ಬೆಂಗಳೂರು:  899 ರೂಪಾಯಿಗಳಿಗೆ ವಿಮಾನದಲ್ಲಿ ಹಾರಾಟ ಮಾಡಬಹುದಾದ ಅವಕಾಶ ಇದೀಗ ಒದಗಿ ಬಂದಿದೆ. ಪ್ರಖ್ಯಾತ ವಿಮಾನಯಾನ ಸಂಸ್ಥೆ ಸ್ಪೈಸ್ ಜೆಟ್ ಈ ಆಫರ್ ಕೊಟ್ಟಿದೆ. 


COMMERCIAL BREAK
SCROLL TO CONTINUE READING

ಆಫರ್ ನಲ್ಲಿ ಏನಿದೆ..?
ಈ ಸೇಲ್ ನ ಹೆಸರು Book Befikar Sale’. ಜನವರಿ 13 ರಂದು ಈ ಸೇಲ್ ಶುರುವಾಗಿದೆ. ಜ. 17ರ ತನಕ  ಈ ಮುಂದುವರಿಯಲಿದೆ. ಈ ಸೇಲ್ ಆಫರ್ (offer) ಪ್ರಕಾರ 899 ರೂಪಾಯಿಗಳಲ್ಲಿ ವಿಮಾನ ಯಾತ್ರೆ ಮಾಡಬಹುದಾಗಿದೆ. ಈ ಸೇಲ್ ನ ಜನಪ್ರಿಯ ಮಾರ್ಗಗಳೆಂದರೆ,  ಜಮ್ಮು- ಶ್ರೀನಗರ(Jammu-Srinagar), ಶ್ರೀನಗರ- ಜಮ್ಮು, ಬೆಂಗಳೂರು-ಚೆನ್ನೈ( Bengaluru-Chennai), ಚೆನ್ನೈ ಬೆಂಗಳೂರು, ಹೈದರಾಬಾದ್ – ಬೆಳಗಾವಿ (Hyderabad-Belagavi), ಬೆಳಗಾವಿ ಹೈದರಾಬಾದ್, ಅಹಮದಾಬಾದ್ – ಜೈಸಲ್ಮೇರ್ ಮತ್ತು ಜೈಸಲ್ಮೇರ್ – ಅಹಮದಾಬಾದ್ ಆಗಿವೆ. 


ಇದನ್ನೂಓದಿ : Share Market Update: ಇದು ದುಡ್ಡಿನ ವಿಷ್ಯ ಸ್ವಾಮೀ... ಐತಿಹಾಸಿಕ ಗಡಿಯತ್ತ Sensex ದಾಪುಗಾಲು


ಈ ಐದು ದಿನಗಳ ಸ್ಪೈಸ್ ಜೆಟ್ (SpiceJet) sale ಜನವರಿ 17ರ ಮಧ್ಯರಾತ್ರಿ ಕೊನೆಗೊಳ್ಳಲಿದೆ. ಈ ಅವಧಿಯಲ್ಲಿ ಏಪ್ರಿಲ್ 1 ರಿಂದ ಸೆಪ್ಟೆಂಬರ್ 30ರ ತನಕ ಪ್ರಯಾಣಿಸುವ ಟಿಕೆಟ್ ಕಾಯ್ದಿರಿಸಬಹುದಾಗಿದೆ (Ticket Reservation).  899 ರೂಪಾಯಿಗಳಿಗೆ ಟಿಕೆಟ್ ಲಭ್ಯವಾಗಲಿದೆ. ಇಷ್ಟೇ ಅಲ್ಲ ಟಿಕೆಟ್ ನ ಬೇಸ್ ಮೌಲ್ಯಕ್ಕೆ ಸಮಾನಾದ ವಿಶೇಷ ವೋಚರ್ ಒಂದನ್ನೂ ಕೂಡಾ ಸ್ಪೈಸ್ ಜೆಟ್ ನೀಡುತ್ತಿದೆ. ಈ ವಿಶೇಷ ವೋಚರ್ ಫೆ. 21 ರ ತನಕ ಕ್ಲೈಮ್ ಮಾಡಬಹುದಾಗಿದೆ. 


ಬುಕ್ಕಿಂಗ್ ರದ್ದು ಅಥವಾ ಬದಲಾವಣೆ ಮಾಡುವುದಿದ್ದರೆ ಒನ್ ಟೈಂ ಕ್ಯಾನ್ಸಲೇಶನ್ ಫೀ ರದ್ದು ಮಾಡುವ ಆಫರ್ ಕೂಡಾ ಇದರಲ್ಲಿ ಲಭ್ಯವಿದೆ. ಮೊದಲು ಬಂದವರಿಗೆ ಮೊದಲ ಆದ್ಯತೆ ಮಾನದಂಡದಲ್ಲಿ ಟಿಕೆಟ್ ಹಂಚಿಕೆಯಾಗಲಿದೆ.  spicejet.com, ಸ್ಪೈಸ್ ಜೆಟ್ ಆಪ್, SpiceJet Call Centre ಗಳಲ್ಲಿ ಟಿಕೆಟ್ ಬುಕ್ ಮಾಡಬಹುದಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.