ಆಗ್ರಾ: ವಿಶ್ವದ ಏಳನೇ ಅದ್ಭುತ, ತಾಜ್ ಮಹಲ್  (7th Wonder of The World) ನೋಡುವುದು ಯಾರಿಗೆ ತಾನೇ ಇಷ್ಟವಿಲ್ಲ. ಕರೋನಾ ಅವಧಿಯಲ್ಲಿ ತಾಜ್ ಮಹಲ್ ಗೆ ತೆರಳುವವರ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದರೂ, ಕರೋನಾಗೆ ಮೊದಲು ಸಾವಿರಾರು ದೇಶೀಯ ಮತ್ತು ವಿದೇಶಿ ಪ್ರವಾಸಿಗರು ತಾಜ್‌ಗೆ ಭೇಟಿ ನೀಡುತ್ತಿದ್ದರು. ತಾಜ್‌ಮಹಲ್‌ನ ಹೊರತಾಗಿ ಆಗ್ರಾದಲ್ಲಿ ಪ್ರವಾಸಿಗರು ಭೇಟಿ ನೀಡುವ ಇತರ ಸ್ಮಾರಕಗಳೂ ಕೂಡ ಇವೆ.


COMMERCIAL BREAK
SCROLL TO CONTINUE READING

ತಾಜ್ ಮಹಲ್ ಟಿಕೆಟ್ ದರ ಹೆಚ್ಚಾಗಬಹುದು:
ಎಡಿಎ ಸಭೆಯಲ್ಲಿ ತಾಜ್‌ಮಹಲ್‌ನ (Taj Mahal) ಟಿಕೆಟ್ ದರವನ್ನು ಹೆಚ್ಚಿಸಲು ಒಪ್ಪಲಾಗಿದೆ. ಹೊಸ ದರ ಪಟ್ಟಿಯ ಪ್ರಕಾರ, ತಾಜ್‌ಮಹಲ್‌ನ ಮುಖ್ಯ ಗುಮ್ಮಟಕ್ಕೆ ಭೇಟಿ ನೀಡುವ ಭಾರತೀಯ ಪ್ರವಾಸಿಗರು 400 ರೂಪಾಯಿ ಟಿಕೆಟ್ ಖರೀದಿಸಬೇಕಾಗುತ್ತದೆ. ಭಾರತೀಯ ಪ್ರವಾಸಿಗರು ಪ್ರವೇಶ ಶುಲ್ಕವಾಗಿ 80 ರೂ. ಪಾವತಿಸಬೇಕಾಗುತ್ತದೆ. ತಾಜ್‌ಗೆ ಭೇಟಿ ನೀಡುವ ಭಾರತೀಯ ಪ್ರವಾಸಿಗರು ಒಟ್ಟು 480 ರೂ. ಖರ್ಚು ಮಾಡಬೇಕಾಗಿದೆ.  ಪ್ರಸ್ತುತ ಶುಲ್ಕ 250 ರೂ. ಆಗಿದೆ.


ವಿದೇಶಿ ಪ್ರವಾಸಿಗರಿಗೂ ಹೊಸ ದರಗಳು :
ಹೊಸ ದರ ಪಟ್ಟಿ ಎಲ್ಲಾ ಪ್ರವಾಸಿಗರ ಮೇಲೆ ಪರಿಣಾಮ ಬೀರುತ್ತದೆ. ವಿದೇಶಿ ಪ್ರವಾಸಿಗರ ಜೊತೆಗೆ, ಸಾರ್ಕ್ ದೇಶಗಳ ಪ್ರವಾಸಿಗರು ಸಹ ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ. ಸರ್ಕಾರದ ಅನುಮೋದನೆಯ ನಂತರ, ವಿದೇಶಿ ಪ್ರವಾಸಿಗರು ತಾಜ್‌ಮಹಲ್‌ಗೆ ಭೇಟಿ ನೀಡಲು 1600 ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ, ಅದು ಈಗ 1100 ರೂಪಾಯಿಗಳು. ಸಾರ್ಕ್ ಮತ್ತು ಬಿಮ್ಸ್ಟೆಕ್ ದೇಶಗಳ ಪ್ರವಾಸಿಗರು ಸ್ವಲ್ಪ ಹೆಚ್ಚು ಹಣವನ್ನು ಪಾವತಿಸಬೇಕಾಗಬಹುದು.


ಇದನ್ನೂ ಓದಿ - 


ಆಗ್ರಾದಲ್ಲಿನ ಎಲ್ಲಾ ಸ್ಮಾರಕಗಳ ಟಿಕೆಟ್‌ಗಳು ದುಬಾರಿಯಾಗಲಿವೆ:
ಸರ್ಕಾರದ ಅನುಮೋದನೆ ಪಡೆದ ನಂತರ ಆಗ್ರಾದ ತಾಜ್‌ಮಹಲ್ ಸೇರಿದಂತೆ ಎಲ್ಲಾ ಸ್ಮಾರಕಗಳು ದುಬಾರಿಯಾಗಲಿವೆ. ಆಗ್ರಾದಲ್ಲಿ ಒಟ್ಟು 8 ಸ್ಮಾರಕಗಳಿದ್ದು, ಎಡಿಎ ಟಿಕೆಟ್ ಮೂಲಕ ಆದಾಯವನ್ನು ಸಂಗ್ರಹಿಸುತ್ತದೆ. ಪ್ರಸ್ತುತ, ದರ ಪಟ್ಟಿಯ ಬಗ್ಗೆ ನಾವು ನಿಮಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತಿದ್ದೇವೆ.


ಇದನ್ನೂ ಓದಿ - 


ಸ್ಮಾರಕ  ದೇಶೀ ಪ್ರವಾಸಿಗರು ವಿದೇಶಿ ಪ್ರವಾಸಿಗರು ಸಾರ್ಕ್ ಮತ್ತು ಬಿಮ್ಸ್ಟೆಕ್
ತಾಜ್ ಮಹಲ್ 50 1100 540
ಆಗ್ರಾ ಕೋಟೆ 50 650 90
ಫತೇಪುರ್ ಸಿಕ್ರಿ  50 610 50
ಅಕ್ಬರ್ ಸಮಾಧಿ, ಸಿಕಂದ್ರ 30 310 30
ಎತಮದುದ್ದೌಲಾ  30 310 30
ಮಹತಾಬ್ ಬಾಗ್ 25 300 25
ರಾಮ್ ಬಾಗ್  25 300 25
ಮೇರಿ ಸಮಾಧಿ  25 300 25

ಶುಕ್ರವಾರದಂದು ರಿಯಾಯಿತಿಯನ್ನು ಪಡೆಯಿರಿ :
ತಾಜ್ ಮಹಲ್ ಶುಕ್ರವಾರ ಮುಚ್ಚಲ್ಪಟ್ಟಿರುತ್ತದೆ. ಆದರೆ ಇತರ ಏಳು ಸ್ಮಾರಕಗಳು ತೆರೆದಿರುತ್ತವೆ. ಶುಕ್ರವಾರ ಎಲ್ಲಾ ಪ್ರವಾಸಿಗರು ಇತರ ದಿನಗಳಿಗಿಂತ ಸ್ವಲ್ಪ ಕಡಿಮೆ ಪಾವತಿಸಬೇಕಾಗುತ್ತದೆ. ಈ ಕಾರಣದಿಂದಾಗಿ ಆಗ್ರಾಗೆ ಆಗಾಗ್ಗೆ ಭೇಟಿ ನೀಡುವ ಜನರು ಶುಕ್ರವಾರ ಹೋಗಲು ಬಯಸುತ್ತಾರೆ. 


https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.