SSY: ನಿತ್ಯ ರೂ.100 ಉಳಿತಾಯ ಮಾಡಿ 15 ಲಕ್ಷ ರೂ. ಪಡೆಯಿರಿ, ಏನಿದು ಸರ್ಕಾರದ ಸ್ಕೀಮ್ ?
SSY: ಸುಕನ್ಯಾ ಸಮೃದ್ಧಿ ಯೋಜನೆ ಹೆಣ್ಣುಮಕ್ಕಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಸರ್ಕಾರಿ (Government Saving Scheme) ಯೋಜನೆಯಾಗಿದೆ.
ನವದೆಹಲಿ: SSY - ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Yojana) ಹೆಣ್ಣುಮಕ್ಕಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಒಂದು ಸರ್ಕಾರಿ ಯೋಜನೆಯಾಗಿದೆ. ಒಂದು ವೇಳೆ ನಿಮಗೂ ಹೆಚ್ಚು ಮಗು ಇದ್ದರೆ, ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ನೀವು ನಿಮ್ಮ ಮಗಳ (Fund For Girl Chield) ಉನ್ನತ ಶಿಕ್ಷಣ ಮತ್ತು ವಿವಾಹ ವೆಚ್ಚಗಳನ್ನು ನಿರ್ವಹಿಸಬಹುದು.
ನಿತ್ಯ 100 ರೂ. ಹೂಡಿಕೆ ಮಾಡಿ 15 ಲಕ್ಷ ರೂ.ಪಡೆಯಬಹುದು
ಸುಕನ್ಯಾ ಸಮೃದ್ಧಿ ಯೋಜನೆ ದೀರ್ಘಾವಧಿಯ ಯೋಜನೆಯಾಗಿದೆ, ಇದರಲ್ಲಿ ನಿಮ್ಮ ಮಗಳಿಗೆ 21 ವರ್ಷದವಳಿದ್ದಾಗ ಎಷ್ಟು ಹಣ ಬೇಕು ಎಂದು ನೀವು ನಿರ್ಧರಿಸಬೇಕು. ನಿಮಗೆ 15 ಲಕ್ಷ ರೂಪಾಯಿ ಬೇಕು ಎಂದು ಭಾವಿಸೋಣ, ಇದಕ್ಕಾಗಿ ನೀವು ಬಹಳ ದೊಡ್ಡ ಮೊತ್ತವನ್ನು ಹೂಡಿಕೆ ಮಾಡುವ ಅಗತ್ಯವಿಲ್ಲ, ನೀವು ಪ್ರತಿದಿನ 100 ರೂಪಾಯಿಗಳನ್ನು ಮಾತ್ರ ಉಳಿಸಬೇಕಾಗಿದೆ, ಇದು ಮುಂಬರುವ ಸಮಯದಲ್ಲಿ 15 ಲಕ್ಷ ರೂಪಾಯಿಗಳಾಗಲಿದೆ. ಈ ಸಂಪೂರ್ಣ ಲೆಕ್ಕಾಚಾರ ಹೇಗೆ ಎಂಬುದನ್ನು ತಿಳಿಯುವುದಕ್ಕು ಮುನ್ನ ಈ ಯೋಜನೆಯನ್ನು ಚೆನ್ನಾಗಿ ಮೊದಲು ಅರ್ಥಮಾಡಿಕೊಳ್ಳಿ.
ಏನಿದು ಸುಕನ್ಯಾ ಸಮೃದ್ಧಿ ಯೋಜನೆ?
