Stock Market Update: ಭಾರಿ ಚೇತರಿಕೆಯೊಂದಿಗೆ ದಿನದ ವಹಿವಾಟು ಅಂತ್ಯಗೊಳಿಸಿದ ಷೇರು ಮಾರುಕಟ್ಟೆ
Stock Market Closing: ಇಂದಿನ ವಹಿವಾಟಿನ ಮುಕ್ತಾಯದಲ್ಲಿ ಮುಂಬೈ ಶೇರುಪೇಟೆ ಅಂದರೆ, ಸೆನ್ಸೆಕ್ಸ್ ಸೂಚ್ಯಂಕ 712 ಅಂಕಗಳ ಏರಿಕೆಯೊಂದಿಗೆ 57,570 ಅಂಕಗಳ ಮಟ್ಟದಲ್ಲಿ ಮತ್ತು ನಿಫ್ಟಿ 228 ಅಂಕಗಳ ಏರಿಕೆಯೊಂದಿಗೆ 17,158 ಅಂಕಗಳ ಮಟ್ಟದಲ್ಲಿ ತನ್ನ ದಿನದ ವಹಿವಾಟನ್ನು ಅಂತ್ಯಗೊಳಿಸಿವೆ.
Stock Market Closing On 29th July 2022: ಈ ವಾರ ಭಾರತೀಯ ಷೇರು ಮಾರುಕಟ್ಟೆಯ ಪಾಲಿಗೆ ಅದ್ಭುತ ಸಾಬೀತಾಗಿದೆ. ದೇಸಿಯ ಹಾಗೂ ವಿದೇಶಿ ಹೂಡಿಕೆದಾರರ ಖರೀದಿಯ ಕಾರಣ ಸಂಪೂರ್ಣ ವಾರದಲ್ಲಿ ಜಬರ್ದಸ್ತ್ ಏರಿಕೆಯನ್ನು ಗಮನಿಸಲಾಗಿದೆ. ವಾರದ ಕೊನೆಯ ದಿನವಾದ ಇಂದೂ ಕೂಡ ಹೂಡಿಕೆದಾರರ ಖರೀದಿ ಪ್ರಕ್ರಿಯೆಯ ಹಿನ್ನೆಲೆ ಮಾರುಕಟ್ಟೆ ಪುನಃ ಭಾರಿ ಏರಿಕೆಯೊಂದಿಗೆ ತನ್ನ ದಿನದ ವಹಿವಾಟನ್ನು ಅಂತ್ಯಗೊಳಿಸಿದೆ. ಒಂದೆಡೆ ಸೆನ್ಸೆಕ್ಸ್ ಸೂಚ್ಯಂಕ 57,000 ಗಡಿಯನ್ನು ದಾಟಿದ್ದರೆ, ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ ಕೂಡ 17000 ಗಡಿ ದಾಟುವಲ್ಲಿ ಯಶಸ್ವಿಯಾಗಿದೆ. ಇಂದಿನ ದಿನದಾಂತ್ಯಕ್ಕೆ ಸೆನ್ಸೆಕ್ಸ್ ಸೂಚ್ಯಂಕ 712 ಅಂಕಗಳ ಏರಿಕೆಯೊಂದಿಗೆ 57,570 ಅಂಕಗಳಿಗೆ ತನ್ನ ವಹಿವಾಟನ್ನು ಮುಕ್ತಾಯಗೊಳಿಸಿದ್ದರೆ, ನಿಫ್ಟಿ ಕೂಡ 17,158 ಅಂಕಗಳಿಗೆ ತನ್ನ ವಹಿವಾಟನ್ನು ಮುಗಿಸಿದೆ.
