ನವದೆಹಲಿ: ಪ್ರಸ್ತುತ ಭಾರತದಲ್ಲಿ ಆರ್ಥಿಕ ವರ್ಷ ಮುಕ್ತಾಯದ ಅವಧಿ ಎಂದರೆ ಆದಾಯ ತೆರಿಗೆ ಉಳಿಸುವ ಸಮಯ ನಡೆಯುತ್ತಿದೆ. ಇವು ಕಳೆದ ಮೂರು ತಿಂಗಳುಗಳಲ್ಲಿ ನೀವು ಹಣವನ್ನು ಹೂಡಿಕೆ ಮಾಡಿದರೆ ತೆರಿಗೆ ಟೆನ್ಷನ್ ಇರುವುದಿಲ್ಲ. ಆದರೆ, ಹಣವನ್ನು ಎಲ್ಲಿ ಹೂಡಿಕೆ ಮಾಡುವುದು? ಎಲ್ಲವೂ ಸೆಕ್ಷನ್ 80 ಸಿ ವಿನಾಯಿತಿಯಲ್ಲಿ ಅಂತ್ಯವಾಗುತ್ತದೆ. ಇದರ ಬಳಿಕವೂ ಯಾವುದೇ ಉತ್ತಮ ಹೂಡಿಕೆ ಆಯ್ಕೆ ಇದೆಯೇ? ಎಂಬ ಪ್ರಶ್ನೆ ತೆರಿಗೆ ಪಾವತಿದಾರರನ್ನು ಕಾಡುತ್ತದೆ. ಖಂಡಿತ ಇದೆ ಮತ್ತು ಅದು ಸರ್ಕಾರಿ ಹೂಡಿಕೆ ಸಾಧನವಾಗಿದೆ. ಇದರ ಹೆಸರು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ, ಇದನ್ನು ಹೊಸ ಪಿಂಚಣಿ ಯೋಜನೆ ಎಂದೂ ಕರೆಯುತ್ತಾರೆ. ಇದು ಡಬಲ್ ತೆರಿಗೆ ಪ್ರಯೋಜನವನ್ನು ಪಡೆಯುವ ಮಾರ್ಗವಾಗಿದೆ. ಇದರಲ್ಲಿ 50,000 ವರೆಗೆ ತೆರಿಗೆ ಪ್ರಯೋಜನ ಪಡೆಯಬಹುದು. ಆದರೆ, ಖುದ್ದಾಗಿ ಎನ್‌ಪಿಎಸ್‌ನಲ್ಲಿ ಹೂಡಿಕೆ ಮಾಡುವುದು ಪ್ರಯೋಜನಕಾರಿಯಲ್ಲ. ಹಾಗಿದ್ರೆ ಲಾಭ ಏನು ಅಂತೀರಾ? ಹೌದು, ವಾಸ್ತವದಲ್ಲಿ ನೀವು ನಿಮ್ಮ ಉದ್ಯೋಗದಾತರ ಮೂಲಕ ಎನ್ಪಿಎಸ್ ಅನ್ನು ತೆಗೆದುಕೊಂಡರೆ, ನೀವು ಹೆಚ್ಚಿನ ಪ್ರಯೋಜನಗಳನ್ನು ಪಡೆಯುತ್ತೀರಿ. ತೆರಿಗೆ ವಿನಾಯಿತಿಯ ಲಾಭವೂ ಸಿಗುತ್ತದೆ. ಹೇಗೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ, (Business News In Kannada)


COMMERCIAL BREAK
SCROLL TO CONTINUE READING

80CCD ಯಲ್ಲಿ ಹೆಚ್ಚುವರಿ ರಿಯಾಯಿತಿ ಲಭ್ಯವಿದೆ
ಎನ್ಪಿಎಸ್ ನಲ್ಲಿ ಹೂಡಿಕೆ ಮಾಡುವಾಗ, ನೀವು ಆದಾಯ ತೆರಿಗೆಯ ಸೆಕ್ಷನ್ 80CCD ಅಡಿಯಲ್ಲಿ ತೆರಿಗೆ ವಿನಾಯಿತಿಯನ್ನು ಪಡೆಯಬಹುದು. ಇದು ಎರಡು ಉಪವಿಭಾಗಗಳನ್ನು ಹೊಂದಿದೆ - 80CCD(1) ಮತ್ತು 80CCD(2). ಇದರ ಹೊರತಾಗಿ, 80CCD(1) 80CCD(1B) ನ ಇನ್ನೊಂದು ಉಪವಿಭಾಗವಿದೆ. ನೀವು 80CCD(1) ಅಡಿಯಲ್ಲಿ ರೂ 1.5 ಲಕ್ಷ ಮತ್ತು 80CCD(1B) ಅಡಿಯಲ್ಲಿ ರೂ 50 ಸಾವಿರ ತೆರಿಗೆ ವಿನಾಯಿತಿ ಪಡೆಯಬಹುದು. ಆದರೆ, 2 ಲಕ್ಷದ ಈ ವಿನಾಯಿತಿಯ ಹೊರತಾಗಿ, 80CCD(2) ಅಡಿಯಲ್ಲಿ ಆದಾಯ ತೆರಿಗೆ ವಿನಾಯಿತಿಯನ್ನು ಸಹ ಪಡೆಯಬಹುದು.


