Success Story: ನೀವು ಒಂದು ವೇಳೆ ಕಾಗದದ ತ್ಯಾಜ್ಯವನ್ನು ರದ್ದಿ ಎಂದು ಪರಿಗಣಿಸುತ್ತಿದ್ದರೆ, ನೀವು ದೊಡ್ಡ ತಪ್ಪು ಮಾಡುತ್ತಿರುವಿರಿ. ಪೂನಂ ಗುಪ್ತಾ ಎಂಬ ಮಹಿಳೆ ಈ ತ್ಯಾಜ್ಯದಿಂದ ಕೋಟ್ಯಂತರ ರೂಪಾಯಿ ಮೌಲ್ಯ ಹೊಂದಿರುವ ಕಂಪನಿ ಸ್ಥಾಪಿಸಿದ್ದಾರೆ. ಅವರು ಪ್ರವಾಸಿ ಭಾರತೀಯ ದಿವಸ್ ಸಮಾವೇಶದಲ್ಲಿ ಭಾಗವಹಿಸಲು ಇಲ್ಲಿಗೆ ಆಗಮಿಸಿದ್ದರು. ಅವರು ಸ್ಕಾಟ್ಲೆಂಡ್ನಲ್ಲಿ ಕಾಗದದ (Business News In Kannada) ತ್ಯಾಜ್ಯಕ್ಕೆ ಹೊಸ ಮಾರುಕಟ್ಟೆಯನ್ನು ನೀಡಿದ್ದಾರೆ. ಪೂನಂ ದೆಹಲಿ ಮೂಲದವರಾಗಿದ್ದು, ದೆಹಲಿಯ ಲೇಡಿ ಶ್ರೀ ರಾಮ್ ಕಾಲೇಜಿನಲ್ಲಿ ಅರ್ಥಶಾಸ್ತ್ರ ಆನರ್ಸ್ ಪದವಿ ಪಡೆದು ನಂತರ ಎಂಬಿಎ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಪೂನಂ 2002 ರಲ್ಲಿ ಪುನೀತ್ ಅವರನ್ನು ವಿವಾಹವಾಗಿದ್ದಾರೆ. ಪುನೀತ್ ಸ್ಕಾಟ್ಲೆಂಡ್‌ನ ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುವ ಕಂಪನಿಯೊಂದಿಗೆ ಸಂಬಂಧ ಹೊಂದಿದ್ದರು. ಪೂನಂ ತನಗೂ ಸ್ಕಾಟ್ಲೆಂಡ್‌ನಲ್ಲಿ ಕೆಲಸ ಸಿಗುತ್ತದೆ ಎಂದು ಆಶಿಸಿದ್ದರು ಆದರೆ ಅದು ಸಾಧ್ಯವಾಗಲಿಲ್ಲ.


ಕೆಲಸ ಸಿಗದ ಹಿನ್ನೆಲೆಯಲ್ಲಿ ಬೇರೆ ಏನಾದರೂ ಮಾಡಲು ನಿರ್ಧರಿಸಿದೆ
ಕೆಲಸ ಸಿಗದಿದ್ದಕ್ಕೆ ಪೂನಂ ಛಲ ಬಿಡದೆ ಹೊಸದೇನಾದರೂ ಮಾಡಲು ನಿರ್ಧರಿಸಿದ್ದಾರೆ. ಅವರು ಹೊಸದನ್ನು ಮಾಡಲು ಸಂಶೋಧನೆ ಪ್ರಾರಂಭಿಸಿದರು, ಈ ಸಮಯದಲ್ಲಿ ಅವರು ಯುರೋಪ್ ಮತ್ತು ಅಮೇರಿಕನ್ ದೇಶಗಳಲ್ಲಿ ಪ್ರತಿದಿನ ಟನ್ಗಟ್ಟಲೆ ಕಾಗದದ ತುಣುಕುಗಳನ್ನು ಎಸೆಯುತ್ತಾರೆ ಎಂಬುದನ್ನು ಕಂಡುಕೊಂಡಿದ್ದಾರೆ.


ಇದಕ್ಕೆ ಕಾರಣ ಯುರೋಪ್ ನಲ್ಲಿ ಉತ್ತಮ ಗುಣಮಟ್ಟದ ಕಾಗದ ಉತ್ಪಾದನೆಯಾಗುತ್ತಿದ್ದು, ಜಂಕ್ ನಲ್ಲಿ ಉಳಿಯುವ ಪೇಪರ್ ಬಳಸಿ ಉತ್ತಮ ಗುಣಮಟ್ಟದ ಕಾಗದ ತಯಾರಿಸುವುದು ದುಬಾರಿಯಾಗಿರುವುದರಿಂದ ಅದನ್ನು ಎಸೆಯಲಾಗುತ್ತದೆ. ಇದಕ್ಕಾಗಿ ಕಂಪನಿಗಳು ಲಕ್ಷಾಂತರ ರೂ.ವೆಚ್ಚ ಮಾಡುತ್ತವೆ


ಈ ಸಂಗತಿ ತಿಳಿದ ಪೂನಂ ಈ ನಿಟ್ಟಿನಲ್ಲಿ ಹೆಚ್ಚಿನ ಸಂಶೋಧನೆಯನ್ನು ನಡೆಸಿದರು ಮತ್ತು ಈ ಕಾಗದದ ಸ್ಕ್ರ್ಯಾಪ್ ಅನ್ನು ಭಾರತದಲ್ಲಿ ಉತ್ತಮವಾಗಿ ಬಳಸಿಕೊಳ್ಳಬಹುದು ಎಂದು ತಿಳಿದುಕೊಂಡರು, ನಂತರ ಅವರು ಆ ದಿಕ್ಕಿನತ್ತ ಸಾಗಿದರು. ಅವರು ಇಟಾಲಿಯನ್ ಕಂಪನಿಯನ್ನು ಸಂಪರ್ಕಿಸಿದಾಗ, ಅವರಿಗೆ ಯಶಸ್ಸು ಲಭಿಸಿತು ಮತ್ತು ಅವರು ಈ ತ್ಯಾಜ್ಯವನ್ನು ಮಾರಾಟ ಮಾಡಲು ಆರಂಭಿಸಿದರು.


