Stock market: ಹೂಡಿಕೆದಾರರನ್ನು ಕೋಟ್ಯಾಧಿಪತಿ ಮಾಡಿದ 5 ರೂ. ಷೇರು..!
ಭಾರತೀಯ ಷೇರುಮಾರುಕಟ್ಟೆಯಲ್ಲಿ ಕೆಲವು ಷೇರುಗಳು ತಮ್ಮ ಹೂಡಿಕೆದಾರರ ಮೇಲೆ ಹಣದ ಮಳೆಯನ್ನೇ ಸುರಿಸುತ್ತಿವೆ. 5 ರೂ. ಮೌಲ್ಯದ ಷೇರು ಇಂದು 1200 ರೂ. ದಾಟಿದ್ದು, ಹೂಡಿಕೆದಾರರಿಗೆ ಬಂಪರ್ ರಿಟರ್ನ್ಸ್ ನೀಡಿದೆ.
ನವದೆಹಲಿ: ಷೇರು ಮಾರುಕಟ್ಟೆಯಲ್ಲಿ ಏರಿಳಿತ ಸಾಮಾನ್ಯ. ಸದ್ಯ ಜಾಗತಿಕ ಮಾರುಕಟ್ಟೆಯಲ್ಲಿ ಮಾರಾಟದ ವಾತಾವರಣವಿದ್ದು, ಇದರ ಪರಿಣಾಮ ಭಾರತೀಯ ಷೇರು ಮಾರುಕಟ್ಟೆ ಮೇಲೂ ಕಂಡು ಬರುತ್ತಿದೆ. ಆದರೆ ಈ ಮಧ್ಯೆ ಕೆಲವು ಷೇರುಗಳು ಹೂಡಿಕೆದಾರರಿಗೆ ಉತ್ತಮ ಆದಾಯವನ್ನು ನೀಡಿವೆ. ನೀವು ಸರಿಯಾದ ತಿಳುವಳಿಕೆಯೊಂದಿಗೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ, ಕೆಲವೇ ದಿನಗಳಲ್ಲಿ ಶ್ರೀಮಂತರಾಗಬಹುದು.
ಕೋಟ್ಯಾಧಿಪತಿಯಾದ ಹೂಡಿಕೆದಾರರು
ಫಾರ್ಮಾ ಕಂಪನಿಯ ಷೇರುಗಳು ಕಳೆದ ಕೆಲವು ವರ್ಷಗಳಲ್ಲಿ ಪ್ರಚಂಡ ಆದಾಯವನ್ನು ನೀಡಿವೆ. ಈ ಪೈಕಿ ಅಜಂತಾ ಫಾರ್ಮಾ ಷೇರು ಹೂಡಿಕೆದಾರರನ್ನು ಕೆಲವೇ ದಿನಗಳಲ್ಲಿ ಶ್ರೀಮಂತರನ್ನಾಗಿಸಿದೆ. ಈ ಷೇರಿನಲ್ಲಿ ಹೂಡಿಕೆ ಮಾಡಿದವರಿಗೆ ಜ್ಯಾಕ್‍ಪಾಟ್ ಹೊಡೆದಿದೆ. 2004ರಲ್ಲಿ 5 ರೂ. ಇದ್ದ ಈ ಕಂಪನಿಯ ಷೇರು ಬೆಲೆ ಸದ್ಯ 1200 ರೂ.ನಂತೆ ವಹಿವಾಟು ನಡೆಸುತ್ತಿದೆ. ಈ ಅವಧಿಯಲ್ಲಿ ಅಜಂತಾ ಫಾರ್ಮಾ ಷೇರು ಶೇ. 20,000ಕ್ಕಿಂತ ಹೆಚ್ಚು ಲಾಭವನ್ನು ನೀಡಿವೆ. ಈ ಸ್ಟಾಕ್‌ನ 52 ವಾರಗಳ ಕನಿಷ್ಠ ಮೌಲ್ಯ 1061.77 ರೂ. ಆಗಿದ್ದರೆ, ಅದರ 52 ವಾರದ ಗರಿಷ್ಠ ಮೌಲ್ಯ 1623.33 ರೂ. ಆಗಿದೆ.
