sukanya samriddhi yojana: ಪ್ರತಿಯೊಬ್ಬ ಪೋಷಕರು ತಮ್ಮ ಮಗುವಿನ ಸುವರ್ಣ ಭವಿಷ್ಯಕ್ಕಾಗಿ ಹೂಡಿಕೆ ಯೋಜನೆಗಳನ್ನು ಮಾಡುತ್ತಾರೆ. ಇದು ಅವರ ವಿದ್ಯಾಭ್ಯಾಸಕ್ಕೆ ಮತ್ತು ಮದುವೆಯ ಖರ್ಚಿಗೆ ತುಂಬಾ ಉಪಯೋಗವಾಗಲಿ ಎಂಬುದು ಮುಖ್ಯ ಉದ್ದೇಶವಾಗಿರುತ್ತದೆ. ಕೇಂದ್ರ ಸರ್ಕಾರ ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿ ದರವನ್ನು ಹೆಚ್ಚಿಸಿದೆ. ಮೊದಲು ಈ ಯೋಜನೆಯ ಹೂಡಿಕೆಯ ಮೇಲೆ 8% ಬಡ್ಡಿಯನ್ನು ನೀಡುತ್ತಿತ್ತು, ಈಗ ಅದು 8.2% ಕ್ಕೆ ಏರಿದೆ. ಈ ಯೋಜನೆಯಲ್ಲಿ ಕನಿಷ್ಠ ರೂ. 250 ರಿಂದ ಗರಿಷ್ಠ ರೂ. 1.5 ಲಕ್ಷ ಹೂಡಿಕೆ ಮಾಡಬಹುದು. ದೀರ್ಘಾವಧಿಯ ಹೂಡಿಕೆಯಿಂದ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೆಚ್ಚು ಲಾಭ ಪಡೆಯಬಹುದು. 


COMMERCIAL BREAK
SCROLL TO CONTINUE READING

ಇದನ್ನೂ ಓದಿ:  ಸೈಬರ್ ವಂಚನೆ: ಬ್ಯಾಂಕ್‌ ಖಾತೆ ಹೊಂದಿರುವವರಿಗೆ ಮತ್ತೊಮ್ಮೆ ಎಚ್ಚರಿಕೆ ನೀಡಿದ ಆರ್‌ಬಿಐ!


ಇಲ್ಲಿ ನೆನಪಿಡಬೇಕಾದ ಅಂಶವೆಂದರೆ ಈ ಯೋಜನೆಯಡಿ ಸುಕನ್ಯಾ ಸಮೃದ್ಧಿ ಖಾತೆಯನ್ನು 10 ವರ್ಷದ ಒಳಿಗಿನವರಿಗೆ ಮಾತ್ರ ತೆರೆಯಲಾಗುತ್ತದೆ. ಈ ಖಾತೆಯು 21 ವರ್ಷಗಳ ಬಳಿಕ ಮೆಚ್ಯುರಿಟಿ ಆಗುತ್ತದೆ. ನಿಮ್ಮ ಮಗಳಿಗೆ 18 ವರ್ಷ ತುಂಬಿದಾಗ, ಶಿಕ್ಷಣ ಅಥವಾ ಮದುವೆಗಾಗಿ ಉಳಿಸಿದ ಹಣದಲ್ಲಿ 50 ಪ್ರತಿಶತದವರೆಗೆ ಹಿಂಪಡೆಯಬಹುದು. 


ನೀವು ತಿಂಗಳಿಗೆ 4,000 ಉಳಿಸಿದರೆ, ಒಂದು ವರ್ಷದಲ್ಲಿ 48,000 ರೂ. ಹೂಡಿಕೆ ಮಾಡಿದಂತಾಗುತ್ತದೆ. ಈ ರೀತಿ 15 ವರ್ಷಗಳವರೆಗೆ ಖಾತೆಗೆ ಹಣ ಜಮಾ ಮಾಡಬೇಕು. ಈ ಹೂಡಿಕೆಯನ್ನು 2042 ರೊಳಗೆ ಮಾಡಬೇಕು. ಈ ಮೂಲಕ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ 7 ಲಕ್ಷ 20 ಸಾವಿರ ರೂ. ಆಗುತ್ತದೆ


21 ವರ್ಷಗಳ ಮೆಚ್ಯೂರಿಟಿ ನಂತರ ಅಂದರೆ 2045ರಲ್ಲಿ ರೂ.15 ಲಕ್ಷದ 14 ಸಾವಿರ ಸಿಗುತ್ತದೆ. ಮೆಚ್ಯೂರಿಟಿ ಸಮಯದಲ್ಲಿ ಹೂಡಿಕೆ ಮೊತ್ತ ಮತ್ತು ಅದರ ಮೇಲಿನ ಬಡ್ಡಿಯನ್ನು ಸೇರಿಸಿದರೆ ಒಟ್ಟು 22 ಲಕ್ಷ 34 ಸಾವಿರ ರೂ. ಸಿಗುವುದು.  


ಇದನ್ನೂ ಓದಿ:  Gold Rate: ವಾರಾಂತ್ಯದಲ್ಲಿ ಚಿನ್ನದ ದರ ಏರಿಕೆ: ಬೆಳ್ಳಿಯ ಬೆಲೆ ಸ್ಥಿರತೆ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.