ಇನ್ನೂ ಖಾತೆ ಸೇರಿಲ್ಲವೇ PM Kisan ದುಡ್ಡು; ತಕ್ಷಣ ಈ ಕೆಲಸ ಮಾಡಿ
ಪಿಎಂ ಕಿಸಾನ್ ಯೋಜನೆಯ 8ನೇ ಕಂತಿನ 2 ಸಾವಿರ ರೂಪಾಯಿಯನ್ನು ಮೇ 14 ರಂದು 9 ಕೋಟಿ ರೈತರ ಖಾತೆಗಳಿಗೆ ಕಳುಹಿಸಲಾಗಿದೆ. ಆದರೆ ಇನ್ನೂ ಹೆಚ್ಚಿನ ರೈತರ ಖಾತೆಗೆ ಈ ದುಡ್ಡು ಜಮೆಯಾಗಿಲ್ಲ.
ನವದೆಹಲಿ : ಪಿಎಂ ಕಿಸಾನ್ ಯೋಜನೆಯ (PM Kisan Yojana) 8ನೇ ಕಂತಿನ 2 ಸಾವಿರ ರೂಪಾಯಿಯನ್ನು ಮೇ 14 ರಂದು 9 ಕೋಟಿ ರೈತರ ಖಾತೆಗಳಿಗೆ ಕಳುಹಿಸಲಾಗಿದೆ. ಆದರೆ ಇನ್ನೂ ಹೆಚ್ಚಿನ ರೈತರ ಖಾತೆಗೆ ಈ ದುಡ್ಡು ಜಮೆಯಾಗಿಲ್ಲ. ಈ ರೈತರ ಸ್ಟೇಟಸ್ ನಲ್ಲಿ FTO is Generated and Payment confirmation is pending ಎಂಬ ಸಂದೇಶ ಕಾಣುತ್ತದೆ. ಇನ್ನು ಕೆಲ ರೈತರ ಸ್ಟೇಟಸ್ ನಲ್ಲಿ ಈ ಸಂದೇಶ ಕಾಣಿಸುತ್ತಿದ್ದರೂ ಅವರ ಖಾತೆಗೆ ಹಣ ಸಂದಾಯವಾಗಿದೆ ಆದರೆ ಬ್ಯಾಂಕಿನಿಂದ SMS ಸಿಕ್ಕಿಲ್ಲ. ನಿಮ್ಮ ಕಾತೆಗೆ ಹಣ ಜಮಾವಣೆಯಾದ ಬಗ್ಗೆ ಇನ್ನೂ SMS ಬಂದಿಲ್ಲ ಎಂದಾದರೆ ಚಿಂತಿಸಬೇಡಿ. ಆನ್ ಲೈನ್ ನಲ್ಲಿ ನೀವೇ ಅದನ್ನು ಪರಿಶೀಲಿಸಬಹುದು. ಇಲ್ಲಿಯೂ ನಿಖರ ಮಾಹಿತಿ ದೊರೆಯದೇ ಹೋದರೆ, ಸಹಾಯವಾಣಿಗೆ ಕರೆ ಮಾಡುವ ಮೂಲಕ ಮಾಹಿತಿ ಪಡೆದುಕೊಳ್ಳಬಹುದು.
ಇನ್ನೂ ಹಣ ಕ್ರೆಡಿಟ್ ಆಗದಿರಲು ಕಾರಣ :
ಈಗ ಇಲ್ಲಿ ಅರ್ಥಮಾಡಿಕೊಳ್ಳಬೇಕಾದ ವಿಷಯವೆಂದರೆ ನಿಮ್ಮ ಖಾತೆಗೆ ಇನ್ನೂ ಹಣ ಯಾಕೆ ಸಂದಾಯ ಆಗಿಲ್ಲ ಎನ್ನುವುದು. ಒಂದು ವೇಳೆ ಫಲಾನುಭವಿಗಳು ಅಪೂರ್ಣ ದಾಖಲೆಗಳನ್ನು ಸಲ್ಲಿಸಿದ್ದರೆ ಅಥವಾ, ಆಧಾರ್ (Aadhaar) , ಖಾತೆ ಸಂಖ್ಯೆ ಮತ್ತು ಬ್ಯಾಂಕ್ ಖಾತೆ ಸಂಖ್ಯೆಯಲ್ಲಿನ (Bank account number) ತಪ್ಪಿನಿಂದಾಗಿ ಕೆಲ ರೈತರಿಗೆ ಇನ್ನೂ ಹಣ ಕ್ರೆಡಿಟ್ ಆಗಿರಲಿಕ್ಕಿಲ್ಲ. ಒಂದು ವೇಳೆ ಈ ತಪ್ಪುಗಲಾಗಿದ್ದರೆ ಅದನ್ನು ತಕ್ಷಣ ಸರಿಪಡಿಸಿಕೊಳ್ಳಬೇಕಾಗುತ್ತದೆ.
ಇದನ್ನೂ ಓದಿ : LPG Gas Cylinder: ಗ್ಯಾಸ್ ಬುಕ್ಕಿಂಗ್ ಮೇಲೆ 800 ರೂ. ಉಳಿಸಿ, ಕೊಡುಗೆ ಸೀಮಿತ ಅವಧಿಗೆ ಮಾತ್ರ
ಈ ರೀತಿ ಚೆಕ್ ಮಾಡಿ ನಿಮ್ಮ ಸ್ಟೇಟಸ್ :
ನಿಮ್ಮ ಖಾತೆಗೆ ಇನ್ನೂ ಹಣ ಸಮದಾಯ ಆಗಿರದಿದ್ದಲ್ಲಿ, ನಿಮ್ಮ ಸ್ಟೇಟಸ್ ಚೆಕ್ ಮಾಡಲು ಹೀಗೆ ಮಾಡಿ :
1. ಮೊದಲನೆಯದಾಗಿ, ಪಿಎಂ ಕಿಸಾನ್ ಅವರ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ https://pmkisan.gov.in/.
