Voter ID Card Online Correction : ಮತದಾರರ ಗುರುತಿನ ಚೀಟಿಯು ದೇಶದಲ್ಲಿ ಮತ ಚಲಾಯಿಸಲು ಅಗತ್ಯವಾಗಿ ಬೇಕಾಗಿರುವ ದಾಖಲೆಯಾಗಿದೆ.ಇದರಲ್ಲಿ ಯಾವುದೇ ರೀತಿಯ ಸಮಸ್ಯೆ ಉಂಟಾದರೂ ಮತ ಚಲಾಯಿಸಲು ಸಾಧ್ಯವಾಗುವುದಿಲ್ಲ.ಅನೇಕ ಬಾರಿ ಜನರು ವೋಟರ್ ಐಡಿ ಮಾಡಿಸಿಕೊಂಡಾಗ, ಅವರ ಹೆಸರು ಕಾರ್ಡ್‌ನಲ್ಲಿ ತಪ್ಪಾಗಿ ನಮೂದಾಗುತ್ತದೆ. ಇದರ ಜೊತೆಗೆ ಜನ್ಮ ದಿನಾಂಕ ಮತ್ತು ವಿಳಾಸವೂ ಹಲವು ಬಾರಿ ತಪ್ಪಾಗಿ ಮುದ್ರಣವಾಗುತ್ತದೆ. ಹೀಗೆ ಮುದ್ರಣದಲ್ಲಿ ಉಂಟಾದ ದೋಷಗಳನ್ನು ಸರಿಪಡಿಸಬೇಕಾಗುತ್ತದೆ. ಈ ಮಾಹಿತಿಯನ್ನು ತಪ್ಪಾಗಿ ನಮೂದಿಸಿದರೆ ಭವಿಷ್ಯದಲ್ಲಿ ಬಹಳಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ನಿಮ್ಮ ವೋಟರ್ ಐಡಿಯಲ್ಲಿ ಕೂಡಾ ಸಮಸ್ಯೆಗಳಾಗಿದ್ದರೆ ಆನ್‌ಲೈನ್ ಪ್ರಕ್ರಿಯೆಯ ಮೂಲಕ ಮನೆಯಲ್ಲೇ ಕುಳಿತು ಅದನ್ನು ತಿದ್ದುಪಡಿ ಮಾಡಿಕೊಳ್ಳಬಹುದು.  


COMMERCIAL BREAK
SCROLL TO CONTINUE READING

ಇದಕ್ಕಾಗಿ ನೀವು ಕೆಲವು ಪ್ರಮುಖ ಹಂತಗಳನ್ನು ಅನುಸರಿಸಬೇಕು:
1. ಮೊದಲನೆಯದಾಗಿ ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್‌ನ (NVSP) ವೆಬ್‌ಸೈಟ್‌ಗೆ ಹೋಗಿ https://voterportal.eci.gov.in/ .
2. ರಿಜಿಸ್ಟರ್ ಮೇಲೆ ಕ್ಲಿಕ್ ಮಾಡಿ.
3. ನಿಮ್ಮ ಆಧಾರ್ ಸಂಖ್ಯೆ, ಹೆಸರು, ಜನ್ಮ ದಿನಾಂಕ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
4. ಪಾಸ್ವರ್ಡ್ ರಚಿಸಿ ಮತ್ತು ಅದನ್ನು ಮತ್ತೊಮ್ಮೆ ಲಗತ್ತಿಸಿ. 
5. ರಿಜಿಸ್ಟರ್ ಮೇಲೆ ಕ್ಲಿಕ್ ಮಾಡಿ.


ನೀವು ನೋಂದಾಯಿಸಿದ ನಂತರ, ಮತದಾರರ ಗುರುತಿನ ಚೀಟಿಯಲ್ಲಿ ತಿದ್ದುಪಡಿಗಾಗಿ ಅರ್ಜಿ ಸಲ್ಲಿಸಬಹುದು.ಇದಕ್ಕಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಿ:


1. ವೋಟರ್ ಐಡಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
2. ಸರಿಯಾದ ಹೆಸರಿನ ಮೇಲೆ ಕ್ಲಿಕ್ ಮಾಡಿ.
3. ನಿಮ್ಮ ಹೆಸರು, ಹುಟ್ಟಿದ ದಿನಾಂಕ, ರಾಜ್ಯ, ಕ್ಷೇತ್ರ ಮತ್ತು ಪ್ರಸ್ತುತ ವಿಳಾಸವನ್ನು ನಮೂದಿಸಿ.
4. ಅಪ್ಲೋಡ್ ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ಹೆಸರನ್ನು ದೃಢೀಕರಿಸುವ ದಾಖಲೆಗಳನ್ನು ಅಪ್ಲೋಡ್ ಮಾಡಿ.
6. ಡಿಕ್ಲರೇಶನ್ ಭರ್ತಿ ಮಾಡಿ ಮತ್ತುಸಬ್ಮಿಟ್ ಮೇಲೆ ಕ್ಲಿಕ್ ಮಾಡಿ.


