ನವದೆಹಲಿ:  ಹೆಚ್ಚಾಗುತ್ತಿರುವ ಕೋರೋನಾದ ಹೊಸ ರೂಪಾಂತರಿಯ ಆತಂಕದ ನಡುವೆ ಬುಧವಾರ ಷೇರುಪೇಟೆಯ ಸಂವೇದಿ ಸೂಚ್ಯಂಕ ಸುಮಾರು 930 ಅಂಕ ಕುಸಿದು 70506 ಮಟ್ಟದಲ್ಲಿ ತನ್ನ ದಿನದ ವಹಿವಾಟನ್ನು ನಿಲ್ಲಿಸಿದೆ, ನಿಫ್ಟಿ 303 ಅಂಕ ಕುಸಿದು 21150 ಅಂಕಗಳ ಮಟ್ಟದಲ್ಲಿ ದಿನದಾಂತ್ಯ ಕಂಡಿದೆ. ಬುಧವಾರದ ಷೇರುಪೇಟೆ ವಹಿವಾಟಿನ ವೇಳೆ ಗೌತಮ್ ಅದಾನಿ ಸಮೂಹದ ಎಲ್ಲಾ 9 ಲಿಸ್ಟೆಡ್ ಕಂಪನಿಗಳ ಷೇರುಗಳು ಭಾರಿ ದುರ್ಬಲಗೊಂಡು ತನ್ನ ವಹಿವಾಟನ್ನು ನಿಲ್ಲಿಸಿವೆ. ಗೌತಮ್ ಅದಾನಿ ಗ್ರೂಪ್‌ನ ಅದಾನಿ ವಿಲ್ಮಾರ್‌ನಲ್ಲಿ ಶೇಕಡಾ 5 ರಷ್ಟು ದೌರ್ಬಲ್ಯ ದಾಖಲಾಗಿದ್ದರೆ, ಅದಾನಿ ಟೋಟಲ್ ಗ್ಯಾಸ್‌ನ ಷೇರುಗಳು ಶೇಕಡಾ 6.66 ರಷ್ಟು ದುರ್ಬಲಗೊಂಡು ವಹಿವಾಟು ನಿಲ್ಲಿಸಿವೆ.(Business News In Kannada)


COMMERCIAL BREAK
SCROLL TO CONTINUE READING

ಮಲ್ಟಿಬ್ಯಾಗರ್ ರಿಟರ್ನ್ಸ್ ನೀಡುವ ಷೇರುಗಳ ಕುರಿತು ಹೇಳುವುದಾದರೆ, ಪಟೇಲ್ ಇಂಜಿನಿಯರಿಂಗ್ ಷೇರುಗಳು ಸುಮಾರು ಎಂಟು ಪ್ರತಿಶತದಷ್ಟು ದುರ್ಬಲತೆಯನ್ನು ದಾಖಲಿಸಿವೆ. ಎಕ್ಸೈಡ್ ಇಂಡಸ್ಟ್ರೀಸ್ ಶೇಕಡಾ 6 ರಷ್ಟು ದುರ್ಬಲತೆಯೊಂದಿಗೆ ವಹಿವಾಟನ್ನು ನಿಲ್ಲಿಸಿವೆ. ಕಾಮಧೇನು ಲಿಮಿಟೆಡ್, ಟಾಟಾ ಮೋಟಾರ್ಸ್, ಜಿಯೋ ಫೈನಾನ್ಶಿಯಲ್, ಓಂ ಇನ್‌ಫ್ರಾ, ಸ್ಟವ್ ಕ್ರಾಫ್ಟ್, ಮಹೀಂದ್ರಾ ಮತ್ತು ಮಹೀಂದ್ರಾ, ದೇವಯಾನಿ ಇಂಟರ್‌ನ್ಯಾಶನಲ್, ಬ್ರಾಂಡ್ ಕಾನ್ಸೆಪ್ಟ್ ಮತ್ತು ಯುನಿಪಾರ್ಟ್ಸ್ ಇಂಡಿಯಾ ಸೇರಿದಂತೆ ಎಲ್ಲಾ ಷೇರುಗಳಲ್ಲಿ ಭಾರಿ ಕುಸಿತ ಕಂಡುಬಂದಿದೆ.


