ನವದೆಹಲಿ : ನೀವು ಯಾವುದೇ ವ್ಯಾಪಾರ ಆರಂಭಿಸುವ ಬಗ್ಗೆ ಯೋಜನೆ ಹಾಕುತ್ತಿದ್ದರೆ,   ಈ ಎರಡು ನಿಮಗಾಗಿ ಎರಡು ಫ್ರಾಂಚೈಸಿಗಳ (franchise) ಮೂಲಕ ಆರಂಭಿಸಬಹುದು. ಇದರಿಂದ ಸಾಕಷ್ಟು ಲಾಭ ಗಳಿಸುವುದು ಸಾಧ್ಯವಾಗುತ್ತದೆ. ನಷ್ಟದ ಸಾಧ್ಯತೆಗಳು ತೀರಾ ಕಡಿಮೆ. ಈ ಎರಡೂ ವ್ಯವಹಾರ ಕಲ್ಪನೆಗಳು ಸರ್ಕಾರಿ ಫ್ರಾಂಚೈಸಿಗಳಿಗೆ ಸಂಬಂಧಿಸಿವೆ. 


COMMERCIAL BREAK
SCROLL TO CONTINUE READING

1. ಆಧಾರ್ ಕಾರ್ಡ್ ಫ್ರ್ಯಾಂಚೈಸಿ (Aadhar card Franchise) : 
ದೇಶದಲ್ಲಿ ವಾಸಿಸುವ ಪ್ರತಿಯೊಬ್ಬರಿಗೂ ಆಧಾರ್ ಕಾರ್ಡ್ (Aadhaar card) ಅತ್ಯಗತ್ಯ ದಾಖಲೆಯಾಗಿದೆ. ಈ ಕಾರಣದಿಂದಾಗಿ ಇದಕ್ಕೆ ಸಾಕಷ್ಟು ಬೇಡಿಕೆ ಇದೆ. ಹಾಗಾಗಿ ನೀವು ಆಧಾರ್ ಕಾರ್ಡ್ ಫ್ರ್ಯಾಂಚೈಸಿ  (Aadhaar Card Franchise) ತೆಗೆದುಕೊಳ್ಳಬಹುದು. ಇದರೊಂದಿಗೆ ನೀವು ಉತ್ತಮ ಹಣವನ್ನು ಗಳಿಸುವುದು ಸಾಧ್ಯವಾಗುತ್ತದೆ. ಆಧಾರ್ ಕಾರ್ಡ್ ಫ್ರಾಂಚೈಸಿ ಆರಂಭಿಸಬೇಕಾದರೆ, ಮೊದಲು ಯುಐಡಿಎಐ (UIDAI) ನಡೆಸಿದ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಇದರ ನಂತರ ಸೇವಾ ಕೇಂದ್ರ ತೆರೆಯಲು ಪರವಾನಗಿ ನೀಡಲಾಗುತ್ತದೆ. ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ, ನೀವು ಆಧಾರ್ ದಾಖಲಾತಿ ಸಂಖ್ಯೆ ಮತ್ತು ಬಯೋಮೆಟ್ರಿಕ್ ಪರಿಶೀಲನೆಯನ್ನು ಮಾಡಬೇಕಾಗುತ್ತದೆ. ಇದರ ನಂತರ, ಸಾಮಾನ್ಯ ಸೇವಾ ಕೇಂದ್ರದಿಂದ ನೋಂದಣಿಯನ್ನು ಮಾಡಬೇಕಾಗುತ್ತದೆ.


ಇದನ್ನೂ ಓದಿ : New Wage Code: ವೇತನ ಮತ್ತು ರಜಾದಿನಗಳಿಗೆ ಸಂಬಂಧಿಸಿದ ಬದಲಾವಣೆಗಳು ಅಕ್ಟೋಬರ್ 1 ರಿಂದ ಅನ್ವಯ, ನಿಮ್ಮ ಮೇಲಾಗುವ ಪರಿಣಾಮ ಏನು ಗೊತ್ತಾ?


ಅರ್ಜಿ ಸಲ್ಲಿಸುವುದು ಹೇಗೆ?
ಆಧಾರ್ ಫ್ರಾಂಚೈಸಿ ಪರವಾನಗಿ ಪಡೆಯಲು, ನೀವು NSEIT ನ ಅಧಿಕೃತ ವೆಬ್‌ಸೈಟ್‌ https://uidai.nseitexams.com/UIDAI/LoginAction_input.action .ಗೆ ಭೇಟಿ ನೀಡಬೇಕು 


2. ಪೋಸ್ಟ್ ಆಫೀಸ್ ಫ್ರ್ಯಾಂಚೈಸಿ :
ಅಂಚೆ ಕಚೇರಿಯ ಫ್ರ್ಯಾಂಚೈಸಿಯನ್ನು (Post office Franchise)  ಭಾರತೀಯ ಅಂಚೆ ಮೂಲಕ ನೀಡಲಾಗುತ್ತಿದೆ. ಸರ್ಕಾರಿ ಫ್ರ್ಯಾಂಚೈಸಿ ತೆಗೆದುಕೊಳ್ಳಲು ಬಯಸುವವರಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ. ಯಾರು ಬೇಕಾದರೂ ಈ ಫ್ರ್ಯಾಂಚೈಸಿ ತೆಗೆದುಕೊಳ್ಳಬಹುದು. ಈ ಫ್ರಾಂಚೈಸಿ  ತೆಗೆದುಕೊಳ್ಳಲು, ನೀವು ಕೇವಲ 5000 ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ಫ್ರ್ಯಾಂಚೈಸಿ ಪಡೆದ ನಂತರ, ನೀವು ಕಮಿಷನ್ ಮೂಲಕ ಗಳಿಸಬಹುದು. ಎರಡು ರೀತಿಯ ಫ್ರಾಂಚೈಸಿಗಳನ್ನು ಪೋಸ್ಟ್ ಆಫೀಸ್ (Post office) ನೀಡುತ್ತದೆ. ಮೊದಲನೆಯದ್ದು, ಫ್ರಾಂಚೈಸಿ ಔಟ್ಲೆಟ್ ಮತ್ತು ಎರಡನೆಯದು ಪೋಸ್ಟಲ್ ಏಜೆಂಟ್ ಫ್ರಾಂಚೈಸಿ.


ಇದನ್ನೂ ಓದಿ : ಈ ಮೂರು ರೀತಿಯಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡಿದರೆ ಸಿಗಲಿದೆ ಭಾರೀ ಲಾಭ..! ನಿಮಗೆ ಸರಿ ಹೊಂದುವ ಆಯ್ಕೆ ಯಾವುದು ತಿಳಿಯಿರಿ


ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೇಗೆ?
ಫ್ರ್ಯಾಂಚೈಸ್‌ಗೆ ಅರ್ಜಿ ಸಲ್ಲಿಸಲು ನೀವು ಡೈರೆಕ್ಟ್ ಇಂಡಿಯಾ ಪೋಸ್ಟ್ ವೆಬ್‌ಸೈಟ್‌ ಗೆ https://www.indiapost.gov.in/VAS/DOP_PDFFiles/Franchise.pdf ಗೆ  ಭೇಟಿ ನೀಡಬಹುದು. ಇದಕ್ಕೆ ಸಂಬಂಧಿಸಿದ ಅಧಿಸೂಚನೆಯನ್ನು ಓದಿ ಫ್ರಾಂಚೈಸಿಗಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