ನವದೆಹಲಿ: Sovereign Gold Bond scheme 2021-22 (Series IX):- ನೀವು ಅಗ್ಗದ ಚಿನ್ನವನ್ನು ಖರೀದಿಸಲು ಯೋಚಿಸುತ್ತಿದ್ದರೆ ಇಂದಿನಿಂದ 5 ದಿನಗಳವರೆಗೆ ನಿಮಗೆ ಅವಕಾಶವಿದೆ. ರಿಸರ್ವ್ ಬ್ಯಾಂಕ್ (RBI)ನ ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯ 9ನೇ ಸರಣಿ (SGB ಸರಣಿ 9) ಇಂದಿನಿಂದ ಪ್ರಾರಂಭವಾಗಿದೆ. ಈ ಯೋಜನೆಯು 5 ದಿನಗಳವರೆಗೆ ತೆರೆದಿರುತ್ತದೆ. ನೀವು ಇಂದಿನಿಂದ ಅಂದರೆ ಜನವರಿ 10ರಿಂದ ಜನವರಿ 14ರವರೆಗೆ ಇದರಲ್ಲಿ ಹೂಡಿಕೆ ಮಾಡಬಹುದು.


COMMERCIAL BREAK
SCROLL TO CONTINUE READING

ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯ ವಿತರಣೆ ಬೆಲೆ


9ನೇ ಸರಣಿಯಲ್ಲಿ ಸರ್ಕಾರವು 8ನೇ ಸರಣಿಯ ವಿತರಣೆ ಮಾಡಿದ್ದ ಬೆಲೆಗಿಂತಲೂ ಪ್ರತಿ ಗ್ರಾಂಗೆ 5 ರೂ.ಗಳಷ್ಟು ಕಡಿಮೆ ಮಾಡಿದೆ. 8ನೇ ಸರಣಿಗೆ ಪ್ರತಿ ಗ್ರಾಂಗೆ 4,791 ರೂ ಇತ್ತು, ಆದರೆ 9ನೇ ಸರಣಿಯಲ್ಲಿ 4,786 ರೂ. ಬೆಲೆಯನ್ನು ನಿಗದಿಪಡಿಸಲಾಗಿದೆ. ಗ್ರಾಹಕರು ಇದರಲ್ಲಿ ಹೂಡಿಕೆ ಮಾಡಲು ಬಯಸಿದರೆ http://onlinesbi.com ನಲ್ಲಿ ವಿವರವಾದ ಮಾಹಿತಿ ಪಡೆಯಬಹುದು.


ಇದನ್ನೂ ಓದಿ: 7th pay commission : ಕೇಂದ್ರ ನೌಕರರ ವೇತನ ಈ ತಿಂಗಳು ಹೆಚ್ಚಳ! ಕನಿಷ್ಠ ವೇತನ ಹೆಚ್ಚಳ ನಿಗದಿ!


ಡಿಜಿಟಲ್ ಅರ್ಜಿ ಸಲ್ಲಿಸಿದರೆ ರಿಯಾಯಿತಿ


ನೀವು ಸಾವರಿನ್ ಗೋಲ್ಡ್ ಬಾಂಡ್‌(Sovereign Gold Bond)ಗಳಲ್ಲಿ ಹೂಡಿಕೆ ಮಾಡಲು ಬಯಸಿದರೆ ಡಿಜಿಟಲ್ ಚಂದಾದಾರಿಕೆಯ ಮೇಲೆ ರಿಸರ್ವ್ ಬ್ಯಾಂಕ್ ಪ್ರತಿ ಗ್ರಾಂಗೆ 50 ರೂ.ಗಳ ರಿಯಾಯಿತಿಯನ್ನು ನೀಡುತ್ತಿದೆ. ಹೀಗಾಗಿ ನೀವು ಡಿಜಿಟಲ್ ರೂಪದಲ್ಲಿ ಖರೀದಿಸುವುದು ಉತ್ತಮ. ಇಲ್ಲಿ ಪ್ರತಿ ಗ್ರಾಂಗೆ 4736 ರೂ. ದರದಲ್ಲಿ ನೀವು ಆನ್‌ಲೈನ್‌ನಲ್ಲಿ ಚಿನ್ನವನ್ನು ಖರೀದಿಸಬಹುದು.


ಸಾವರಿನ್ ಗೋಲ್ಡ್ ಬಾಂಡ್ ಎಲ್ಲಿ ಖರೀದಿಸಬಹುದು?


ಸಾವರಿನ್ ಗೋಲ್ಡ್ ಬಾಂಡ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಮತ್ತು ಪೇಮೆಂಟ್ ಬ್ಯಾಂಕ್, ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ (SHCIL), ಗೊತ್ತುಪಡಿಸಿದ ಅಂಚೆ ಕಚೇರಿಗಳು, ಮಾನ್ಯತೆ ಪಡೆದ ಸ್ಟಾಕ್ ಎಕ್ಸ್ ಚೇಂಜ್ ಗಳನ್ನು ಹೊರತುಪಡಿಸಿ ಎಲ್ಲಾ ಬ್ಯಾಂಕುಗಳು, ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ ಆಫ್ ಇಂಡಿಯಾ ಲಿಮಿಟೆಡ್ (NSE) ಮತ್ತು ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ಲಿಮಿಟೆಡ್ (BSE) ನಲ್ಲಿ ಖರೀದಿಸಬಹುದು.