ಹೆಣ್ಣುಮಕ್ಕಳ ಭವಿಷ್ಯವನ್ನು ಸುಧಾರಿಸುವ ಸಲುವಾಗಿ ಇದು ಸರ್ಕಾರದ ಜನಪ್ರಿಯ ಯೋಜನೆಯಾಗಿದೆ. 10 ವರ್ಷ ವಯಸ್ಸಿನ ಮಗಳ ಖಾತೆಯನ್ನು ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ತೆರೆಯಬಹುದು. ಇದರಲ್ಲಿ ನೀವು ವಾರ್ಷಿಕವಾಗಿ ಕನಿಷ್ಠ 250 ರೂ ಮತ್ತು ಗರಿಷ್ಠ 1.5 ಲಕ್ಷ ರೂ.ವರೆಗೆ ಹಣ ಹೂಡಿಕೆ (Investment) ಮಾಡಬಹುದು. ಮಗಳಿಗೆ 21 ವರ್ಷ ತುಂಬಿದಾಗ ಈ ಯೋಜನೆ ಮ್ಯಾಚ್ಯೂರ್ ಆಗುತ್ತದೆ. ಆದರೆ, ಈ ಯೋಜನೆಯಲ್ಲಿನ ನಿಮ್ಮ ಹೂಡಿಕೆಯು ಮಗಳಿಗೆ ಕನಿಷ್ಠ 18 ವರ್ಷ ತುಂಬುವವರೆಗೆ ಲಾಕ್ ಆಗಲಿದೆ. 18 ವರ್ಷಗಳ ನಂತರವೂ, ಅವರು ಈ ಯೋಜನೆಯಿಂದ (Small Saving Scheme) ಒಟ್ಟು ಮೊತ್ತದ ಶೇ.50 ರಷ್ಟು ಹಣವನ್ನು ಹಿಂಪಡೆಯಬಹುದು. ಅವಳು ಪದವಿ ಅಥವಾ ಹೆಚ್ಚಿನ ಅಧ್ಯಯನಕ್ಕಾಗಿ ಅದನ್ನು ನೀವು ಬಳಸಬಹುದು. ಇದರ ನಂತರ, ಮಗಳಿಗೆ 21 ವರ್ಷ ತುಂಬಿದ ಬಳಿಕ ಮಾತ್ರ ನೀವು ಈ ಯೋಜನೆಯಿಂದ ಸಂಪೂರ್ಣ ಹಣ ಹಿಂಪಡೆಯಬಹುದು.
15 ವರ್ಷಗಳವರೆಗೆ ಮಾತ್ರ ಇದರಲ್ಲಿ ನೀವು ಹೂಡಿಕೆ ಮಾಡಬಹುದು
ಈ ಯೋಜನೆಯ ವಿಶೇಷತೆ ಎಂದರೆ ಇದರಲ್ಲಿ ನೀವು ಪೂರ್ಣ 21 ವರ್ಷಗಳವರೆಗೆ ಹಣವನ್ನು ಠೇವಣಿ ಮಾಡಬೇಕಾಗಿಲ್ಲ, ಖಾತೆ ತೆರೆಯುವುದರಿಂದ, ನೀವು ಹಣವನ್ನು ಕೇವಲ 15 ವರ್ಷಗಳವರೆಗೆ ಠೇವಣಿ ಮಾಡಬಹುದು, ಆದರೆ ಮಗಳು 21 ವಯಸ್ಸಿನವರೆಗೆ ಆ ಹಣದ ಮೇಲೆ ನಿಮಗೆ ಬಡ್ಡಿ ಸಿಗಲಿದೆ. ಪ್ರಸ್ತುತ, ಸರ್ಕಾರವು ವಾರ್ಷಿಕ ಶೇ.7.6ರಷ್ಟು ಬಡ್ಡಿಯನ್ನು ಪಾವತಿಸುತ್ತಿದೆ. ಈ ಯೋಜನೆಯನ್ನು ಮನೆಯ ಯಾವುದೇ ಇಬ್ಬರು ಹೆಣ್ಣುಮಕ್ಕಳಿಗಾಗಿ ತೆರೆಯಬಹುದು. ಅವಳಿ ಇದ್ದರೆ, 3 ಹೆಣ್ಣುಮಕ್ಕಳೂ ಕೂಡ ಈ ಯೋಜನೆಯ ಲಾಭವನ್ನು ಪಡೆಯಬಹುದು.
