ನವದೆಹಲಿ: ಹೊಸ ವರ್ಷದಲ್ಲಿ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳಲ್ಲಿ ಭಾರಿ ಬದಲಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಸರ್ಕಾರದ ಪ್ರಕಟಣೆಯ ಪ್ರಕಾರ, 3 ವರ್ಷಗಳ ಉಳಿತಾಯ ಯೋಜನೆಯ ಬಡ್ಡಿ ದರವನ್ನು 0.1% ಹೆಚ್ಚಿಸಲಾಗಿದೆ. ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿ ದರವನ್ನು ಶೇ.0.2ರಷ್ಟು ಹೆಚ್ಚಿಸಲಾಗಿದೆ. ಈಗ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ 8.2% ಬಡ್ಡಿ ಸಿಗಲಿದೆ.(Business News In Kannada)


COMMERCIAL BREAK
SCROLL TO CONTINUE READING

ವಿಶ್ವದಲ್ಲಿ ಭಾರತದ ಪ್ರಾಬಲ್ಯ ಹೆಚ್ಚುತ್ತಿದೆ
ಸರ್ಕಾರ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, ಆರ್ಥಿಕತೆಯ ವಿಷಯದಲ್ಲಿ ಭಾರತದ ಉಜ್ವಲ ಸಾಧನೆ ಮುಂದುವರಿದಿದೆ. ಕಳೆದ ವರ್ಷದ ಶೇ. 5.7 ರಷ್ಟು ಬೆಳವಣಿಗೆ ದರಕ್ಕೆ ಹೋಲಿಸಿದರೆ, ಈ ವರ್ಷ ಆರ್ಥಿಕತೆಯ 8 ವಲಯಗಳಲ್ಲಿ ಶೇ.7.8 ಬೆಳವಣಿಗೆ ದರ ದಾಖಲಾಗಿದೆ. ಇದು ಭಾರತದ ಬೆಳೆಯುತ್ತಿರುವ ಆತ್ಮ ವಿಶ್ವಾಸ ಮತ್ತು ಅದರ ಆರ್ಥಿಕತೆಯ ವಿಸ್ತರಣೆಯನ್ನು ತೋರಿಸುತ್ತದೆ.


ಇದನ್ನೂ ಓದಿ-ಮ್ಯೂಚವಲ್ ಫಂಡ್ ನಲ್ಲಿ ಹಣ ಹೂಡಿಕೆಗೂ ಮುನ್ನ ಈ ವಿಷಯಗಳು ನಿಮಗೆ ತಿಳಿದಿರಲಿ!


ಸಿಮೆಂಟ್ ಮತ್ತು ಕಚ್ಚಾ ತೈಲ ಹೊರತುಪಡಿಸಿ ಎಲ್ಲಾ ಹೆಚ್ಚಳ.
ಶುಕ್ರವಾರ ಬಿಡುಗಡೆಯಾದ ಅಧಿಕೃತ ಅಂಕಿಅಂಶಗಳ ಪ್ರಕಾರ, ಎಂಟು ಪ್ರಮುಖ ಮೂಲಸೌಕರ್ಯ ವಲಯಗಳ ಉತ್ಪಾದನೆಯು ನವೆಂಬರ್ 2023 ರಲ್ಲಿ ಶೇ.7.8 ಪರ್ಸೆಂಟ್‌ನಷ್ಟು ಬೆಳೆದಿದೆ, ಇದು ವರ್ಷದ ಹಿಂದಿನ ಅವಧಿಯಲ್ಲಿನ ಶೇ.5.7 ಬೆಳವಣಿಗೆಗೆ ಹೋಲಿಸಿದರೆ. ಈ ತಿಂಗಳಲ್ಲಿ ಕಚ್ಚಾ ತೈಲ ಮತ್ತು ಸಿಮೆಂಟ್ ಹೊರತುಪಡಿಸಿ ಎಲ್ಲಾ ವಲಯಗಳಲ್ಲಿ ಉತ್ತಮ ಉತ್ಪಾದನಾ ಬೆಳವಣಿಗೆ ದಾಖಲಾಗಿದೆ.


ಇದನ್ನೂ ಓದಿ-ಡಿಸೆಂಬರ್ 31 ಸಮೀಪಿಸುತ್ತಿದೆ, ಇಂದೇ ಈ ಐದು ಕೆಲಸಗಳನ್ನು ಪೂರ್ಣಗೊಳಿಸಿ... ಇಲ್ದಿದ್ರೆ..!


ಕೋರ್ ಸೇಕ್ಟರ್ ಗಳ ಉತ್ತಮ ಪ್ರತಿಕ್ರಿಯೆ
ಈ ವರ್ಷದ ಅಕ್ಟೋಬರ್‌ನಲ್ಲಿ ಕೋರ್ ಸೆಕ್ಟರ್‌ಗಳ (ಕಲ್ಲಿದ್ದಲು, ಕಚ್ಚಾ ತೈಲ, ನೈಸರ್ಗಿಕ ಅನಿಲ, ರಿಫೈನರಿ ಉತ್ಪನ್ನಗಳು, ರಸಗೊಬ್ಬರಗಳು, ಉಕ್ಕು, ಸಿಮೆಂಟ್ ಮತ್ತು ವಿದ್ಯುತ್) ಬೆಳವಣಿಗೆಯು ಶೇ. 12 ರಷ್ಟಿತ್ತು. ಕಲ್ಲಿದ್ದಲು ಮತ್ತು ರಿಫೈನರಿ ಉತ್ಪನ್ನಗಳ ಉತ್ಪಾದನೆಯಲ್ಲಿ ಎರಡಂಕಿಯ ಬೆಳವಣಿಗೆ ದಾಖಲಾಗಿದೆ. ಎಂಟು ವಲಯಗಳ ಉತ್ಪಾದನೆಯ ಬೆಳವಣಿಗೆಯುಹಿಂದಿನ ವರ್ಷದ ಬೆಳವಣಿಗೆ ಶೇ. 8.1ಕ್ಕೆ ಹೊಲಿಸಿದರೆ, 2023-24 ರ ಏಪ್ರಿಲ್-ನವೆಂಬರ್‌ನಲ್ಲಿ ಶೇ. 8.6 ಗಳಷ್ಟಿತ್ತು. 


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