ಆನ್‌ಲೈನ್‌ನಲ್ಲಿ ಹೂಡಿಕೆ ಮಾಡುವುದು ಹೇಗೆ?


NSE (ನ್ಯಾಷನಲ್ ಸ್ಟಾಕ್ ಎಕ್ಸ್‌ ಚೇಂಜ್) ನಲ್ಲಿ ಚಿನ್ನದ ಬಾಂಡ್‌ಗಳ ಘಟಕಗಳನ್ನು ಖರೀದಿಸಿ ಮತ್ತು ಅದರ ಮೌಲ್ಯಕ್ಕೆ ಸಮನಾದ ಮೊತ್ತವನ್ನು ನಿಮ್ಮ ಡಿಮ್ಯಾಟ್ ಖಾತೆಗೆ ಲಿಂಕ್ ಮಾಡಲಾದ ಖಾತೆಯಿಂದ ಕಡಿತಗೊಳಿಸಲಾಗುತ್ತದೆ.


ಇದನ್ನೂ ಓದಿ: ಈ ಟ್ರಿಕ್ ಮೂಲಕ PPF ನಲ್ಲಿ ಹಣ ಠೇವಣಿ ಮಾಡಿ! ₹1.5 ಕೋಟಿವರೆಗೆ ಲಾಭ ಪಡೆಯಿರಿ : ಲೆಕ್ಕಾಚಾರ ನೋಡಿ


ಮುಕ್ತಾಯದ ಅವಧಿ ಎಷ್ಟು..?


ಸಾವರಿನ್ ಗೋಲ್ಡ್ ಬಾಂಡ್‌(Sovereign Gold Bond)ನ ಮುಕ್ತಾಯ ಅವಧಿ 8 ವರ್ಷಗಳು. ಆದರೆ 5 ವರ್ಷಗಳ ನಂತರ ಮುಂದಿನ ಬಡ್ಡಿ ಪಾವತಿ ದಿನಾಂಕದಂದು ನೀವು ಈ ಯೋಜನೆಯಿಂದ ನಿರ್ಗಮಿಸಬಹುದು. ಸಾವರಿನ್ ಗೋಲ್ಡ್ ಬಾಂಡ್‌ನಲ್ಲಿ ಹೂಡಿಕೆದಾರರು ಕನಿಷ್ಠ 1 ಗ್ರಾಂ ಚಿನ್ನವನ್ನು ಹೂಡಿಕೆ ಮಾಡಬೇಕಾಗುತ್ತದೆ. ಅಗತ್ಯವಿದ್ದರೆ ಹೂಡಿಕೆದಾರರು ಸಾರ್ವಭೌಮ ಚಿನ್ನದ ಬಾಂಡ್ ವಿರುದ್ಧ ಸಾಲವನ್ನು ತೆಗೆದುಕೊಳ್ಳಬಹುದು ಆದರೆ ಚಿನ್ನದ ಬಾಂಡ್ ಅನ್ನು ಒತ್ತೆ ಇಡಬೇಕಾಗುತ್ತದೆ.


ಯಾರು ಸಾವರಿನ್ ಗೋಲ್ಡ್ ಬಾಂಡ್ ಖರೀದಿಸಬಹುದು?


  • ಯಾವುದೇ ವ್ಯಕ್ತಿ ಮತ್ತು ಹಿಂದೂ ಅವಿಭಜಿತ ಕುಟುಂಬವು ಗರಿಷ್ಠ 4 ಕೆಜಿ ಮೌಲ್ಯದವರೆಗೆ ಚಿನ್ನದ ಬಾಂಡ್‌ಗಳನ್ನು ಖರೀದಿಸಬಹುದು.

  • ಟ್ರಸ್ಟ್‌ ಗಳು ಮತ್ತು ಇತರ ರೀತಿಯ ಸಂಸ್ಥೆಗಳಿಗೆ ಈ ಮಿತಿಯನ್ನು 20 ಕೆಜಿ ಚಿನ್ನದ ಸಮಾನ ಬೆಲೆಗೆ ಇರಿಸಲಾಗಿದೆ.

  • ಸಾವರಿನ್ ಗೋಲ್ಡ್ ಬಾಂಡ್ ಅನ್ನು ಜಂಟಿ ಗ್ರಾಹಕರಾಗಿಯೂ ಖರೀದಿಸಬಹುದು. ಅಪ್ರಾಪ್ತರ ಹೆಸರಲ್ಲೂ ಖರೀದಿಸಬಹುದು.

  • ಅಪ್ರಾಪ್ತರ ಸಂದರ್ಭದಲ್ಲಿ ಅವರ ತಂದೆ-ತಾಯಿ ಅಥವಾ ಪೋಷಕರು ಸಾವರಿನ್ ಗೋಲ್ಡ್ ಬಾಂಡ್‌ಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.