ನವದೆಹಲಿ: ಇಷ್ಟು ದಿನ ಏರುಗತಿಯಲ್ಲಿ ಸಾಗುವ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿದ್ದ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಬುಧವಾರ ಅಕ್ಷರಶಃ ರಕ್ತದೋಕುಳಿ ಹರಿದಿದೆ. ಸೆನ್ಸೆಕ್ಸ್-ನಿಫ್ಟಿ ಭಾರೀ ಕುಸಿತ ಕಂಡಿದ್ದು, ಹೂಡಿಕೆದಾರರು ಮತ್ತೊಮ್ಮೆ ಕೈಸುಟ್ಟುಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಬುಧವಾರದ ವಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್ 676.53 (1.02%) ಅಂಕಗಳಷ್ಟು ಕುಸಿತ ಕಂಡಿದ್ದರೆ, ನಿಫ್ಟಿ 207(1.05%) ಅಂಕಗಳಷ್ಟು ಕುಸಿತ ದಾಖಲಿಸಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಭಾರೀ ಕುಸಿತ ಕಂಡಿದ್ದರಿಂದ ಹೂಡಿಕೆದಾರರು ಭಾರೀ ನಷ್ಟ ಮಾಡಿಕೊಂಡಿದ್ದಾರೆ. ಒಂದು ಅಂದಾಜಿನ ಪ್ರಕಾರ ಇಂದು ಹೂಡಿಕೆದಾರರು ಸುಮಾರು 3.5 ಲಕ್ಷ ಕೋಟಿ ರೂ.ಗಳಷ್ಟು ನಷ್ಟ ಮಾಡಿಕೊಂಡಿದ್ದಾರೆಂದು ವರದಿಯಾಗಿದೆ.


ಇದನ್ನೂ ಓದಿ: ಕಡಿಮೆಯಾಗುವುದು ಹಾಲಿನ ದರ ! ಜನತೆಗೆ ಕೇಂದ್ರ ಸರ್ಕಾರ ಭರ್ಜರಿ ಗಿಫ್ಟ್


ಇಂದಿನ ಷೇರುಪೇಟೆ ವಹಿವಾಟಿನಲ್ಲಿ ಬಹುತೇಕ ಎಲ್ಲಾ ಷೇರುಗಳು ಸಹ ರೆಡ್‍ಮಾರ್ಕ್‍ ತೋರಿಸಿವೆ. BSE SENSEX 676.53 ಅಂಕ(1.02%)ಗಳಷ್ಟು ಕುಸಿತ ಕಂಡು 65782.78 ಮಟ್ಟಕ್ಕೆ ತಲುಪಿದ್ದರೆ,  NIFTY 50 207 ಅಂಕ(1.05%)ಗಳಷ್ಟು ಕುಸಿತ ಕಂಡು 19526.55 ಮಟ್ಟಕ್ಕೆ ಇಳಿಕೆ ಕಂಡಿದೆ.  


ಬ್ಯಾಂಕ್ ನಿಫ್ಟಿಯಲ್ಲೂ ಭಾರೀ ಕುಸಿತ!


ಬ್ಯಾಂಕ್ ನಿಫ್ಟಿಯಲ್ಲೂ ಭಾರೀ ಕುಸಿತ ಕಂಡಿದ್ದು, ಇಂದು 596.80(ಶೇ.1.31ರಷ್ಟು)ಕ್ಕೂ ಹೆಚ್ಚು ಅಂಕಗಳ ಕುಸಿತದೊಂದಿಗೆ 44995.70 ಮಟ್ಟಕ್ಕೆ ಇಳಿಕೆ ಕಂಡಿದೆ.   


ಇದನ್ನೂ ಓದಿ: ಫ್ಲೈಟ್ ಟಿಕೆಟ್‌ ಬುಕಿಂಗ್ ಮೇಲೆ 2000 ರೂ.ವರೆಗೆ ರಿಯಾಯಿತಿ ! ಇಂಡಿಗೋ ನೀಡುತ್ತಿದೆ ವಿಶೇಷ ಆಫರ್


ಹೂಡಿಕೆದಾರರ 3.5 ಲಕ್ಷ ಕೋಟಿ ರೂ. ಲಾಸ್!


ಇಂದಿನ ಷೇರುಪೇಟೆಯ ಭಾರೀ ಕುಸಿತದಲ್ಲಿ ಹೂಡಿಕೆದಾರರು 3.5 ಲಕ್ಷ ಕೋಟಿ ರೂ.ಗೂ ಹೆಚ್ಚು ನಷ್ಟ ಅನುಭವಿಸಿದ್ದಾರೆ. ಬಹುತೇಕ ಎಲ್ಲಾ ಷೇರುಗಳು ಕುಸಿತ ಕಂಡಿದ್ದರಿಂದ ಹೂಡಿಕೆದಾರರು ಕೈಸುಟ್ಟುಕೊಂಡಿದ್ದಾರೆ. ಇಷ್ಟು ದಿನ ಹೂಡಿಕೆದಾರರ ಮೊಗದಲ್ಲಿ ಮಂದಹಾಸ ಮೂಡಿಸಿದ್ದ ಷೇರುಪೇಟೆ ದಿಢೀರ್ ಶಾಕ್ ನೀಡಿದೆ.   


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.