ನವದೆಹಲಿ : Sukanya Samriddhi Yojana : ಸುಕನ್ಯಾ ಸಮೃದ್ಧಿ ಯೋಜನೆ ಸರ್ಕಾರಿ ಸ್ಕೀಮ್ ಆಗಿದೆ. ಇದರಲ್ಲಿ ಕಡಿಮೆ ಹೂಡಿಕೆ ಮಾಡಿ, ಅಧಿಕ ಲಾಭ ಪಡೆಯಬಹುದಾಗಿದೆ.  ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ (SSY) ಹೂಡಿಕೆ ಮಾಡುವುದರೊಂದಿಗೆ ನಿಮ್ಮ  ಮುದ್ದು ಮಗಳ ಭವಿಷ್ಯವನ್ನು ಆರ್ಥಿಕವಾಗಿ ಭದ್ರಗೊಳಿಸಬಹುದು. ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ಆದಾಯ ತೆರಿಗೆಯಲ್ಲಿಯೂ ವಿನಾಯಿತಿ ಸಿಗಲಿದೆ. 


COMMERCIAL BREAK
SCROLL TO CONTINUE READING

ಏನಿದು ಸುಕನ್ಯಾ ಸಮೃದ್ಧಿ ಯೋಜನೆ ? 
ಸುಕನ್ಯಾ ಸಮೃದ್ಧಿ ಯೋಜನೆಯನ್ನು  (Sukanya Samriddhi Yojana ) ಬೇಟಿ ಬಚಾವೋ ಬೇಟಿ ಪಡಾವೋ ಸ್ಕೀಮ್ ಅಡಿ  ಆರಂಭಿಸಲಾಗಿದೆ. ಇದು ಹೆಣ್ಣು ಮಕ್ಕಳಿಗಾಗಿ ಇರುವ ಸಣ್ಣ ಉಳಿತಾಯ ಯೋಜನೆಯಾಗಿದೆ. ಸಣ್ಣ ಉಳಿತಾಯ ಯೋಜನೆಗಳಲ್ಲಿ ಸುಕನ್ಯಾ ಅತ್ಯುತ್ತಮ ಬಡ್ಡಿ (Interest) ನೀಡುವ ಸ್ಕೀಮ್ ಆಗಿದೆ. ಹೂಡಿಕೆದಾರರಿಗೆ ಉತ್ತಮ ಆದಾಯದ ಜೊತೆಗೆ ತೆರಿಗೆ ಉಳಿಸಲು ಕೂಡಾ ಸಹಾಯ ಮಾಡುತ್ತದೆ.


ಇದನ್ನೂ ಓದಿ : LIC Kanyadan Policy : LIC ಈ ಹೊಸ ಯೋಜನೆಯಲ್ಲಿ ಕೇವಲ ₹121 ಪಾವತಿಸಿ : ಮಗಳ ಮದುವೆ ವೇಳೆಗೆ ಸಿಗಲಿದೆ 27 ಲಕ್ಷ ರೂ.


ಯಾವೆಲ್ಲಾ ದಾಖಲೆಗಳು ಬೇಕು ? 
ಸುಕನ್ಯಾ ಸಮೃದ್ಧಿ ಯೋಜನೆಯಡಿ, ಯಾವುದೇ ಅಂಚೆ ಕಚೇರಿ (Post office) ಅಥವಾ ವಾಣಿಜ್ಯ ಬ್ರಾಂಚ್ ನ  ಯಾವುದೇ ಅಧಿಕೃತ ಶಾಖೆಯಲ್ಲಿ ಖಾತೆಯನ್ನು ತೆರೆಯಬಹುದು. ಈ ಯೋಜನೆಯಡಿ, ಹೆಣ್ಣು ಮಗು ಜನಿಸಿದ ನಂತರ 10 ವರ್ಷಕ್ಕಿಂತ ಮುಂಚೆ ಕನಿಷ್ಠ 250 ರೂಪಾಯಿ ಠೇವಣಿಯೊಂದಿಗೆ ಖಾತೆಯನ್ನು ತೆರೆಯಬಹುದು. ಪ್ರಸಕ್ತ ಹಣಕಾಸು ವರ್ಷದಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯಡಿ ಗರಿಷ್ಠ 1.5 ಲಕ್ಷ ರೂ.ಯನ್ನು ಹೂಡಿಕೆ ಮಾಡಬಹುದಾಗಿದೆ. 


