ನವದೆಹಲಿ: ಜಾಗತಿಕ ಷೇರು ಮಾರುಕಟ್ಟೆಗಳ ಸಕಾರಾತ್ಮಕ ವಹಿವಾಟಿನಿಂದಾಗಿ ಭಾರತೀಯ ಷೇರು ಮಾರುಕಟ್ಟೆ ಕೊಂಚ ಚೇತರಿಕೆ ಕಂಡಿದೆ. ಪರಿಣಾಮ ಗುರುವಾರ ಬೆಳಗ್ಗೆ ಸೆನ್ಸೆಕ್ಸ್ ಮತ್ತು ನಿಫ್ಟಿ ಹಸಿರು ಬಣ್ಣದಲ್ಲಿ ವಹಿವಾಟಿಗೆ ತೆರೆದುಕೊಂಡವು. 30 ಅಂಕಗಳ ಸೆನ್ಸೆಕ್ಸ್ ವಹಿವಾಟಿನ ಆರಂಭದಲ್ಲಿ 53,950.84 ಮಟ್ಟದಲ್ಲಿ ಪ್ರಾರಂಭವಾಯಿತು. ಅದೇ ರೀತಿ ನಿಫ್ಟಿ 50 ಸಹ 16,196.35 ಮಟ್ಟದಲ್ಲಿ ಸಕಾರಾತ್ಮಕ ವಹಿವಾಟು ಆರಂಭಿಸಿತು. ಆರಂಭಿಕ ವಹಿವಾಟಿನಲ್ಲಿ 30ರಲ್ಲಿ 23 ಸೆನ್ಸೆಕ್ಸ್ ಷೇರುಗಳು ಏರಿಕೆ ದಾಖಲಿಸಿದವು.


COMMERCIAL BREAK
SCROLL TO CONTINUE READING

ವಹಿವಾಟಿನ ಅವಧಿಯಲ್ಲಿ ಅಮೆರಿಕದ ಮಾರುಕಟ್ಟೆಗಳು ಕೂಡ ಏರಿಕೆ ದಾಖಲಿಸುವ ಮೂಲಕ ಬುಧವಾರ ವಹಿವಾಟು ಮುಕ್ತಾಯಗೊಳಿಸಿದವು. ಆದರೆ, ದಿನವಿಡೀ ಮಾರುಕಟ್ಟೆಯಲ್ಲಿ ಸಾಕಷ್ಟು ಏರಿಳಿತಗಳು ಕಂಡುಬಂದವು. ಡೌ ಜೋನ್ಸ್ 200 ಅಂಕಗಳ ಏರಿಕೆಯೊಂದಿಗೆ ಮುಕ್ತಾಯವಾಯಿತು. ಇದಲ್ಲದೇ ನಾಸ್ಡಾಕ್ ಕೂಡ ಶೇ.1.5 ರಷ್ಟು ಲಾಭದೊಂದಿಗೆ ಮುಕ್ತಾಯವಾಯಿತು. ಐಟಿಯಲ್ಲಿ ಚೇತರಿಕೆಯೊಂದಿಗೆ ಮಾರುಕಟ್ಟೆಯ ಮನಸ್ಥಿತಿ ಸುಧಾರಿಸಿದಂತಾಗಿದೆ.


ಇದನ್ನೂ ಓದಿ: Davos 2022: ಕರ್ನಾಟಕದಲ್ಲಿ 50,000 ಕೋಟಿ ರೂ. ಹೂಡಿಕೆಗೆ ಒಪ್ಪಂದ


ಸದ್ಯದ ಮಾಹಿತಿ ಪ್ರಕಾರ ಸೆನ್ಸೆಕ್ಸ್ 82.07(ಶೇ.015) ಅಂಕಗಳ ಏರಿಕೆಯೊಂದಿಗೆ 53,831.33 ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ. ಅದೇ ರೀತಿ ನಿಫ್ಟಿ 50 ಸಹ -4.30(ಶೇ.0.03) ಅಂಕ ಕುಸಿತ ಕಾಣುವ ಮೂಲಕ 16,021.50 ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ. ಇಂದು ಸೆನ್ಸೆಕ್ಸ್ 54 ಸಾವಿರ ಮಟ್ಟವನ್ನು ಮುಟ್ಟಿ ಬಳಿಕ ಕುಸಿತ ಕಂಡಿತು.   


ಬುಧವಾರ(ಮೇ 25)ದಂದು ಸೆನ್ಸೆಕ್ಸ್ ಮತ್ತು ನಿಫ್ಟಿಯಲ್ಲಿ ಸತತ 3ನೇ ದಿನವೂ ಕುಸಿತದ ಪ್ರವೃತ್ತಿ ಕಂಡುಬಂದಿತ್ತು. ವಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್ 303.35 ಪಾಯಿಂಟ್ ಗಳ ಕುಸಿತ ಕಂಡು 53,749.26 ಅಂಕಗಳಿಗೆ ತಲುಪಿತ್ತು. ಅದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಕೂಡ 99.35 ಅಂಕ ಕುಸಿದು 16,025.80 ಅಂಕಗಳಿಗೆ ತಲುಪಿತ್ತು.


ಇದನ್ನೂ ಓದಿ: Gold Price Today: ದಿನೇ ದಿನೇ ಏರುತ್ತಲೇ ಇದೆ ಚಿನ್ನ ಬೆಳ್ಳಿ ದರ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.