ಹೂಡಿಕೆಗಾಗಿ ಹೇಗೆ ಸಿದ್ಧತೆ ಮಾಡಿಕೊಳ್ಳಬೇಕು?
ಮೊದಲನೆಯದಾಗಿ, ನಿಮ್ಮ ಮಗಳಿಗೆ 21 ವಯಸ್ಸಿನಲ್ಲಿ ಎಷ್ಟು ಹಣ ಬೇಕು ಎಂದು ನೀವು ನಿರ್ಧರಿಸಬೇಕು. ನೀವು ಎಷ್ಟು ಬೇಗನೆ ಈ ಯೋಜನೆಯನ್ನು ಪ್ರಾರಂಭಿಸುವಿರೋ ಅಷ್ಟೇ ಬೇಗ ಮ್ಯಾಚುರಿಟಿ( ಅಂದರೆ ನಿಮ್ಮ ಮಗಳ 21ನೇ ವಯಸ್ಸಿನವರೆಗೆ) ವೇಳೆ ಹೆಚ್ಚಿನ ಮೊತ್ತವನ್ನು ಪಡೆಯಬಹುದು.
ಹೂಡಿಕೆ ಯಾವಾಗ ಆರಂಭಿಸಬೇಕು?
ಒಂದು ವೇಳೆ ನಿಮ್ಮ ಮಗಳಿಗೆ 10 ವರ್ಷ ವಯಸ್ಸಾಗಿದ್ದರೆ, ಮತ್ತು ನೀವು ಇಂದೇ ಹೂಡಿಕೆ ಮಾಡಲು ಪ್ರಾರಂಭಿಸಿದರೆ, ನೀವು ಕೇವಲ 11 ವರ್ಷಗಳವರೆಗೆ ಮಾತ್ರ ಹೂಡಿಕೆ ಮಾಡಲು ಸಾಧ್ಯವಾಗುತ್ತದೆ. ಅದೇ ರೀತಿ ನೀವು 5 ವರ್ಷದ ಮಗಳನ್ನು ಹೊಂದಿದ್ದರೆ ಮತ್ತು ನೀವು ಹೂಡಿಕೆ ಮಾಡಲು ಪ್ರಾರಂಭಿಸಿದರೆ, ನೀವೂ 16 ವರ್ಷಗಳವರೆಗೆ ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಬಹುದು. ಇದರಿಂದ ನಿಮ್ಮ ಮ್ಯಾಚುರಿಟಿ ಮೊತ್ತ ಕೂಡ ಹೆಚ್ಚಾಗಲಿದೆ. ಒಂದು ವೇಳೆ 2021 ರಲ್ಲಿ ನಿಮ್ಮ ಮಗಳಿಗೆ ಒಂದು ವರ್ಷವಾಗಿದ್ದರೆ ಮತ್ತು ನೀವು ಹೂಡಿಕೆ ಆರಂಭಿಸಿದರೆ, 2042ರಲ್ಲಿ ನಿಮ್ಮ ಹೂಡಿಕೆ ಮ್ಯಾಚುರ್ ಆಗಲಿದೆ ಹಾಗೂ ನಿಮಗೆ ಈ ಯೋಜನೆಯ ಮ್ಯಾಚುರಿಟಿಯ ವೇಳೆ ಹೆಚ್ಚುವರಿ ಲಾಭ ಸಿಗಲಿದೆ.
ನಿತ್ಯ 100 ರೂ. ಹೂಡಿಕೆಯಿಂದ 15 ಲಕ್ಷ ರೂ. ಹೇಗೆ ಸಿಗಲಿದೆ?
1. 2021ರಲ್ಲಿ ನೀವು ಹೂಡಿಕೆಯನ್ನು ಆರಂಭಿಸಿದ್ದೀರಿ ಎಂದಿಟ್ಟುಕೊಳ್ಳೋಣ ಹಾಗೂ ನಿಮ್ಮ ಮಗಳ ವಯಸ್ಸು 1 ಆಗಿದೆ.