ಹೆಚ್ಚಿನ ತೆರಿಗೆ ವಿನಾಯಿತಿಯ ಲಾಭವನ್ನು ಹೇಗೆ ಪಡೆಯುವುದು?
ಉದ್ಯೋಗದಾತರ ಮೂಲಕ ನೀವು ಎನ್ಪಿಎಸ್ ನಲ್ಲಿ ಹೂಡಿಕೆಯ ಮೇಲೆ ಈ ವಿನಾಯಿತಿ ನಿಮಗೆ ಸಿಗುತ್ತದೆ. ಈ ಎನ್ಪಿಎಸ್ ಉದ್ಯೋಗದಾತರ ಮೂಲಕ ಮಾಡುಸುವುದರಿಂದ ಲಾಭ ಸಿಗುತ್ತದೆ. ಇದರಲ್ಲಿ, ನಿಮ್ಮ ಎನ್ಪಿಎಸ್ ನಲ್ಲಿನ ಹೂಡಿಕೆಯ ಮೇಲಿನ ತೆರಿಗೆ ವಿನಾಯಿತಿಯನ್ನು ಉದ್ಯೋಗದಾತರು ಕ್ಲೈಮ್ ಮಾಡುತ್ತಾರೆ. ಮೂಲ ವೇತನ ಮತ್ತು ತುಟ್ಟಿಭತ್ಯೆಯ 10 ಪ್ರತಿಶತವನ್ನು ಉದ್ಯೋಗದಾತರು ಎನ್ಪಿಎಸ್ ನಲ್ಲಿ ಹೂಡಿಕೆ ಮಾಡಬಹುದು. ಇದೇ ವೇಳೆ, ಕೇಂದ್ರೀಯ ಉದ್ಯೋಗಿಗಳಿಗೆ, ಶೇ. 14 ರಷ್ಟು ಎನ್ಪಿಎಸ್ ನಲ್ಲಿ ಹೂಡಿಕೆ ಮಾಡಲಾಗುತ್ತದೆ, ಇದರ ಮೇಲೆ ತೆರಿಗೆ ವಿನಾಯಿತಿ ಲಭ್ಯವಿದೆ. ಹೆಚ್ಚಿನ ಕಂಪನಿಗಳು ಎನ್ಪಿಎಸ್ ಸೌಲಭ್ಯವನ್ನು ಒದಗಿಸುತ್ತವೆ. ಕಂಪನಿಯ ಎಚ್‌ಆರ್‌ನೊಂದಿಗೆ ಮಾತನಾಡುವ ಮೂಲಕ ನೀವು ಎನ್‌ಪಿಎಸ್‌ನಲ್ಲಿ ಹೂಡಿಕೆ ಮಾಡಬಹುದು. ಹೆಚ್ಚುವರಿ ತೆರಿಗೆ ವಿನಾಯಿತಿಯನ್ನು ಇದರಲ್ಲಿ ಪಡೆಯಬಹುದು ಎಂಬುದು ಇದರ ಪ್ರಯೋಜನವಾಗಿದೆ.


ತೆರಿಗೆಯನ್ನು ಹೇಗೆ ಲೆಕ್ಕ ಹಾಕುವುದು?
ನಿಮ್ಮ ವೇತನ 10 ಲಕ್ಷ ಎಂದು ಭಾವಿಸೋಣ. ಈ ವೇತನವು ತೆರಿಗೆಯ ಆದಾಯವಾಗಿರುತ್ತದೆ. ಆದರೆ, ಒಟ್ಟು ವೇತನದಲ್ಲಿ 80ಸಿ 1.5 ಲಕ್ಷ ಮತ್ತು 80CCD(1B) 50 ಸಾವಿರ ಕಡಿತವನ್ನು ತೆಗೆದುಹಾಕಿ. ಇದರ ನಂತರ, ರೂ 50 ಸಾವಿರ ಸ್ಟ್ಯಾಂಡರ್ಡ್ ಡಿಡಕ್ಷನ್ ಅನ್ನು ಸಹ ಕಳೆಯಿರಿ. ಈಗ ತೆರಿಗೆಯ ಆದಾಯ 7.50 ಲಕ್ಷ ರೂ. ಉಳಿಯುತ್ತದೆ. ನಿಮ್ಮ ಕಂಪನಿಯಿಂದ ವೇತನದಲ್ಲಿ ಮರುಪಾವತಿಯನ್ನು ನೀವು ಪಡೆದಿದ್ದರೆ, ನೀವು ಏಕರೂಪದ ಭತ್ಯೆ, ಬ್ರಾಡ್‌ಬ್ಯಾಂಡ್ ಭತ್ಯೆ, ಸಾಗಣೆ ಭತ್ಯೆ, ಮನರಂಜನೆ ಇತ್ಯಾದಿ ಮರುಪಾವತಿಗಳ ಮೂಲಕ 2.50 ಲಕ್ಷದವರೆಗೆ ತೆರಿಗೆಯನ್ನು ಉಳಿಸಬಹುದು. ಮರುಪಾವತಿಯನ್ನು ಕ್ಲೈಮ್ ಮಾಡಿದ ನಂತರ, ತೆರಿಗೆಯ ಆದಾಯವು 5 ಲಕ್ಷ ರೂ.ಗಳಿಗೆ ಇಳಿಯುತ್ತದೆ. 


