ಆಧಾರ್ ಅಪ್ಡೇಟ್ ಮಾಡಲು ಹಂತ- ಹಂತದ ಪ್ರಕ್ರಿಯೆ
ಪ್ರಸ್ತುತ, ಭಾರತದ ಪ್ರತಿಯೊಬ್ಬ ನಾಗರೀಕರಿಗೂ ಕೂಡಾ ಆಧಾರ್ ಕಾರ್ಡ್ ಅತ್ಯುತ್ತಮ ದಾಖಲೆಯಾಗಿದೆ. ಮಾತ್ರವಲ್ಲ, ಕಾಲಕಾಲಕ್ಕೆ ಅದನ್ನು ಅಪ್ಡೇಟ್ ಮಾಡುವುದು ಕೂಡ ಬಹಳ ಮುಖ್ಯ.
Aadhaar Update: ಪ್ರತಿಯೊಬ್ಬ ಭಾರತೀಯರಿಗೂ ಕೂಡ ಆಧಾರ್ ಕಾರ್ಡ್ ಅತ್ಯುತ್ತಮ ದಾಖಲೆ ಆಗಿದೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ನಾಗರಿಕರು ತಮ್ಮ ಜನಸಂಖ್ಯಾ ವಿವರಗಳನ್ನು ಇತ್ತೀಚಿನ ಮಾಹಿತಿಯೊಂದಿಗೆ ನವೀಕರಿಸುವಂತೆ ಒತ್ತಾಯಿಸಿದೆ.
ಯುಐಡಿಎಐ ಪ್ರಕಾರ, ಬಳಕೆದಾರರು ದಶಕದ ಹಿಂದೆ ಎಂದರೆ ಹತ್ತು ವರ್ಷಗಳ ಹಿಂದೆ ಆಧಾರ್ ಕಾರ್ಡ್ ಅನ್ನು ಮಾಡಿಸಿದ್ದು, ಮಧ್ಯದಲ್ಲಿ ಅದನ್ನು ನವೀಕರಿಸಿಲ್ಲ ಎಂದಾದರೆ, ನೀವು 14 ಜೂನ್ 2023 ರವರೆಗೆ ನಿಮ್ಮ ಗುರುತಿನ ಪುರಾವೆ ಮತ್ತು ವಿಳಾಸದ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಉಚಿತವಾಗಿ ನವೀಕರಿಸಬಹುದು ಮತ್ತು ಅಪ್‌ಲೋಡ್ ಮಾಡಬಹುದು. ಎಂದರೆ ಉಚಿತವಾಗಿ ಆಧಾರ್ ಅಪ್ಡೇಟ್ ಮಾಡಲು ಇಂದೇ ಕೊನೆ ದಿನವಾಗಿದೆ. ನೀವಿನ್ನೂ ನಿಮ್ಮ ಆಧಾರ್ ಕಾರ್ಡ್ ಅನ್ನು ನವೀಕರಿಸದಿದ್ದರೆ ಇಲ್ಲಿದೆ ಸುಲಭ ಪ್ರಕ್ರಿಯೆ.
ಇದನ್ನೂ ಓದಿ- UPI Payment ಮಾಡುವಾಗ ಈ ವಿಷಯಗಳ ಬಗ್ಗೆ ವಿಶೇಷ ಗಮನಹರಿಸಿ, ಇಲ್ಲದಿದ್ದರೆ ನಷ್ಟ
ನಿಮಗೆಲ್ಲಾ ತಿಳಿದಿರುವಂತೆ ಆನ್‌ಲೈನ್‌ನಲ್ಲಿ https://myaadhaar.uidai.gov.in ಯುಐಡಿಎಐ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ನೀವು ನಿಮ್ಮ ಆಧಾರ್ ಅನ್ನು ಉಚಿತವಾಗಿ ಅಪ್ಡೇಟ್ ಮಾಡಬಹುದು. ಇದಲ್ಲದೆ, ನೀವು ಆಧಾರ್ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ನಿಮ್ಮ ಮಾಹಿತಿಯನ್ನು ನವೀಕರಿಸಲು ಬಯಸಿದರೆ ಅದಕ್ಕಾಗಿ ನಿಗದಿತ 50 ರೂ.ಗಳನ್ನು ಪಾವತಿಸಬೇಕಾಗುತ್ತದೆ.
ಇದನ್ನೂ ಓದಿ- Gold Price: 11,000 ರೂಪಾಯಿ ದುಬಾರಿಯಾದ ಚಿನ್ನ, 10 ಗ್ರಾಂ ಬೆಲೆ ಕೇಳಿದರೆ ಬೆಚ್ಚಿ ಬೀಳುತ್ತೀರಿ!
ಆಧಾರ್ ಅಪ್ಡೇಟ್ ಮಾಡಲು ಹಂತ- ಹಂತದ ಪ್ರಕ್ರಿಯೆ:
ಆಧಾರ್ ನಲ್ಲಿ ಅಪ್‌ಡೇಟ್ ಮಾಡಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಿ:
>> ಹಂತ 1: https://myaadhaar.uidai.gov.in/ ಗೆ ಭೇಟಿ ನೀಡಿ
>> ಹಂತ 2: ಲಾಗಿನ್ ಮಾಡಿ ಮತ್ತು 'ಹೆಸರು/ಲಿಂಗ/ಹುಟ್ಟಿದ ದಿನಾಂಕ ಮತ್ತು ವಿಳಾಸ ನವೀಕರಣ' ಆಯ್ಕೆಮಾಡಿ
>> ಹಂತ 3: 'ಆಧಾರ್ ಆನ್‌ಲೈನ್‌ನಲ್ಲಿ ನವೀಕರಿಸಿ' ಕ್ಲಿಕ್ ಮಾಡಿ
>> ಹಂತ 4: ಜನಸಂಖ್ಯಾ ಆಯ್ಕೆಗಳ ಪಟ್ಟಿಯಿಂದ 'ವಿಳಾಸ' ಆಯ್ಕೆಮಾಡಿ ಮತ್ತು 'ಆಧಾರ್ ಅನ್ನು ನವೀಕರಿಸಲು ಮುಂದುವರಿಯಿರಿ' ಕ್ಲಿಕ್ ಮಾಡಿ
>> ಹಂತ 5: ಸ್ಕ್ಯಾನ್ ಮಾಡಿದ ಪ್ರತಿಯನ್ನು ಅಪ್‌ಲೋಡ್ ಮಾಡಿ ಮತ್ತು ಅಗತ್ಯವಿರುವ ಜನಸಂಖ್ಯಾ ಮಾಹಿತಿಯನ್ನು ನಮೂದಿಸಿ.
>> ಹಂತ 6: ರೂ 50 ಪಾವತಿಸಿ. (ಜೂನ್ 15 ರವರೆಗೆ ಅಗತ್ಯವಿಲ್ಲ).
>> ಹಂತ 7: ಸೇವಾ ವಿನಂತಿ ಸಂಖ್ಯೆ (SRN) ಅನ್ನು ರಚಿಸಲಾಗುತ್ತದೆ. ನಂತರ ಸ್ಥಿತಿಯನ್ನು ಟ್ರ್ಯಾಕ್ ಮಾಡಲು ಅದನ್ನು ಸೇವ್ ಮಾಡಿ. ಆಂತರಿಕ ಗುಣಮಟ್ಟದ ಪರಿಶೀಲನೆಯ ಪೂರ್ಣಗೊಂಡ ನಂತರ, ನೀವು ಸಂದೇಶವನ್ನು ಸ್ವೀಕರಿಸುತ್ತೀರಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