2. ನಿತ್ಯ ರೂ.100 ಉಳಿತಾಯ ಮಾಡಿದರೆ, ನಿಮ್ಮ ತಿಂಗಳ ಉಳಿತಾಯ ರೂ.3000 ಆಗಲಿದೆ.
3. ರೂ.3000 ಗಳ ನಿಮ್ಮ ಮಾಸಿಕ ಹೂಡಿಕೆ ವಾರ್ಷಿಕವಾಗಿ 36000 ಆಗಲಿದೆ.
4. ಈ ನಿಮ್ಮ ವಾರ್ಷಿಕ ಹೂಡಿಕೆ ನೀವು 15 ವರ್ಷಗಳವರೆಗೆ ನಿರಂತರವಾಗಿ ಮಾಡುವಿರಿ.
5. 15 ವರ್ಷಗಳಲ್ಲಿ ನಿಮ್ಮ ಒಟ್ಟು ಹೂಡಿಕೆ 5.4 ಲಕ್ಷ ರೂ. ಆಗಲಿದೆ.
6. ಶೇ.7.6 ರ ಲೆಕ್ಕಾಚಾರದಲ್ಲಿ ನಿಮಗೆ ಸಿಗುವ ಒಟ್ಟು ಬಡ್ಡಿ 9,87,637ರೂ. ಆಗಲಿದೆ.
7. 2042ರಲ್ಲಿ ನಿಮ್ಮ ಮಗಳು 21 ವಯಸ್ಸಿನವಳಾದಾಗ ನಿಮ್ಮ ಯೋಜನೆ ಕೂಡ ಮ್ಯಾಚುರ್ ಆಗಲಿದೆ. ಆಗ ನಿಮ್ಮ ಒಟ್ಟು ಮ್ಯಾಚ್ಯೂರಿಟಿ ಮೊತ್ತ ರೂ. 15,27,637ಗಳಾಗಲಿದೆ.
ಇದನ್ನೂ ಓದಿ-ನೀವೂ Syndicate Bank ಖಾತೆದಾರರಾಗಿದ್ದರೆ ಜೂನ್ 30ರೊಳಗೆ ಪೂರೈಸಿಕೊಳ್ಳಿ ಈ ಕೆಲಸ
ಈ ಕ್ಯಾಲ್ಕುಲೇಶೇನ್ ನೀವು ನೆನಪಿನಲ್ಲಿಟ್ಟುಕೊಳ್ಳಬೇಕು. ಕೇವಲ ರೂ.100 ಹೂಡಿಕೆ ಮಾಡುವ ಮೂಲಕ ನೀವು ನಿಮ್ಮ ಮಗಳ ಭವಿಷ್ಯವನ್ನು ಸುಧಾರಿಸಬಹುದು. ಪ್ರತಿಯೊಂದು ನಿವೇಶಕ್ಕೆ ಒಂದೇ ಮಂತ್ರ ಇರುತ್ತದೆ. ಅದೇನೆಂದರೆ ಬೇಗ ಆರಂಭ. ಈ ಯೋಜನೆಯಲ್ಲಿಯೂ ಕೂಡ ನೀವು ಎಷ್ಟು ಬೇಗನೆ ಹೂಡಿಕೆ ಆರಂಭಿಸುವಿರೋ, ನಿಮಗೆ ಅಷ್ಟೇ ಲಾಭ ಕೂಡ ಸಿಗಲಿದೆ.
ಇದನ್ನೂ ಓದಿ-Bank Alert! ಮೇ 31ರ ಮೊದಲು ನಿಮ್ಮ ಬ್ಯಾಂಕ್ ಖಾತೆಯಿಂದ ರೂ.12 ಕಡಿತವಾಗಿ, 2 ಲಕ್ಷ ರೂ.ಗಳ ಲಾಭ ನಿಮ್ಮದಾಗಲಿದೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.