ವೈಷ್ಣೋದೇವಿ ಭಕ್ತರಿಗೆ ಭಾರತೀಯ ರೈಲ್ವೆ ಉಡುಗೊರೆ: ಜೂನ್‌ವರೆಗಷ್ಟೇ ಈ ಪ್ರಯೋಜನ
Indian Railways Gift for Vaishnodevi Devotees: ಈ ಬೇಸಿಗೆಯಲ್ಲಿ ನೀವು ಮಾತಾ ವೈಷ್ಣೋದೇವಿ ಸನ್ನಿಧಾನಕ್ಕೆ ಭೇಟಿ ನೀಡಲು ಯೋಜಿಸುತ್ತಿದ್ದರೆ ರೈಲ್ವೆ ಇಲಾಖೆ ನಿಮಗಾಗಿ ಒಂದು ವಿಶೇಷ ಉಡುಗೊರೆಯನ್ನು ನೀಡಿದೆ.
Indian Railways Gift for Vaishnodevi Devotees: ವೈಷ್ಣೋದೇವಿಗೆ ತೆರಳಲು ಯೋಚಿಸುತ್ತಿರುವ ಭಕ್ತರಿಗಾಗಿ ಭಾರತೀಯ ರೈಲ್ವೆ (Indian Railways) ಇಲಾಖೆ ಗುಡ್ ನ್ಯೂಸ್ ಒಂದನ್ನು ನೀಡಿದೇ. ಈ ಬೇಸಿಗೆಯಲ್ಲಿ ಮಾತಾ ವೈಷ್ಣೋ ದೇವಿಗೆ ವಿಶೇಷ ರೈಲುಗಳನ್ನು (Special train for Mata Vaishno Devi) ಓಡಿಸುವುದಾಗಿ ರೈಲ್ವೆ ಇಲಾಖೆ ಘೋಷಿಸಿದೆ. ಭಾರತೀಯ ರೈಲ್ವೇಯ ಪಶ್ಚಿಮ ರೈಲ್ವೇ ಈ ವಿಶೇಷ ರೈಲುಗಳನ್ನು ಓಡಿಸುವುದಾಗಿ ತಿಳಿಸಿದೆ.
ಜೂನ್‌ವರೆಗಷ್ಟೇ ಸಿಗಲಿದೆ ಈ ಸೌಲಭ್ಯ:
ಮುಂಬೈನ ಬಾಂದ್ರಾ ಟರ್ಮಿನಸ್‌ನಿಂದ ಶ್ರೀ ಮಾತಾ ವೈಷ್ಣೋ ದೇವಿಗೆ ವಿಶೇಷ ರೈಲುಗಳು ಸಂಚರಿಸಲಿವೆ. ಗಮನಾರ್ಹವಾಗಿ, ಬೇಸಿಗೆ ರಜೆಯ ಸಂದರ್ಭದಲ್ಲಿ ಭಕ್ತರಿಗೆ ಸುಲಭವಾಗಿ ಮಾತಾ ವೈಷ್ಣೋದೇವಿಗೆ (Mata Vaishno Devi) ಭೇಟಿ ನೀಡಲು ಅನುಕೂಲವಾಗುವಂತೆ ಈ ವಿಶೇಷ ರೈಲುಗಳನ್ನು (Special train) ಓಡಿಸಲಾಗುತ್ತಿದ್ದು, ಏಪ್ರಿಲ್ ನಿಂದ ಜೂನ್‌ವರೆಗಷ್ಟೇ ಈ ವಿಶೇಷ ರೈಲುಗಳ ವ್ಯವಸ್ಥೆ ಇರಲಿದೆ.
ಇದನ್ನೂ ಓದಿ- ನಿಮ್ಮ ಬಳಿ ಇದೊಂದಿದ್ದರೆ ಸಾಕು, ವೋಟರ್ ಐಡಿ ಇಲ್ಲದೆಯೂ ಮತ ಚಲಾಯಿಸಬಹುದು !
ಶ್ರೀ ಮಾತಾ ವೈಷ್ಣೋ ದೇವಿಗೆ ವಿಶೇಷ ರೈಲುಗಳ (Special train for Mata Vaishno Devi) ಸಂಚಾರದಿಂದ ಏನು ಪ್ರಯೋಜನ?