ಇದನ್ನೂ ಓದಿ-Union Budget 2024: ದೇಶಾದ್ಯಂತದ ಮಹಿಳೆಯರಿಗೆ ಭಾರಿ ಉಡುಗೊರೆ ನೀಡಲು ಸಿದ್ಧತೆ ನಡೆಸುತ್ತಿದೆಯಾ ಕೇಂದ್ರ ಸರ್ಕಾರ?


ನಿಮ್ಮ ಆದಾಯ ತೆರಿಗೆ ಶೂನ್ಯವಾಗುತ್ತದೆ
ನಿಮ್ಮ ಆದಾಯ ತೆರಿಗೆ ಶೂನ್ಯವಾಗುತ್ತದೆ. ಸೆಕ್ಷನ್ 80CCD(2) ಅಡಿಯಲ್ಲಿ, ನೀವು ನಿಮ್ಮ ಉದ್ಯೋಗದಾತರ ಮೂಲಕ ಎನ್ಪಿಎಸ್ ನಲ್ಲಿ ಹೂಡಿಕೆ ಮಾಡಿದರೆ, ನೀವು ರೂ 50,000 ಹೂಡಿಕೆ ಮಾಡಬಹುದು. ಈ ಮೂಲಕ 10 ಲಕ್ಷ ವೇತನ ಶ್ರೇಣಿಯಲ್ಲಿರುವವರ ತೆರಿಗೆಗೆ ಒಳಪಡುವ ಆದಾಯದಲ್ಲಿ 5 ಲಕ್ಷ ರೂ. ಸೆಕ್ಷನ್ 87A ಅಡಿಯಲ್ಲಿ ಈ ತೆರಿಗೆಗೆ ಒಳಪಡುವ ಆದಾಯದ ಮೇಲೆ ರಿಯಾಯಿತಿಯ ಪ್ರಯೋಜನ ಲಭ್ಯವಿದೆ. ಇದರರ್ಥ ನಿಮ್ಮ ಒಟ್ಟು ಆದಾಯದ ಮೇಲಿನ ತೆರಿಗೆ ಶೂನ್ಯವಾಗಿರುತ್ತದೆ.


ಇದನ್ನೂ ಓದಿ-UPI ಬಳಕೆದಾರರಿಗೆ ಒಂದು ಮಹತ್ವದ ಅಪ್ಡೇಟ್, ನಾಳೆಯಿಂದ ಆರಂಭಗೊಳ್ಳುತ್ತಿದೆ ಈ ವಿಶೇಷ ಸೇವೆ!


ಹೂಡಿಕೆಯನ್ನು ಮೂಲ ವೇತನದಿಂದ ನಿರ್ಧರಿಸಲಾಗುತ್ತದೆ
ನಿಮ್ಮ ಉದ್ಯೋಗದಾತರ ಮೂಲಕ ಎನ್ಪಿಎಸ್ ನಲ್ಲಿ ಹೂಡಿಕೆ ಮಾಡುವ ಮೂಲಕ, ಆದಾಯ ತೆರಿಗೆಯ ಸೆಕ್ಷನ್ 80CCD(2) ಅಡಿಯಲ್ಲಿ ನೀವು ಗರಿಷ್ಠ ವಿನಾಯಿತಿಯನ್ನು ಪಡೆಯಬಹುದು. ಇದರಲ್ಲಿ ಹೂಡಿಕೆಗೆ ಯಾವುದೇ ಮಿತಿಯಿಲ್ಲ. ಆದರೆ, ನಿಮ್ಮ ಮೂಲ ವೇತನದ ಆಧಾರದ ಮೇಲೆ ಮಾತ್ರ ನಿಮ್ಮ ಹೂಡಿಕೆಯ ಮೊತ್ತವನ್ನು ನಿರ್ಧರಿಸಲಾಗುತ್ತದೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