ಬೆಂಗಳೂರು : ಭಾರತದ ಅತಿ ದೊಡ್ಡ ಅಮ್ಯೂಸ್ಮೆಂಟ್ ಪಾರ್ಕ್ ಚೈನ್ ಆದ ವಂಡರ್ ಲಾ ಹಾಲಿಡೇಸ್ ಲಿ. ಡಿಸೆಂಬರ್ 21ರಿಂದ ವಿಶೇಷವಾದ ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಪಾಸ್ ಕೊಡುಗೆಗಳು ಹಾಗೂ ಅನೇಕ ಥೀಮ್ ಇರುವ ಚಟುವಟಿಕೆಗಳನ್ನು  ಘೋಷಿಸಿದೆ. 


COMMERCIAL BREAK
SCROLL TO CONTINUE READING

ಡಿ. 10 ಮತ್ತು ಜನವರಿ 5ರ ನಡುವೆ, ಯಾವುದೇ ದಿನದಲ್ಲಾದರೂ ಅತಿಥಿಗಳು ಈ ಪಾಸ್ ಗಳನ್ನು ಬುಕ್ ಮಾಡಿ ಇಲ್ಲಿಗೆ ಭೇಟಿ ನೀಡಬಹುದು. ಇದಕ್ಕೆ ಯಾವುದೇ ಪೂರ್ವ ಆಯ್ಕೆ ದಿನಾಂಕಗಳ ಅಗತ್ಯವಿಲ್ಲ. ಈ ಪಾಸ್ ಪಾರ್ಕ್ ಟಿಕೆಟ್‌ಗಳ ಮೇಲೆ 30% ರಿಯಾಯಿತಿ ಹಾಗೂ ವಿಶೇಷವಾಗಿ ರಚಿಸಲಾದ ಆಹಾರ ಕಾಂಬೋ ಪ್ಯಾಕೇಜಸ್ ಮೇಲೆ 30% ರಿಯಾಯಿತಿಯನ್ನು ನೀಡುತ್ತದೆ. ಈ ಕೊಡುಗೆಗಳು ಆನ್‌ಲೈನ್ ಬುಕಿಂಗ್‌ಗಳಿಗೆ ಮಾತ್ರ ಲಭ್ಯವಿರುತ್ತದೆ. 


ಇದನ್ನೂ ಓದಿ : ಸರ್ಕಾರದ ಅತಿ ದೊಡ್ಡ ನಿರ್ಧಾರ !ಇನ್ನು ಎಟಿಎಂನಿಂದಲೇ ಪಡೆಯಬಹುದು ಪಿಎಫ್ ಹಣ


ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಆಚರಣೆಯ ಚೈತನ್ಯಕ್ಕೆ ತಕ್ಕಂತೆ ಅದ್ಭುತವಾದ ಅಲಂಕಾರಗಳೊಂದಿಗೆ ಆರಂಭಗೊಂಡು, ಅತಿಥಿಗಳು ತಮ್ಮ ಪ್ರೀತಿಪಾತ್ರರೊಡನೆ ಆನಂದಿಸುವಂತಹ ಮನಮೋಹಕ ವಾತಾವರಣ ಸೃಷ್ಟಿಸುತ್ತದೆ. ವಿಶೇಷವಾಗಿ ರಚಿಸಲಾದ ಫುಡ್ ಫೆಸ್ಟಿವಲ್ ಋತುಮಾನಿಕ ಟ್ರೀಟ್‌ಗಳನ್ನು ಮತ್ತು ಈ ಹಬ್ಬದ ಸಂಭ್ರಮದಲ್ಲಿ ಇತರ ವಿಶೇಷ ತಿನಿಸುಗಳನ್ನೂ, ಅದರ ಜೊತೆಗೆ ವಿಶೇಷ ಡಿನ್ನರ್ ಬಫೆ  ಒಳಗೊಂಡಿರುತ್ತದೆ. ಒಂದು ಜೋಡಿಗೆ 349* ರೂಪಾಯಿ ಪಾವತಿಸಬೇಕಾಗುತ್ತದೆ.  ಕೈಗೆಟುಕುವ ದರದಲ್ಲಿ ಡಿಸಂಬರ್ 21ರಿಂದ ಜನವರಿ 1ರವರೆಗೆ, ವಿಶೇಷವಾಗಿ ರಚಿಸಲಾದ ಮೆನು ಇರುವ ವಂಡರ್ ಲಾದ ಐತಿಹಾಸಿಕ ಸ್ಕೈ ವೀಲ್ ಮೇಲೆ ವಿಶೇಷವಾದ ಸೆಲೆಬ್ರೆಟೊರಿ ಸ್ಕೈ-ಡೈನ್ ಆಯ್ಕೆಯನ್ನೂ ಪಾರ್ಕ್ ಒದಗಿಸುತ್ತಿದೆ.
 
ಕ್ರಿಸ್‌ಮಸ್-ಥೀಮ್ ಇರುವ ಉಡುಗೊರೆಗಳು, ವಸ್ತ್ರಗಳು ಮತ್ತು ಚಟುವಟಿಕೆಯ ಫ್ಲೀ ಮಾರ್ಕೆಟ್ ಕೂಡಾ ಲಭ್ಯವಿದೆ. ದಿನಕ್ಕೆರೆಡು ಬಾರಿ ನಡೆಯುವ ಅದ್ಧೂರಿ ಕ್ರಿಸ್‌ಮಸ್ ಮೆರವಣಿಗೆ ಅತಿಥಿಗಳಿಗಾಗಿ ಈ ವರ್ಷದ ಆಚರಣೆಗಳನ್ನು ಅವಿಸ್ಮರಣೀಯಗೊಳಿಸುತ್ತದೆ.  ರಾತ್ರಿಯಾಗುತ್ತಿದ್ದಂತೆ, LED ಜಗ್ಲಿಂಗ್ ಪ್ರದರ್ಶನ, ಮ್ಯಾಜಿಕ್ ಶೋ,  ವಯೊಲಿನ್ ಶೋ, ಡಿಜೆ ಸೆಟ್‌ಗಳು ಮತ್ತು ಜೂಂಬಾ ಡ್ಯಾನ್ಸ್ ಒಳಗೊಂಡಂತೆ ಅನೇಕ ಕೌತುಕಮಯವಾದ ಚಟುವಟಿಕೆಗಳು ಸಾಲುಸಾಲಾಗಿ ಕಾದಿರುತ್ತವೆ. ಪ್ರತಿ ಸಂಜೆಯೂ ಕಾರ್ಯಕ್ರಮಗಳ ವಿಶಿಷ್ಟ ಮಿಶ್ರಣ ಒಳಗೊಂಡಿರುತ್ತದೆ.


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 


ಆನ್‌ಲೈನ್ ಪೋರ್ಟಲ್ https://bookings.wonderla.com/ ಮೂಲಕ ತಮ್ಮ ಎಂಟ್ರಿ ಟಿಕೆಟ್ ಬುಕ್ ಮಾಡಬಹುದು. ಬೆಂಗಳೂರು ಪಾರ್ಕ್‌ ಅನ್ನು 8037230333, 9945557777 ಅನ್ನು ಸಂಪರ್ಕಿಸಬಹುದು. 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.