Budget 2023: ಬಜೆಟ್ ಮಂಡನೆಗೂ ಮುನ್ನ ಷೇರು ಮಾರುಕಟ್ಟೆಯಲ್ಲಿ ಭಾರಿ ಹಲ್ ಚಲ್!
Stock Market Update: ಇಂದು ಫೆಬ್ರವರಿ 1, 2023, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಸಾಮಾನ್ಯ ಬಜೆಟ್ ಮಂಡಿಸಲಿದ್ದಾರೆ. ಆದರೆ ಅದಕ್ಕೂ ಮುನ್ನ ಎಲ್ಲರ ಕಣ್ಣು ಮಾರುಕಟ್ಟೆಯತ್ತ ನೆಟ್ಟಿದೆ. ಬಜೆಟ್ ದಿನದಂದು, ಜಾಗತಿಕ ಮಾರುಕಟ್ಟೆಯಿಂದ ಉತ್ತಮ ಸಂಕೇತಗಳು ಕಂಡುಬರುತ್ತವೆ. ಈ ಹಿನ್ನೆಲೆ, ದೇಶೀಯ ಮಾರುಕಟ್ಟೆಯು ಉತ್ತಮ ದಿನದಾರಂಭ ಮಾಡಿದೆ.
Share Market Opening 1st February 2023: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವರುಷ 2023-24ನೇ ಸಾಲಿನ ಆಯವ್ಯಯ ಪತ್ರವನ್ನು ಇಂದು ಲೋಕಸಭೆಯಲ್ಲಿ ಮಂಡಿಸಲಿದ್ದಾರೆ. ಆದರೆ ಅದಕ್ಕೂ ಮುನ್ನ ಎಲ್ಲರ ಕಣ್ಣು ಮಾರುಕಟ್ಟೆಯತ್ತ ನೆಟ್ಟಿದೆ. ಬಜೆಟ್ ದಿನದಂದು, ಜಾಗತಿಕ ಮಾರುಕಟ್ಟೆಯಿಂದ ಉತ್ತಮ ಸಂಕೇತಗಳು ಲಭಿಸುತ್ತಿದ್ದು. ಇಂದು ಸೆನ್ಸೆಕ್ಸ್ ಸೂಚ್ಯಂಕ 397.66 ಪಾಯಿಂಟ್ ಅಂದರೆ ಶೇಕಡಾ 0.67 ರಷ್ಟು ಏರಿಕೆಯೊಂದಿಗೆ 59,947.56 ಮಟ್ಟದಲ್ಲಿ ತನ್ನ ದಿನದ ವಹಿವಾಟನ್ನು ಆರಂಭಿಸಿದೆ. ಇದಲ್ಲದೇ ನಿಫ್ಟಿ ಸೂಚ್ಯಂಕ 129.60 ಪಾಯಿಂಟ್ ಅಂದರೆ ಶೇ.0.73 ರಷ್ಟು ಏರಿಕೆಯೊಂದಿಗೆ 17,791.75 ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ.
ಜಾಗತಿಕ ಮಾರುಕಟ್ಟೆಗಳಲ್ಲಿ ಏರಿಕೆ
ಯುಎಸ್ ಮಾರುಕಟ್ಟೆಗಳು ಲಾಭದೊಂದಿಗೆ ತನ್ನ ದಿನದ ವಹಿವಾಟನ್ನು ಅಂತ್ಯಗೊಲಿಸಿವೆ. ಡೌ ಜೋನ್ಸ್ 34,086.04 ಮಟ್ಟದಲ್ಲಿ 368.95 ಪಾಯಿಂಟ್ ಅಥವಾ ಶೇ.1.09 ರಷ್ಟು ಗಳಿಕೆಯೊಂದಿಗೆ ಮುಕ್ತಾಯ ಕಂಡಿದೆ. ಇದೇ ವೇಳೆ, ಎಸ್ & ಪಿ 500 ಸೂಚ್ಯಂಕವು 58.83 ಪಾಯಿಂಟ್‌ಗಳು ಅಥವಾ ಶೇ.1.46 ರಷ್ಟು ಏರಿಕೆಯೊಂದಿಗೆ 4,076.6 ಮಟ್ಟದಲ್ಲಿ ಮುಕ್ತಾಯ ಕಂಡಿದೆ. ನಾಸ್ಡಾಕ್ 190.74 ಪಾಯಿಂಟ್‌ಗಳು ಅಥವಾ ಶೇ.1.67 ಗಳಿಸಿ 11,584.55 ಕ್ಕೆ ತನ್ನ ವಹಿವಾಟನ್ನು ಅಂತ್ಯಗೊಳಿಸಿದೆ.
