Sugar Price Hike: ಜನಸಾಮಾನ್ಯರಿಗೆ ಮತ್ತೊಂದು ಶಾಕ್; ಸಕ್ಕರೆ ದರ ಏರಿಕೆ!
Sugar Price Hike: ಈ ವರ್ಷ ಕೇವಲ 330 ಲಕ್ಷ ಟನ್ ಸಕ್ಕರೆ ಉತ್ಪಾದನೆ ನಿರೀಕ್ಷೆಯಿದೆ. ಉತ್ಪಾದನೆ ಕಡಿಮೆಯಾಗಲಿರುವ ಹಿನ್ನೆಲೆ ಶೀಘ್ರವೇ ಸಕ್ಕರೆ ದರ ಏರಿಕೆ ಸಾಧ್ಯತೆ ಇದೆ. ಕೇಂದ್ರ ಸರ್ಕಾರ ಸಕ್ಕರೆ ದರ ನಿಯಂತ್ರಣಕ್ಕೆ ಮುಂದಿನ ತಿಂಗಳು ಸಕ್ಕರೆ ರಫ್ತು ನಿಷೇಧಿಸಬಹುದು ಎಂದು ವರದಿಯಾಗಿದೆ.
ನವದೆಹಲಿ: ಹಣ್ಣು-ತರಕಾರಿ, ಪೆಟ್ರೋಲ್-ಡಿಸೇಲ್ ಸೇರಿದಂತೆ ಅಗತ್ಯವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ದೇಶದ ಜನಸಾಮಾನ್ಯರಿಗೆ ಇದೀಗ ಮತ್ತೊಂದು ಶಾಕ್ ಎದುರಾಗಿದೆ. ಶೀಘ್ರವೇ ಸಕ್ಕರೆ ದರವೂ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಹೌದು, ದೇಶದಲ್ಲಿ ಸಕ್ಕರೆ ಉತ್ಪಾದನೆ ಇಳಿಕೆಯಾಗಿದ್ದು, ಸಕ್ಕರೆ ದರ ಏರಿಕೆಯಾಗುವ ಸಂಭವ ಇದೆ ಎಂದು ವರದಿಯಾಗಿದೆ. ಮಳೆ ಕೊರತೆಯ ಕಾರಣ ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಸಕ್ಕರೆ ಉತ್ಪಾದನೆ ಕಡಿಮೆಯಾಗಲಿದೆ ಎಂದು ರಾಷ್ಟ್ರೀಯ ಸಕ್ಕರೆ ಕಾರ್ಖಾನೆಗಳ ಸಹಕಾರ ಒಕ್ಕೂಟವು ತಿಳಿಸಿದೆ.
ಇದನ್ನೂ ಓದಿ: ಅತ್ಯಲ್ಪ ಹೂಡಿಕೆ ಮಾಡಿ ಈ ಉದ್ಯಮ ಆರಂಭಿಸಿ ತಿಂಗಳಿಗೆ 60 ಸಾವಿರಕ್ಕೂ ಅಧಿಕ ಸಂಪಾದನೆ ಮಾಡಿ!
ಈ ವರ್ಷ ಕೇವಲ 330 ಲಕ್ಷ ಟನ್ ಸಕ್ಕರೆ ಉತ್ಪಾದನೆ ನಿರೀಕ್ಷೆಯಿದೆ. ಉತ್ಪಾದನೆ ಕಡಿಮೆಯಾಗಲಿರುವ ಹಿನ್ನೆಲೆ ಶೀಘ್ರವೇ ಸಕ್ಕರೆ ದರ ಏರಿಕೆ ಸಾಧ್ಯತೆ ಇದೆ. ಕೇಂದ್ರ ಸರ್ಕಾರ ಸಕ್ಕರೆ ದರ ನಿಯಂತ್ರಣಕ್ಕೆ ಮುಂದಿನ ತಿಂಗಳು ಸಕ್ಕರೆ ರಫ್ತು ನಿಷೇಧಿಸಬಹುದು ಎಂದು ವರದಿಯಾಗಿದೆ.
ಒಂದು ವೇಳೆ ಕೇಂದ್ರ ಸರ್ಕಾರವು ಸಕ್ಕರೆ ರಫ್ತಿನ ಮೇಲೆ ನಿಷೇಧ ಹೇರಿದ್ದಲ್ಲಿ ಜಾಗತಿಕ ಮಟ್ಟದಲ್ಲಿ ಸಕ್ಕರೆ ದರ ಹೆಚ್ಚಳ ಸಾಧ್ಯತೆ ಇದೆ. ಇದಲ್ಲದೆ ಜಾಗತಿಕ ಆಹಾರ ಮಾರುಕಟ್ಟೆಗಳಲ್ಲಿ ಹಣದುಬ್ಬರ ಸಹ ಹೆಚ್ಚಾಗಲಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಶ್ರಾವಣದಲ್ಲಿ ನಿರಂತರ ಇಳಿಕೆ ಕಾಣುತ್ತಿದೆ ಚಿನ್ನದ ಬೆಲೆ: ಇಂದು 10 ಗ್ರಾಂ ಬಂಗಾರದ ದರ ಎಷ್ಟಿದೆ ಗೊತ್ತಾ?
ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಸರಾಸರಿಗಿಂತ ಶೇ.50ರಷ್ಟು ಕಡಿಮೆ ಪ್ರಮಾಣದಲ್ಲಿ ಮುಂಗಾರು ಮಳೆಯಾಗಿದೆ. ಇದು ಸಕ್ಕರೆ ಉತ್ಪಾದನೆ ಮೇಲೆ ನೇರ ಪರಿಣಾಮ ಬೀರಲಿದ್ದು, ಉತ್ಪಾದನೆ ಕಡಿಮೆಯಾಗಿದೆ. ಇದರಿಂದ ದರ ಏರಿಕೆ ಅನಿವಾರ್ಯವಾಗಿದೆ ಎಂದು ಹೇಳಲಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.