ಮಾತಾ ವೈಷ್ಣೋ ದೇವಿಗೆ ವಿಶೇಷ ರೈಲುಗಳ ಸಂಚಾರವು ಬೇಸಿಗೆಯ ರಜೆಯಲ್ಲಿ ವೈಷ್ಣೋದೇವಿಗೆ ಭೇಟಿ ನೀಡಲು ಯೋಜಿಸುತ್ತಿರುವವರಿಗೆ ಹೆಚ್ಚು ಪ್ರಯೋಜನಕಾರಿ ಆಗಿದೆ. ಇದರಿಂದಾಗಿ ಭಕ್ತರು ಸುಲಭವಾಗಿ ಕನ್ಫರ್ಮ್ ಸೀಟ್ ಪಡೆಯಲು ಅನುಕೂಲವಾಗಲಿದೆ. ವೈಷ್ಣೋದೇವಿಗೆ ಟಿಕೆಟ್ ಬುಕಿಂಗ್ ಮಾಡುವ ಮೊದಲು ರೈಲುಗಳ ವೇಳಾಪಟ್ಟಿ, ಟಿಕೆಟ್ ಲಭ್ಯತೆಯ ಬಗ್ಗೆಯೂ ಪರಿಶೀಲಿಸಬಹುದಾಗಿದೆ.
ರೈಲು ವೇಳಾಪಟ್ಟಿ:
ಏಪ್ರಿಲ್ 21 ರಿಂದ ಬಾಂದ್ರಾ ಟರ್ಮಿನಸ್-ಶ್ರೀ ಮಾತಾ ವೈಷ್ಣೋದೇವಿ ಕತ್ರಾ (Bandra Terminus-Shri Mata Vaishno Devi Katra) ಎಸಿ ಸೂಪರ್‌ಫಾಸ್ಟ್ ವಿಶೇಷ ರೈಲು ಕಾರ್ಯಾಚರಣೆ ಪ್ರಾರಂಭವಾಗಿದೆ. ಈ ರೈಲು ಏಪ್ರಿಲ್ 21 ರಿಂದ ಜೂನ್ 30 ರವರೆಗೆ ಚಲಿಸುತ್ತದೆ. ಬಾಂದ್ರಾ ಟರ್ಮಿನಸ್‌ನಿಂದ ಪ್ರತಿ ಭಾನುವಾರ ರಾತ್ರಿ 09.50 ಕ್ಕೆ ಕಾರ್ಯನಿರ್ವಹಿಸಲಿದೆ. ಮಂಗಳವಾರ ರೈಲು ಮಾತಾ ವೈಷ್ಣೋ ದೇವಿ ಕತ್ರಾ ಧಾಮ್‌ಗೆ ಬೆಳಿಗ್ಗೆ 10 ಗಂಟೆಗೆ ತಲುಪಲಿದೆ.
ಇದನ್ನೂ ಓದಿ- ಇನ್ನು ಬ್ಯಾಂಕ್ ಲೋನ್ ಪಡೆಯಬೇಕಾದರೆ ಈ ಮಾಹಿತಿಯನ್ನು ನೀಡಲೇ ಬೇಕು! ಬ್ಯಾಂಕ್ ಲೋನ್ ನಿಯಮ ಬದಲಿಸಿದ RBI
ಹಿಂದಿರುಗುವಾಗ ಯಾವ ರೈಲಿನಲ್ಲಿ ಪ್ರಯಾಣಿಸಬೇಕು:
ವೈಷ್ಣೋದೇವಿಯಿಂದ ಮುಂಬೈಗೆ ಪ್ರಯಾಣಿಸುವ ಭಕ್ತರಿಗಾಗಿ ನಾಳೆಯಿಂದ ಎಂದರೆ ಏಪ್ರಿಲ್ 23ಋಕ್ನ್ದ ವಿಶೇಷ ರೈಲು ಆರಂಭವಾಗಲಿದೆ. ಇದರ ಹೆಸರು ಶ್ರೀ ಮಾತಾ ವೈಷ್ಣೋ ದೇವಿ ಕತ್ರಾ-ಬಾಂದ್ರಾ ಟರ್ಮಿನಸ್ ಎಸಿ ಸೂಪರ್‌ಫಾಸ್ಟ್ ವಿಶೇಷ ರೈಲು.ಈ ರೈಲು ಪ್ರತಿ ಮಂಗಳವಾರ ರಾತ್ರಿ 09:40ಕ್ಕೆ ವೈಷ್ಣೋದೇವಿಯಿಂದ ಹೊರಡಲಿದ್ದು, ಗುರುವಾರ ಬೆಳಿಗ್ಗೆ 10.10ಕ್ಕೆ ಬಾಂದ್ರಾ ಟರ್ಮಿನಸ್ ತಲುಪಲಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.