-ಖಾತೆಯನ್ನು ತೆರೆಯಲು, ಮಗುವಿನ ಜನನ ಪ್ರಮಾಣಪತ್ರವನ್ನು  ಅಂಚೆ ಕಚೇರಿಯಲ್ಲಿ ಅಥವಾ ಬ್ಯಾಂಕ್‌ನಲ್ಲಿ (Bnak) ಸಲ್ಲಿಸಬೇಕು.
-ಮಗು ಮತ್ತು ಪೋಷಕರ ಗುರುತಿನ ಚೀಟಿಯಾದ ಪ್ಯಾನ್ ಕಾರ್ಡ್ (PAN Card) , ಪಡಿತರ ಚೀಟಿ, ಡ್ರೈವಿಂಗ್ ಲೈಸೆನ್ಸ್ , ಪಾಸ್‌ಪೋರ್ಟ್ ಯಾವುದಾದರೊಂದು ನೀಡಬೇಕಾಗುತ್ತದೆ.
- ಅಡ್ರೆಸ್ಸ್ ಪ್ರ್ರೋಫ್ ಗಾಗಿ ಪಾಸ್‌ಪೋರ್ಟ್, ಪಡಿತರ ಚೀಟಿ (Ration card), ವಿದ್ಯುತ್ ಬಿಲ್, ದೂರವಾಣಿ ಬಿಲ್, ನೀರಿನ ಬಿಲ್ ಇವುಗಳಲ್ಲಿ ಯಾವುದಾದರು ಒಂದನ್ನು ಸಲ್ಲಿಸಬೇಕು.


ಇದನ್ನೂ ಓದಿ : PF ಖಾತೆದಾರರಿಗೆ ಸಿಹಿ ಸುದ್ದಿ : ಇಂದು ಖಾತೆಗೆ ಜಮಾ ಆಗಬಹುದು ಶೇ 8.5 ಬಡ್ಡಿ ಹಣ!


ಎಲ್ಲಿಯವರೆಗೆ ಹೂಡಿಕೆ ಮಾಡಬಹುದು ? 
ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಮಗಳಿಗೆ 21 ವರ್ಷ ತುಂಬುವವರೆಗೆ ಅಥವಾ 18 ವರ್ಷದ ನಂತರ ಮದುವೆಯಾಗುವವರೆಗೆ ಹೂಡಿಕೆ ಮಾಡಬಹುದು. ಆದರೆ, ಪ್ರತಿ ವರ್ಷ ಕನಿಷ್ಠ ಠೇವಣಿ 250 ರೂ.ಗಳನ್ನು ಮಾಡದಿದ್ದರೆ, ಖಾತೆಯನ್ನು ಮುಚ್ಚಲಾಗುತ್ತದೆ. ನಂತರ ಆ ವರ್ಷಕ್ಕೆ ಜಮಾ ಮಾಡಬೇಕಾದ ಕನಿಷ್ಠ ಮೊತ್ತವನ್ನು ವಾರ್ಷಿಕ 50 ರೂ ದಂಡದೊಂದಿಗೆ ರಿವೈಸ್ ಮಾಡಬೇಕು. ಖಾತೆ ತೆರೆದ ನಂತರ 15 ವರ್ಷಗಳವರೆಗೆ ರಿ ಆಕ್ಟಿವೆಶನ್ ಮಾಡಬಹುದು. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