ನವದೆಹಲಿ: ನೀವು ತಂದೆಯಾಗಿದ್ದರೆ ನಿಮ್ಮ ಮಗಳ ಭವಿಷ್ಯವನ್ನು ಆರ್ಥಿಕವಾಗಿ ಸಮೃದ್ಧವಾಗಿರಿಸಬಹುದು. ಮಗಳು ಎಂದಿಗೂ ಹಣದ ಸಮಸ್ಯೆ ಎದುರಿಸಬಾರದು ಅಂತಾ ಬಯಸಿದರೆ ಸರ್ಕಾರದ ಈ ಅದ್ಭುತ ಯೋಜನೆಯಲ್ಲಿ ಹೂಡಿಕೆ ಪ್ರಾರಂಭಿಸಬಹುದು. ಈ ವಿಶೇಷ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ನಿಮ್ಮ ಮಗಳು 21 ವರ್ಷಗಳಲ್ಲಿ ಮಿಲಿಯನೇರ್ ಆಗುತ್ತಾಳೆ. ಈ ಯೋಜನೆಯಲ್ಲಿ ನೀವು ಪ್ರತಿದಿನ 416 ರೂ. ಹೂಡಿಕೆ ಮಾಡಬೇಕು. ಈ 416 ರೂ. ಸಣ್ಣ ಮೊತ್ತದ ಹೂಡಿಕೆಯು ನಿಮ್ಮ ಮಗಳಿಗೆ 65 ಲಕ್ಷ ರೂ.ನಷ್ಟು ಸಂಪತ್ತನ್ನು ಸೃಷ್ಟಿಸಿಕೊಡುತ್ತದೆ. ಇದರೊಂದಿಗೆ ನಿಮ್ಮ ಮಗಳ ವಿದ್ಯಾಭ್ಯಾಸದ ಖರ್ಚು ಕೂಡ ಸುಲಭವಾಗುತ್ತದೆ.


COMMERCIAL BREAK
SCROLL TO CONTINUE READING

ಸುಕನ್ಯಾ ಸಮೃದ್ಧಿ ಯೋಜನೆ  


ಸುಕನ್ಯಾ ಸಮೃದ್ಧಿ ದೀರ್ಘಾವಧಿಯ ಯೋಜನೆಯಾಗಿದ್ದು, ಇದರಲ್ಲಿ ಹೂಡಿಕೆ ಮಾಡುವ ಮೂಲಕ ನಿಮ್ಮ ಮಗಳ ಶಿಕ್ಷಣ ಮತ್ತು ಉಜ್ವಲ ಭವಿಷ್ಯವನ್ನು ರೂಪಿಸಬಹುದು. ಇದಕ್ಕಾಗಿ ನೀವು ಹೆಚ್ಚು ಹಣ ಹೂಡಿಕೆ ಮಾಡುವ ಅಗತ್ಯವಿಲ್ಲ. ಈ ಯೋಜನೆಯಲ್ಲಿ ಹಲವು ಪ್ರಮುಖ ಬದಲಾವಣೆಗಳಾಗುತ್ತಿವೆ. ಹೊಸ ನಿಯಮಗಳಡಿ ಖಾತೆಯಲ್ಲಿನ Wrong Interestನ್ನು ಹಿಂತಿರುಗಿಸುವ ನಿಬಂಧನೆಯನ್ನು ತೆಗೆದುಹಾಕಲಾಗಿದೆ. ಇದಲ್ಲದೆ ಪ್ರತಿ ಹಣಕಾಸು ವರ್ಷದ ಕೊನೆಯಲ್ಲಿ ಖಾತೆಯ ವಾರ್ಷಿಕ ಬಡ್ಡಿಯನ್ನು ಜಮಾ ಮಾಡಲಾಗುತ್ತದೆ. ನಿಮ್ಮ ಮಗಳು 10 ವರ್ಷಗಳ ನಂತರವೇ ಖಾತೆ ನಿರ್ವಹಿಸಬಹುದೆಂಬ ನಿಯಮ ಮೊದಲು ಇತ್ತು. ಆದರೆ ಹೊಸ ನಿಯಮಗಳ ಪ್ರಕಾರ ನಿಮ್ಮ ಮಗಳಿಗೆ 18 ವರ್ಷಕ್ಕಿಂತ ಮೊದಲು ಖಾತೆಯನ್ನು ನಿರ್ವಹಿಸಲು ಅನುಮತಿಸುವುದಿಲ್ಲ. ಪೋಷಕರು ಮಾತ್ರ ಖಾತೆಯನ್ನು ನಿರ್ವಹಿಸುವುದನ್ನು ಮುಂದುವರಿಸುತ್ತಾರೆ.


ಇದನ್ನೂ ಓದಿ: Arecanut Price: ಅಡಿಕೆ ಧಾರಣೆ, ಯಾವ್ಯಾವ ಮಾರುಕಟ್ಟೆಯಲ್ಲಿ ಹೇಗಿದೆ..?


