, ಇಂದಿನ ದರ ಹೇಗಿದೆ ನೋಡಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.