ಇಂದಿನ ದಿನ ಷೇರು ಮಾರುಕಟ್ಟೆಯಲ್ಲಿ ಎಲ್ಲಾ ವಲಯಗಳು ಹಸಿರು ನಿಶಾನೆಯಲ್ಲಿ ತನ್ನ ದಿನದ ವಹಿವಾಟನ್ನು ಮುಕ್ತಾಯಗೊಳಿಸಿವೆ. ಐಟಿ, ಫಾರ್ಮಾ, ಇಂಧನ, ಬ್ಯಾಂಕಿಂಗ್, ಲೋಹ, ಆಟೋ, ಬ್ಯಾಂಕಿಂಗ್, ಎಫ್‌ಎಂಸಿಜಿ, ರಿಯಲ್ ಎಸ್ಟೇಟ್‌ಗಳಂತಹ ಎಲ್ಲಾ ಕ್ಷೇತ್ರಗಳು ಏರಿಕೆ ಕಂಡಿವೆ. ನಿಫ್ಟಿಯ ಒಟ್ಟು 50 ಷೇರುಗಳ ಪೈಕಿ 43 ಷೇರುಗಳು ಹಸಿರು ನಿಶಾನೆಯಲ್ಲಿ ತನ್ನ ವಹಿವಾಟನ್ನು ಮುಗಿಸಿವೆ. 7 ಷೇರುಗಳು ಕೆಂಪು ನಿಶಾನೆಯಲ್ಲಿ ತನ್ನ ವಹಿವಾಟನ್ನು ಅಂತ್ಯಗೊಲಿಸಿವೆ. ಸೆನ್ಸೆಕ್ಸ್‌ನ ಒಟ್ಟು 30 ಷೇರುಗಳ ಪೈಕಿ 26 ಷೇರುಗಳು ಹಸಿರು ಮತ್ತು 4 ಷೇರುಗಳು ಕೆಂಪು ನಿಶಾನೆಯಲ್ಲಿ ತನ್ನ ದಿನದ ವಹಿವಾಟನ್ನು ಅಂತ್ಯಗೊಳಿಸಿವೆ.
ಇದನ್ನೂ ಓದಿ-ITR Filing Update: ಐಟಿಆರ್ ದಾಖಲಿಸುವ ನಿಯಮದಲ್ಲಿ ಬದಲಾವಣೆ, ಇಲ್ಲಿದೆ ವಿತ್ತ ಸಚಿವಾಲಯದ ಹೊಸ ಆದೇಶ
ಯಾವ ಷೇರುಗಳು ಉತ್ತಮ ವಹಿವಾಟನ್ನು ನಡೆಸಿವೆ
ಮಾರುಕಟ್ಟೆಯಲ್ಲಿ ಏರಿಕೆ ಕಂಡಿರುವ ಷೇರುಗಳತ್ತ ಒಮ್ಮೆ ಗಮನ ಹರಿಸಿದರೆ, ಟಾಟಾ ಸ್ಟೀಲ್ ಶೇ.7.42, ಸನ್ ಫಾರ್ಮಾ ಶೇ.5.62, ಎಚ್‌ಡಿಎಫ್‌ಸಿ ಶೇ.2.47, ಏಷ್ಯನ್ ಪೇಂಟ್ಸ್ ಶೇ.2.38, ಇಂಡಸ್‌ಇಂಡ್ ಬ್ಯಾಂಕ್ ಶೇ.2.24, ರಿಲಯನ್ಸ್ ಶೇ.1.99, ವಿಪ್ರೋ ಶೇ.1.92, ಬಜಾಜ್ ಫೈನಾನ್ಸ್ ಶೇ.1.88 ಫೈನಾನ್ಸ್ ಶೇ.0.75 ರಷ್ಟು ಏರಿಕೆ ಕಂಡು ತನ್ನ ವಹಿವಾಟನ್ನು ಮುಗಿಸಿವೆ.
ಇದನ್ನೂ ಓದಿ-ರೈತರ ಆದಾಯ ಹೆಚ್ಚಿಸಲು ಕೇಂದ್ರ ಸರ್ಕಾರದಿಂದ ಮತ್ತೊಂದು ಘೋಷಣೆ
ಯಾವ ಷೇರುಗಳಿಗೆ ಹೊಡೆತ ಬಿದ್ದಿದೆ?
ಇಂದು ಮಾರುಕಟ್ಟೆಯಲ್ಲಿ ಭಾರಿ ಹೊಡೆತ ಕಂಡ ಶೇರುಗಳ ಕುರಿತು ಮಾತನಾಡುವುದಾದರೆ, ಡಾ. ರೆಡ್ಡೀಸ್ ಶೇ.3.98, ಕೋಟಕ್ ಮಹೀಂದ್ರ ಶೇ.0.99, ಎಸ್‌ಬಿಐ ಶೇ.0.77, ದಿವಿಸ್ ಲ್ಯಾಬ್ ಶೇ.0.47, ಆಕ್ಸಿಸ್ ಬ್ಯಾಂಕ್ ಶೇ.0.16, ಐಟಿಸಿ ಶೇ.0.13, ಪವರ್ ಗ್ರಿಡ್ ಶೇ.0.12 ಮತ್ತು ಅದಾನಿ ಪೋರ್ಟ್ಸ್ ಶೇ.0.10 ರಷ್ಟು ಕುಸಿತ ಕಂತು ತನ್ನ ವಹಿವಾಟನ್ನು ಅಂತ್ಯಗೊಳಿಸಿವೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.