ಈಗ 3ನೇ ಮಗಳ ಖಾತೆಯನ್ನೂ ತೆರೆಯಬಹುದು


ಈ ಮೊದಲು ಈ ಯೋಜನೆಯ 80C ಅಡಿಯಲ್ಲಿ ತೆರಿಗೆ ವಿನಾಯಿತಿಯ ಪ್ರಯೋಜನವು ಇಬ್ಬರು ಹೆಣ್ಣುಮಕ್ಕಳ ಖಾತೆಯಲ್ಲಿ ಮಾತ್ರ ಲಭ್ಯವಿತ್ತು. ಈ ಪ್ರಯೋಜನ 3ನೇ ಮಗಳಿಗೆ ಲಭ್ಯವಾಗುತ್ತಿರಲಿಲ್ಲ. ಹೊಸ ನಿಯಮದ ಪ್ರಕಾರ ಒಬ್ಬ ಹೆಣ್ಣು ಮಗುವಿನ ನಂತರ ಇಬ್ಬರು ಅವಳಿ ಹೆಣ್ಣುಮಕ್ಕಳು ಜನಿಸಿದರೆ, ಇಬ್ಬರಿಗೂ ಖಾತೆ ತೆರೆಯಲು ಅವಕಾಶವಿರುತ್ತದೆ.


ಡೀಫಾಲ್ಟ್ ಖಾತೆಯಲ್ಲಿ ಬಡ್ಡಿ ದರ ಬದಲಾಗುವುದಿಲ್ಲ


ಇದರಡಿ ವಾರ್ಷಿಕವಾಗಿ ಖಾತೆಯಲ್ಲಿ ಕನಿಷ್ಠ 250 ರೂ. ಇಡಬೇಕು. ಈ ಮೊತ್ತವನ್ನು ಠೇವಣಿ ಮಾಡದಿದ್ದಲ್ಲಿ ಖಾತೆಯನ್ನು ಡೀಫಾಲ್ಟ್ ಎಂದು ಪರಿಗಣಿಸಲಾಗುತ್ತಿತ್ತು. ಆದರೆ ಹೊಸ ನಿಯಮಗಳ ಪ್ರಕಾರ ಖಾತೆಯನ್ನು ಮತ್ತೆ ಸಕ್ರಿಯಗೊಳಿಸದಿದ್ದರೆ ಮುಕ್ತಾಯದವರೆಗೆ ಖಾತೆಯಲ್ಲಿ ಠೇವಣಿ ಮಾಡಿದ ಮೊತ್ತದ ಮೇಲೆ ಅನ್ವಯವಾಗುವ ದರದಲ್ಲಿ ಬಡ್ಡಿ ಮುಂದುವರಿಯುತ್ತದೆ. ಹಿಂದೆ ಡೀಫಾಲ್ಟ್ ಖಾತೆಗಳು ಪೋಸ್ಟ್ ಆಫೀಸ್ ಉಳಿತಾಯ ಖಾತೆಗೆ ಅನ್ವಯವಾಗುವ ದರದಲ್ಲಿ ಬಡ್ಡಿಯನ್ನು ಗಳಿಸುತ್ತಿದ್ದವು.


ಇದನ್ನೂ ಓದಿ: Hero Bikes: ಈ ಹಬ್ಬಗಳಲ್ಲಿ ಹೀರೋ 8 ಹೊಸ ಸ್ಕೂಟರ್ ಮತ್ತು ಬೈಕ್ ಬಿಡುಗಡೆ ಮಾಡಲಿದೆ!


ಮುಂಚಿತವಾಗಿ ಖಾತೆ ಕ್ಲೋಸ್ ಮಾಡಬಹುದು 


ಸುಕನ್ಯಾ ಸಮೃದ್ಧಿ ಯೋಜನೆಡಿ ತೆರೆಯಲಾದ ಖಾತೆಯನ್ನು ಎರಡು ರೀತಿ ಕ್ಲೋಸ್ ಮಾಡಬಹುದು. ಮಗಳು ಸಾನ್ನಪ್ಪಿದರೆ ಮತ್ತು ಮಗಳ ನಿವಾಸದ ವಿಳಾಸವನ್ನು ಬದಲಾಯಿಸಿದರೆ. ಹೊಸ ಬದಲಾವಣೆಯ ಪ್ರಕಾರ ಖಾತೆದಾರರ ಮಾರಣಾಂತಿಕ ಕಾಯಿಲೆಯೂ ಇದರಲ್ಲಿ ಸೇರಿಸಲಾಗಿದೆ. ಗಾರ್ಡಿಯನ್ ಮರಣದ ಸಂದರ್ಭದಲ್ಲಿಯೂ ಖಾತೆಯನ್ನು ಅವಧಿಗೂ ಮುನ್ನ ಮುಚ್ಚಬಹುದಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.