ಇದನ್ನೂ ಓದಿ-Budget 2023: ಬಜೆಟ್ ಗೂ ಮುನ್ನ ವಾಹನ ಸವಾರರಿಗೆ ಒಂದು ಭಾರಿ ಸಂತಸದ ಸುದ್ದಿ, CNG ಬೆಲೆ ಇಳಿಕೆ
ಬ್ಯಾಂಕಿಂಗ್-ಐಟಿ ಸೇರಿದಂತೆ ಹಲವು ಷೇರುಗಳಲ್ಲಿ ಲಾಭ
ಇಂದು, ಟಾಪ್ 30 ಸೆನ್ಸೆಕ್ಸ್ ಷೇರುಗಳಲ್ಲಿ, ಕೇವಲ 3 ಕಂಪನಿಯ ಷೇರುಗಳಲ್ಲಿ ಮಾತ್ರ ಬಿಕವಾಲಿಯ ವಾತಾವರಣವಿದೆ. ಇವುಗಳನ್ನು ಹೊರತುಪಡಿಸಿದರೆ, ಎಲ್ಲ ಕಂಪನಿಗಳ ಷೇರುಗಳು ಏರಿಕೆಯೊಂದಿಗೆ ವಹಿವಾಟು ನಡೆಸುತ್ತಿವೆ. ಇಂದು ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ, ಎಚ್‌ಡಿಎಫ್‌ಸಿ ಬ್ಯಾಂಕ್, ಕೋಟಕ್ ಬ್ಯಾಂಕ್, ಪವರ್ ಗ್ರಿಡ್, ಬಜಾಜ್ ಫೈನಾನ್ಸ್, ಬಜಾಜ್ ಫಿನ್‌ಸರ್ವ್, ಎಚ್‌ಸಿಎಲ್ ಟೆಕ್, ವಿಪ್ರೋ, ರಿಲಯನ್ಸ್, ಟಾಟಾ ಸ್ಟೀಲ್, ಟಿಸಿಎಸ್, ಟೈಟಾನ್ ಸೇರಿದಂತೆ ಹಲವು ಕಂಪನಿಗಳ ಷೇರುಗಳಲ್ಲಿ ಪ್ರಬಲ ಬೆಳವಣಿಗೆ ಕಂಡುಬರುತ್ತಿದೆ.
ಇದನ್ನೂ ಓದಿ-Budget 2023: ವಾಹನ ಖರೀದಿಸಬೇಕೆ? ಎರಡೇ ಎರಡು ದಿನ ವೇಟ್ ಮಾಡಿ, ಸಿಗಲಿದೆ ಈ ಸಂತಸದ ಸುದ್ದಿ!
ಇತಿಹಾಸ ಏನು ಹೇಳುತ್ತದೆ
ಹಳೆಯ ಇತಿಹಾಸದ ಬಗ್ಗೆ ಹೇಳುವುದಾದರೆ , ಬಜೆಟ್ ದಿನದಂದು ಮಾರುಕಟ್ಟೆಯಲ್ಲಿ ಭಾರಿ ಸಕಾರಾತ್ಮಕ ಬೆಳವಣಿಗೆ ಇರುವ ಸಾಧ್ಯತೆ ಇದೆ. ಕಳೆದ 12 ರಿಂದ 13 ವರ್ಷಗಳ ಟ್ರೆಂಡ್ ನೋಡಿದರೆ, ಈ ಬಾರಿ ಹೂಡಿಕೆದಾರರಿಗೆ ಪರಿಹಾರ ಸಿಗುವ ನಿರೀಕ್ಷೆ ಇದೆ. ಉತ್ತಮ ಜಾಗತಿಕ ಸಂಕೇತಗಳ ಪರಿಣಾಮವನ್ನು ಮಾರುಕಟ್ಟೆಯ ಮೇಲೂ ನೋಡಲು ಸಿಗುವ ಸಾಧ್ಯತೆ ಇದೆ. 2022 ಮತ್ತು 2021 ರಲ್ಲೂ ಮಾರುಕಟ್ಟೆಯಲ್ಲಿ ಏರಿಕೆ ಕಂಡುಬಂದಿತ್ತು. ಇದಲ್ಲದೆ, 2019 ರಲ್ಲಿ ಮಾರುಕಟ್ಟೆಯು ಉತ್ತಮ ಆರಂಭವನ್ನೇ ಕಂಡು ತನ್ನ ವಹಿವಾಟನ್ನು ಮುಂದುವರೆಸಿತ್ತು.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.