ಷೇರು ಮಾರುಕಟ್ಟೆಯ ಟಾಪ್ ಗೇನರ್‌ಗಳಲ್ಲಿ ಒಎನ್‌ಜಿಸಿ, ಟಾಟಾ ಕನ್ಸ್ಯೂಮರ್, ಬ್ರಿಟಾನಿಯಾ ಮತ್ತು ಸಿಪ್ಲಾ ಷೇರುಗಳು ಶಾಮಿಲಾಗಿದ್ದರೆ, ಟಾಪ್ ಲೂಸರ್‌ಗಳಲ್ಲಿ ಅದಾನಿ ಪೋರ್ಟ್ಸ್, ಅದಾನಿ ಎಂಟರ್‌ಪ್ರೈಸಸ್, ಟಾಟಾ ಸ್ಟೀಲ್ ಮತ್ತು ಯುಪಿಎಲ್ ಷೇರುಗಳು ಸೇರಿವೆ.


ಬುಧವಾರ, ಷೇರುಪೇಟೆಯ ಏರಿಳಿತದ ವಹಿವಾಟಿನಲ್ಲಿ, ದಿನದ ಗರಿಷ್ಠ ಮಟ್ಟದಿಂದ ಸೆನ್ಸೆಕ್ಸ್‌ನಲ್ಲಿ ಸಾವಿರ ಸಾವಿರ ಅಂಕಗಳಷ್ಟು ದುರ್ಬಲತೆ ದಾಖಲಾಗಿದೆ. 72000 ಮಟ್ಟವನ್ನು ತಲುಪಿದ ನಂತರ, ಬಿಎಸ್‌ಇ ಸೆನ್ಸೆಕ್ಸ್ 1000 ಪಾಯಿಂಟ್‌ಗಳಷ್ಟು ಕುಸಿದರೆ, ನಿಫ್ಟಿ 300 ಪಾಯಿಂಟ್‌ಗಳ ದುರ್ಬಲತೆಯನ್ನು ದಾಖಲಿಸಿದೆ.


ಇದನ್ನೂ ಓದಿ-ಉಚಿತ ನೀರು ಕೊಟ್ಟು ಹಣಗಳಿಕೆ ಮಾಡುತ್ತಿದೆ ಈ ತಂಪು ಪಾನೀಯ ಕಂಪನಿ, ಪ್ರಾಫಿಟ್ ಎಲ್ಲಿಂದ ಸಿಗುತ್ತದೆ?


ಹೆಚ್ಚಿನ ಮಟ್ಟದಲ್ಲಿ ಪ್ರಾಫಿಟ್ ಬುಕ್ಕಿಂಗ್ ನಿಂದಾಗಿ ಷೇರುಪೇಟೆ ದುರ್ಬಲವಾಗಿದೆ ಎಂದು ಷೇರು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.  ನಿಫ್ಟಿ ಮಿಡ್‌ಕ್ಯಾಪ್ ಮತ್ತು ನಿಫ್ಟಿ ಸ್ಮಾಲ್ ಕ್ಯಾಪ್ ಸೂಚ್ಯಂಕಗಳು ಬುಧವಾರ ಸುಮಾರು ಶೇ.2 ರಷ್ಟು ದುರ್ಬಲತೆಯನ್ನು ದಾಖಲಿಸಿವೆ.


ಇದನ್ನೂ ಓದಿ-ಪಿಎಂ ಕಿಸಾನ್: ಈ ರೈತರಿಂದ ಸರ್ಕಾರ ಹಣ ವಾಪಸ್ ಪಡೆಯಲಿದೆ, ನಿಮಗೆ ನೋಟಿಸ್ ಬಂದಿದೆಯಾ? ಇಲ್ಲಿ ಪರಿಶೀಲಿಸಿ!


ಎಫ್ಎಂಸಿಜಿ  ಒಂದೇ ವಲಯ ಸೂಚ್ಯಂಕವಾಗಿದ್ದು ಅದು ಹಸಿರು ಅಂಕಗಳಲ್ಲಿ ತನ್ನ ದಿನದ ವಹಿವಾಟನ್ನು ಅಂತ್ಯಗೊಳಿಸಿದೆ . ಬ್ಯಾಂಕ್ ಮತ್ತು ಐಟಿ ಸೂಚ್ಯಂಕಗಳಲ್ಲೂ ಭಾರಿ ದುರ್ಬಲತೆ ಕಂಡು ಬಂದಿದೆ. ನಿಫ್ಟಿ ಆಟೋ, ಮೀಡಿಯಾ, ಮೆಟಲ್, ಪಿಎಸ್‌ಯು ಬ್ಯಾಂಕ್ ಮತ್ತು ರಿಯಾಲಿಟಿ ಸೂಚ್ಯಂಕಗಳಲ್ಲಿ ಗಣನೀಯ ಮಾರಾಟ ಕಂಡುಬಂದಿದೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