Share Market Today: ಇಂದು ಡಿಸೆಂಬರ್ 20 ಮತ್ತು ವಾರದ ಮೊದಲ ವಹಿವಾಟಿನ ದಿನ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ ದಾಖಲಿಸಿದೆ. ಇಂದಿನ ವಹಿವಾಟಿನ ಆರಂಭದಲ್ಲಿಯೇ  ಸೆನ್ಸೆಕ್ಸ್ (Sensex) ಹಾಗೂ ನಿಫ್ಟಿ (Nifty) ಶೇ.1ರಷ್ಟು ಕುಸಿತ ಕಂಡಿವೆ. ಇನ್ನೇನು ಮಾರುಕಟ್ಟೆ ಚೇತರಿಸಿಕೊಳ್ಳುತ್ತದೆ ಎನ್ನುವಷ್ಟರಲ್ಲೇ ಎರಡೂ ಪ್ರಮುಖ ಸೂಚ್ಯಂಕಗಳು ಸುಮಾರು ಶೇ.3 ರಷ್ಟು ಕುಸಿತ ಕಂಡಿವೆ. ಭಾರತೀಯ ಷೇರು ಮಾರುಕಟ್ಟೆ ಆರಂಭಕ್ಕೂ ಮುನ್ನ ಜಾಗತಿಕ ಮಾರುಕಟ್ಟೆಯಲ್ಲೂ ಭಾರಿ ಕುಸಿತದ ಟ್ರೆಂಡ್ ನಿರ್ಮಾಣಗೊಂಡಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-SBI 3-in-1 Account: ಒಂದು ಖಾತೆ, ಮೂರು ಸೌಲಭ್ಯಗಳು; ಈ ಖಾತೆಯ ವೈಶಿಷ್ಟ್ಯದ ಬಗ್ಗೆ ಇಲ್ಲಿದೆ ಮಾಹಿತಿ


NIFTY ಮುಂದಿನ ಸಪೋರ್ಟ್ 16,300ರ ಮಟ್ಟದಲ್ಲಿ ಕಂಡುಬಂದಿದ್ದು, ಮೈನರ್ ಸಪೋರ್ಟ್ 16,500ರ ಮಟ್ಟದಲ್ಲಿ ನಿಂತಿದೆ ಎಂದು ಜೆಎಂ ಫೈನಾನ್ಸಿಯಲ್ ನಿರ್ದೇಶಕ ರಾಹುಲ್ ಶರ್ಮಾ ಹೇಳಿದ್ದಾರೆ. ಇಂದಿನ ಕುಸಿತದ ಮಧ್ಯೆ 16,500 ಮುರಿದು ಬೀಳದೆ ಹೋದಲ್ಲಿ ವಹಿವಾಟಿನ ಎರಡನೇ ವಾರ ಶಾರ್ಟ್ ಕವರಿಂಗ್ ನೋಡಲು ಸಿಗಲಿದೆ ಎಂಬುದು ಅವರ ಅಭಿಪ್ರಾಯ. ಆದರೆ, ಡಿಸೆಂಬರ್ ಸಂಪೂರ್ಣ ತಿಂಗಳು ಈ ಅತಂತ್ರ ಸ್ಥಿತಿ ಮುಂದುವರೆಯಲಿದೆ ಎಂದು ಕೂಡ ಅವರು ಹೇಳಿದ್ದಾರೆ. ಆದರೆ ಜನವರಿಯಲ್ಲಿ ತ್ರೈಮಾಸಿಕ ಪರಿಣಾಮಗಳು ಉತ್ತಮವಾಗಿದ್ದರೆ, ಮಾರುಕಟ್ಟೆ ಮತ್ತೊಮ್ಮೆ ವೇಗ ಪಡೆದುಕೊಳ್ಳಲಿದೆ. ಹೀಗಾಗಿ ಹೂಡಿಕೆದಾರರು ಸ್ವಲ್ಪ ಎಚ್ಚರಿಕೆಯಿಂದ ಹೂಡಿಕೆಯನ್ನು ಮಾಡಬೇಕು. ನಿಫ್ಟಿಯ 16,300 ಮಟ್ಟ ಖರೀದಿಗೆ ಉತ್ತಮ ಅವಕಾಶ ಸೃಷ್ಟಿಸಲಿದೆ ಎಂಬುದು ರಾಹುಲ್ ಅವರ ಅಭಿಪ್ರಾಯ.


ಇದನ್ನೂ ಓದಿ-Bank Alert: ಜನವರಿ 1 ರಿಂದ ಬದಲಾಗಲಿದೆ ಈ ದೊಡ್ಡ ನಿಯಮ, ನಿಮಗೂ ಗೊತ್ತಿರಲಿ


ಪ್ರಸ್ತುತ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಇಂದು ಬೆಳಗ್ಗೆ ಕಂಡು ಬಂದ ಕುಸಿತ ಮತ್ತಷ್ಟು ಆಳಕ್ಕೆ ಇಳಿಯುವ ಸಾಧ್ಯತೆ ಇದೆ. ಸೆನ್ಸೆಕ್ಸ್ ಸುಮಾರು 1400 ಕ್ಕೂ ಹೆಚ್ಚು ಅಂಕಗಳಿಗೆ ಕುಸಿದಿದ್ದರೆ, ನಿಫ್ಟಿ ಕೂಡ 425 ಕ್ಕೂ ಹೆಚ್ಚು ಅಂಕಗಳ ಕುಸಿತ ದಾಖಲಿಸಿದೆ. ದಿನ ಕಳೆದಂತೆ ಈ ಕುಸಿತ ಇನ್ನಷ್ಟು ಆಳವಾಗುವ ಸಾಧ್ಯತೆಯನ್ನು ತಜ್ಞರು ವರ್ತಿಸಿದ್ದಾರೆ. 


ಇದನ್ನೂ ಓದಿ-Aadhaar-voter ID Linking : ನಿಮ್ಮ ಆಧಾರ್ ಜೊತೆ Voter ID ಲಿಂಕ್ ಮಾಡುವುದು ತುಂಬಾ ಸುಲಭ : ಹೇಗೆ ಇಲ್ಲಿ ಪರಿಶೀಲಿಸಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.