Stock Market Update - ನವದೆಹಲಿ: ಭಾರತೀಯ ಷೇರು ಮಾರುಕಟ್ಟೆ ಇಂದು ಐತಿಹಾಸಿಕ ದಾಖಲೆಯೊಂದನ್ನು ರಚಿಸಿದ್ದು, ಹೂಡಿಕೆದಾರರ ಪಾಲಿಗೆ ಇದೊಂದು ಅತ್ಯುತ್ತಮ ಸಂಕೇತವಾಗಿದೆ. ಹೌದು, ಇಂದು ದೇಸೀಯ ಮಾರುಕಟ್ಟೆ ತನ್ನ ಐತಿಹಾಸಿಕ ಎತ್ತರಕ್ಕೆ ತಲುಪಿದ್ದು, ಮೊದಲ ಬಾರಿಗೆ ಷೇರು ಸೂಚ್ಯಂಕ ಸೆನ್ಸೆಕ್ಸ್ 49 ಸಾವಿರ ಅಂಕಗಳ ಗಡಿ ದಾಟಿದೆ. ಇಂದು ಮಾರುಕಟ್ಟೆ ಆರಂಭವಾಗುತ್ತಿದ್ದಂತೆ, ಆರಂಭಿಕ ವಹಿವಾಟಿನಲ್ಲಿ 250 ಅಂಕಗಳ ಜಿಗಿತ ಕಂಡಿದೆ ಇದರಿಂದ ಪ್ರೀ-ಒಪನಿಂಗ್ ನಲ್ಲಿ ಸೆನ್ಸೆಕ್ಸ್ 49000 ಗಡಿ ದಾಟಿದೆ. ಕೊರೊನಾ ವ್ಯಾಕ್ಸಿನ್ ಗೆ ಸಂಬಂಧಿಸಿದ ಮಹತ್ವದ ಬೆಳವಣಿಗೆಗಳ ಹಿನ್ನೆಲೆ ಷೇರು ಮಾರುಕಟ್ಟೆಯ ಸೆಂಟಿಮೆಂಟ್ ಉತ್ತಮವಾಗಿದೆ ಹಾಗೂ ಹೂಡಿಕೆದಾರರು ನಿರಂತರ ಖರೀದಿಯಲ್ಲಿ ತೊಡಗಿದ್ದಾರೆ. ಈ ಹುಮ್ಮಸ್ಸಿನ ಹಿನ್ನೆಲೆ ಮಾರುಕಟ್ಟೆಯಲ್ಲಿ ಭಾರಿ ಉತ್ಸಾಹ ಕಂಡು ಬರುತ್ತ್ದಿದೆ.


COMMERCIAL BREAK
SCROLL TO CONTINUE READING

ಇದನ್ನು ಓದಿ-ಅಗ್ಗದ ದರದಲ್ಲಿ ಚಿನ್ನ ಖರೀದಿಗೆ ವರ್ಷಾರಂಭದಲ್ಲಿಯೇ ಸರ್ಕಾರ ನೀಡುತ್ತಿದೆ ಈ ಅವಕಾಶ


ಬೆಳಗ್ಗೆ 9 ಗಂಟೆ 41 ನಿಮಿಷಕ್ಕೆ ಸೆನ್ಸೆಕ್ಸ್  398.66 ಅಂಕಗಳು ಅಂದರೆ ಶೇ.0.82ರಷ್ಟು ಜಿಗಿತ ಕಂಡು 49,181.17 ಅಂಕಗಳ ಮೇಲೆ ತನ್ನ ದಿನದ ವಹಿವಾಟು ಮುಂದುವರೆಸಿದೆ.


ಇದನ್ನುಓದಿ- Pizzaದಿಂದ Vaccineವರೆಗೆ ಡ್ರೋನ್ ಮೂಲಕ ವಿತರಣೆ, ಈ ಕಂಪನಿಗಳಿಗೆ ಸಿಕ್ತು ಅನುಮತಿ


Nifty ಪರಿಸ್ಥಿತಿ ಹೇಗಿದೆ 
ಷೇರು ಮಾರುಕಟ್ಟೆಯಲ್ಲಿ ಹಸಿರು ಸಂಕೇತಗಳು ಮುಂದುವರೆದಿವೆ. ಇಂದು ಈ ವಾರದ ಮೊದಲ ವಹಿವಾಟಿನ ದಿನವಾದ ಕಾರಣ ಮಾರುಕಟ್ಟೆಯಲ್ಲಿ ಭಾರಿ ಹಲ್-ಚಲ್ ಸೃಷ್ಟಿಯಾಗಿದೆ. ಪ್ರೀ-ಓಪನಿಂಗ್ ನಲ್ಲಿಯೇ ಸಂವೇದಿ ಸೂಚ್ಯಂಕ 49,000 ಅಂಕಗಳ ಗಡಿ ದಾಟಿದೆ. ರಾಷ್ತ್ರೀಯ ಷೇರು ಸೂಚ್ಯಂಕ ನಿಫ್ಟಿ ಕೂಡ ಪ್ರಮುಖ 14,500ರ ಗಡಿ ದಾಟಿದೆ. ದಿನದ ಆರಂಭಿಕ ವಹಿವಾಟಿನಲ್ಲಿ ನಿಫ್ಟಿ ಸೂಚ್ಯಂಕದಲ್ಲಿ 216.15 ಅಂಕಗಳ ಜಿಗಿತ ಕಂಡು ಬಂದಿರುವುದರ ಜೊತೆಗೆ 14,563 ಅಂಕಗಳೊಂದಿಗೆ ರಾಷ್ಟೀಯ ಷೇರು ಮಾರುಕಟ್ಟೆ ತನ್ನ ವಹಿವಾಟು ಮುಂದುವರೆಸಿದೆ.


ಇದನ್ನು ಓದಿ- ವಿಶಿಷ್ಠ RuPay debit card ಬಿಡುಗಡೆ ಮಾಡಿದ SBI


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.