ಇದನ್ನೂ ಓದಿ: Business Idea: ಕೇವಲ 25 ಸಾವಿರ ಹೂಡಿಕೆ ಮಾಡಿ 72 ಲಕ್ಷ ಸಂಪಾದಿಸುವ ಪರ್ಫೆಕ್ಟ್ ಪರಿಕಲ್ಪನೆ ಇದು!
1 ಲಕ್ಷ ಹೂಡಿದವರಿಗೆ 2.5 ಕೋಟಿಗೂ ಹೆಚ್ಚು ರಿಟರ್ನ್ಸ್
ಕಳೆದ ಕೆಲವು ವರ್ಷಗಳಲ್ಲಿ ಈ ಸ್ಟಾಕ್ ಭರ್ಜರಿ ಆದಾಯವನ್ನು ನೀಡಿದೆ. ಅಜಂತಾ ಫಾರ್ಮಾದ ಷೇರು 6 ಮಾರ್ಚ್ 2009ರಂದು 4.47 ರೂ. ಇತ್ತು. ಇಂದು ಅಂದರೆ ಜುಲೈ 6ರಂದು 1200 ರೂ.ನಂತೆ ಟ್ರೇಡ್ ಆಗುತ್ತಿದೆ. ಈ ಅವಧಿಯಲ್ಲಿ ಹೂಡಿಕೆದಾರರು ಶೇ.20,000ಕ್ಕಿಂತ ಹೆಚ್ಚು ಆದಾಯ ಪಡೆದಿದ್ದಾರೆ. ಹೂಡಿಕೆದಾರರು 6 ಮಾರ್ಚ್ 2009ರಂದು ಈ ಷೇರಿನಲ್ಲಿ 1 ಲಕ್ಷ ರೂ. ಹೂಡಿಕೆ ಮಾಡಿದ್ದರೆ ಇಂದು ಅದರ ಮೌಲ್ಯ 2.72 ಕೋಟಿ ರೂ. ಆಗುತ್ತಿತ್ತು.
ಷೇರಿನ ಪಯಣ ಹೇಗಿತ್ತು?
ಅಜಂತಾ ಫಾರ್ಮಾದ ಷೇರು 22 ಜೂನ್ 2012ರಂದು 59.71 ರೂ.ನಂತೆ ವಹಿವಾಟು ನಡೆಸುತ್ತಿದ್ದರೆ, 6 ಜುಲೈ 2022ರಂದು ಅದು 1200 ರೂ.ಗೆ ತಲುಪಿದೆ. ಹೂಡಿಕೆದಾರರು 10 ವರ್ಷಗಳ ಹಿಂದೆಯೂ ಈ ಷೇರಿನಲ್ಲಿ 1 ಲಕ್ಷ ರೂ. ಹೂಡಿಕೆ ಮಾಡಿದ್ದರೆ ಇಂದು ಅದರ ಮೌಲ್ಯ 20.39 ಲಕ್ಷ ರೂ. ಆಗುತ್ತಿತ್ತು. ಆದರೆ ಕಳೆದ 6 ತಿಂಗಳಲ್ಲಿ ಅಜಂತಾ ಫಾರ್ಮಾ ಷೇರು ಸುಮಾರು ಶೇ.18ರಷ್ಟು ಕುಸಿತ ಕಂಡಿದೆ. ದೀರ್ಘಕಾಲಿಕ ಅವಧಿಗೆ ಈ ಷೇರಿನಲ್ಲಿ ಹೂಡಿಕೆ ಮಾಡಿದರೆ ಬಂಪರ್ ಲಾಭವನ್ನು ನಿರೀಕ್ಷಿಸಬಹುದಾಗಿದೆ.
ಇದನ್ನೂ ಓದಿ: ಈ ನಾಣ್ಯದ ಬೆಲೆ ಬರೋಬ್ಬರಿ 126 ಕೋಟಿ : ಸಿಬಿಐ ತನಿಖೆ ನಡೆಸ್ತಿರೋ ಈ ಕಾಯಿನ್ ಸ್ಪೆಷಾಲಿಟಿ ಏನು?
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