ಮೊದಲ ಡೀಲ್ 40 ಲಕ್ಷ ರೂ. ಗಳದ್ದಾಗಿತ್ತು
ಪೂನಂ ಅವರ ಮೊದಲ ಡೀಲ್ ರೂ 40 ಲಕ್ಷ ಗೂ.ಗಳದ್ದಾಗಿತ್ತು. ನಂತರ ಅವರ ಕೆಲಸ ಕ್ರಮೇಣ ಹೆಚ್ಚಾಯಿತು ಮತ್ತು 2004 ರಲ್ಲಿ ಅವರು ಸ್ಕಾಟ್ಲೆಂಡ್‌ನಲ್ಲಿ ಪಿಜಿ ಪೇಪರ್ ಎಂಬ ಕಂಪನಿಯನ್ನು ನೋಂದಾಯಿಸಿದರು. ಇದರ ನಂತರ, ಪೂನಂಮ್ ತನ್ನ ಕೆಲಸವನ್ನು ಮತ್ತಷ್ಟು ಮುಂದಕ್ಕೆ ತೆಗೆದುಕೊಂಡು ಹೋದರು ಮತ್ತು ಇತರ ದೇಶಗಳ ಕಂಪನಿಗಳಿಂದ ಸ್ಕ್ರ್ಯಾಪ್ ಪೇಪರ್ ಖರೀದಿಸಲು ಆರಂಭಿಸಿದರು.


ಇದನ್ನೂ ಓದಿ-ಚಿನ್ನದ ಈ ಸಂಗತಿಯ ಮೇಲೆ ಜನ ಹೆಚ್ಚಿನ ಹಣ ಹೂಡಿಕೆ ಮಾಡುತ್ತಿದ್ದಾರೆ, ಮೂರೇ ತಿಂಗಳಿನಲ್ಲಿ....!


ಪೂನಂ ಯಶಸ್ಸನ್ನು ಪಡೆಯುತ್ತಲೇ ಸಾಗಿದರು ಮತ್ತು ಅವರು ಇತರ ಕ್ಷೇತ್ರಗಳಲ್ಲಿಯೂ ತಮ್ಮ ಅದೃಷ್ಟವನ್ನು ಕಂಡುಕೊಳ್ಳಲು ಯತ್ನಿಸಿದರು. ಇಂದು ಅವರು ಒಟ್ಟು ಒಂಬತ್ತು ಕಂಪನಿಗಳನ್ನು ಹೊಂದಿದ್ದಾರೆ ಮತ್ತು 60 ಕ್ಕೂ ಹೆಚ್ಚು ದೇಶಗಳಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಅವರ ಕಂಪನಿಯ ಜಾಲ ಸಾವಿರ ಕೋಟಿ ರೂ.ಗಳಿಗೂ ಮೀರಿದೆ.


ಇದನ್ನೂ ಓದಿ-ಕೇವಲ 8.29 ಲಕ್ಷ ರೂ. ಬೆಲೆಯ ಈ ಎಸ್ಯುವಿ ಖರೀದಿಗೆ ಜನ ಮುಗಿಬಿದ್ದಿದ್ದಾರೆ...!


ತಮ್ಮ ಯಶಸ್ಸಿನ ಕುರಿತು ಮಾತನಾಡಿದ ಪೂನಂ, ಭಾರತದಲ್ಲಿ ಸಾಮಾನ್ಯವಾಗಿ ಜನರು ಹಳೆಯ ವಸ್ತುಗಳ ಮೇಲೆ ಅತಿಯಾದ ಬಾಂಧವ್ಯ ಹೊಂದಿರುತ್ತಾರೆ ಮತ್ತು ಯಾರೂ ಅವುಗಳನ್ನು ಸುಲಭವಾಗಿ ಬಿಟ್ಟುಕೊಡುವುದಿಲ್ಲ. ಅದರ ಉಪಯೋಗ ಮುಗಿದ ಬಳಿಕವೂ ಕೂಡ ಯಾವುದನ್ನೂ ಭಾರತೀಯರು ತಿರಸ್ಕರಿಸುವುದಿಲ್ಲ, ಕೆಲಸ ಮುಗಿದ ನಂತರ ಅದನ್ನು ಬೇರೆ ಕೆಲಸದಲ್ಲಿ ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ಆಲೋಚಿಸುತ್ತಾರೆ, ಭಾರತದ ಈ ಚಿಂತನೆಯು ನನ್ನ ಈ ವ್ಯವಹಾರಕ್ಕೆ ಸಾಕಷ್ಟು ಪ್ರೇರಣೆ ನೀಡಿದೆ ಎಂದು ಹೇಳುತ್ತಾರೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.