ಇದನ್ನೂ ಓದಿ : ಚಿನ್ನ ಖರೀದಿ ಅಲ್ಲ, ಅದರತ್ತ ಮುಖ ಮಾಡುವುದೂ ಕಷ್ಟ : ಇಲ್ಲಿ ಚೆಕ್ ಮಾಡಿಕೊಳ್ಳಿ ಇಂದಿನ ದರ


ಹೀಗೆ ಸಲ್ಲಿಸಿದ ನಿಮ್ಮ ಅರ್ಜಿಯನ್ನು ಚುನಾವಣಾ ಆಯೋಗಕ್ಕೆ ಕಳುಹಿಸಲಾಗುವುದು. ಚುನಾವಣಾ ಆಯೋಗವು ನಿಮ್ಮ ಅರ್ಜಿಯನ್ನು ಪರಿಶೀಲಿಸುತ್ತದೆ ಮತ್ತು ನಿಮ್ಮ ಅರ್ಜಿಯು ಸರಿಯಾಗಿ ಕಂಡುಬಂದರೆ, ನಿಮ್ಮ ಹೆಸರನ್ನು ಮತದಾರರ ಗುರುತಿನ ಚೀಟಿಯಲ್ಲಿ  ಅಪ್ಡೇಟ್ ಮಾಡಲಾಗುತ್ತದೆ. 


ಹೆಸರು ತಿದ್ದುಪಡಿಗೆ ಅಗತ್ಯವಾದ ದಾಖಲೆಗಳು : 
ಹೆಸರು ತಿದ್ದುಪಡಿಗಾಗಿ ನಿಮಗೆ ಈ ಕೆಳಗಿನ ದಾಖಲೆಗಳು ಬೇಕಾಗುತ್ತವೆ:
ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾಸ್‌ಪೋರ್ಟ್ ಹೀಗೆ ನಿಮ್ಮ ಹೆಸರನ್ನು ದೃಢೀಕರಿಸುವ ಯಾವುದೇ ಸರ್ಕಾರಿ ದಾಖಲೆ.
ನಿಮ್ಮ ಮತದಾರರ ಗುರುತಿನ ಚೀಟಿ.


ಹೆಸರು ತಿದ್ದುಪಡಿ ಸಮಯ : 
ಹೆಸರು ತಿದ್ದುಪಡಿಯ ಸಮಯವು ನಿಮ್ಮ ಅರ್ಜಿಯ ಪರಿಶೀಲನೆಯ ಸಮಯವನ್ನು ಅವಲಂಬಿಸಿರುತ್ತದೆ. ಸಾಮಾನ್ಯವಾಗಿ, ಹೆಸರು ತಿದ್ದುಪಡಿ ಸಮಯವು 15-30 ದಿನಗಳವರೆಗೆ ಇರುತ್ತದೆ.


ಹೆಸರು ತಿದ್ದುಪಡಿಗಾಗಿ ಶುಲ್ಕ :
ಹೆಸರು ತಿದ್ದುಪಡಿಗೆ ಯಾವುದೇ ಶುಲ್ಕವಿಲ್ಲ.


ಇದನ್ನೂ ಓದಿ : UPI new Rules: ಜನವರಿ 1ರಿಂದ ಜಾರಿಗೆ ಬರಲಿವೆ ಈ ಪ್ರಮುಖ UPI ಬದಲಾವಣೆಗಳು


ಹೆಸರು ತಿದ್ದುಪಡಿಯಲ್ಲಿ ತೊಂದರೆ ಇದೆಯೇ? :
ಹೆಸರು ತಿದ್ದುಪಡಿಯಲ್ಲಿ ನೀವು ಯಾವುದೇ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ನಿಮ್ಮ ಸ್ಥಳೀಯ ಮತದಾರರ ನೋಂದಣಿ ಅಧಿಕಾರಿ (ERO) ಅನ್ನು ನೀವು ಸಂಪರ್ಕಿಸಬಹುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.