2. ಇಲ್ಲಿ ಬಲಭಾಗದಲ್ಲಿ, 'Farmers Corner' ಆಯ್ಕೆ ಕಾಣುತ್ತದೆ
3. ಇಲ್ಲಿ ‘Beneficiary Status' ಆಯ್ಕೆ ಮೇಲೆ ಕ್ಲಿಕ್ ಮಾಡಿ. ಈಗ ಹೊಸ ಪುಟ ತೆರೆಯುತ್ತದೆ.
4. ಹೊಸ ಪುಟದಲ್ಲಿ, ಆಧಾರ್ ಸಂಖ್ಯೆ (Aadhaar) , ಬ್ಯಾಂಕ್ ಖಾತೆ ಸಂಖ್ಯೆ ಅಥವಾ ಮೊಬೈಲ್ ಸಂಖ್ಯೆ ಆಯ್ಕೆಗಳಲ್ಲಿ ಒಂದನ್ನು ಆಯ್ಕೆ ಮಾಡಿ.
5. ನೀವು ಆಯ್ಕೆ ಮಾಡಿದ option ನ ನಂಬರ್ ಅನ್ನು ಭರ್ತಿ ಮಾಡಿ. ಇದರ ನಂತರ, 'Get Data' ಮೇಲೆ ಕ್ಲಿಕ್ ಮಾಡಿ.
6. ಇಲ್ಲಿ ಕ್ಲಿಕ್ ಮಾಡಿದ ನಂತರ, ನೀವು ಎಲ್ಲಾ ವಹಿವಾಟುಗಳ ಬಗ್ಗೆ ಮಾಹಿತಿ ಸಿಗುತ್ತದೆ. ಅಂದರೆ, ನಿಮ್ಮ ಖಾತೆಗೆ ಕಂತಿನ ಹಣ ಯಾವಾವಗ ಬಂದಿದೆ, ಯಾವ ಬ್ಯಾಂಕ್ ಖಾತೆಗೆ ಹಣ ಕ್ರೆಡಿಟ್ ಆಗಿದೆ ಎಂಬ ವಿವರಗಳು ಸಿಗುತ್ತವೆ.
7. ಪಿಎಂ ಕಿಸಾನ್ ಯೋಜನೆಯ (PM Kisan Yojana) ಎಂಟನೇ ಕಂತಿಗೆ ಸಂಬಂಧಿಸಿದ ಮಾಹಿತಿ ಕೂಡಾ ಇಲ್ಲಿ ಸಿಗಲಿದೆ.
ಇದನ್ನೂ ಓದಿ : PPF, Sukanya Samridhi, NSC ಮೇಲಿನ ಬಡ್ಡಿಯಲ್ಲಿ ಕಡಿತ ; ಜುಲೈ ಒಂದರಿಂದ ಜಾರಿಯಾಗಲಿದೆ ಹೊಸದರ
ನಿಮ್ಮ ಸ್ಟೇಟಸ್ ನ ಎದುರು FTO is generated and Payment confirmation is pending’ ಎಂಬ ಸಂದೇಶ ಕಾಣಿಸುತ್ತಿದ್ದರೆ ಒಣದೆರಡು ದಿನಗಳಲ್ಲಿ ನಿಮ್ಮ ಖಾತೆಗೆ ಹಣ ಕ್ರೆಡಿಟ್ ಆಗುತ್ತದೆ ಎಂದರ್ಥ.
ಇಷ್ಟಾಗಿಯೂ ಇನ್ನೂ ಏನಾದರೂ ದೂರುಗಳಿದ್ದು, ಅದನ್ನು ಬಗೆಹರಿಸಬೇಕೆಂದಿದ್ದರೆ ಈ ನಂಬರ್ ಗೆ ಸಂಪರ್ಕಿಸಬಹುದು.
ಆದಾಗ್ಯೂ, ನೀವು ದೂರು ಅಥವಾ ಪ್ರಶ್ನೆಯನ್ನು ಹೊಂದಿದ್ದರೆ, ನಿಮ್ಮನ್ನು ಈ ಸಂಖ್ಯೆಗಳಲ್ಲಿ ಸಂಪರ್ಕಿಸಬಹುದು.
ಪಿಎಂ ಕಿಸಾನ್ ಟೋಲ್ ಫ್ರೀ ಸಂಖ್ಯೆ: 18001155266
ಪಿಎಂ ಕಿಸಾನ್ ಸಹಾಯವಾಣಿ ಸಂಖ್ಯೆ: 155261
ಪಿಎಂ ಕಿಸಾನ್ ಲ್ಯಾಂಡ್‌ಲೈನ್ ಸಂಖ್ಯೆಗಳು: 011—23381092, 23382401
ಪಿಎಂ ಕಿಸಾನ್ ಅವರ ಹೊಸ ಸಹಾಯವಾಣಿ: 011-24300606, 0120-6025109
ಇಮೇಲ್ ID: pmkisan-ict@gov.in
ಇದನ್ನೂ ಓದಿ : 'PF' ಖಾತೆಯ ಬ್ಯಾಲೆನ್ಸ್ 'Online' ನಲ್ಲಿ ಚೆಕ್ ಮಾಡುವುದು ಹೇಗೆ ಗೊತ್ತ? ಇಲ್ಲಿದೆ ನೋಡಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.