Tax Notice Update: ಐಟಿ ರಿಟರ್ನ್ (ITR) ಸಲ್ಲಿಕೆಯನ್ನು ಕಡ್ಡಾಯಗೊಳಿಸಿದ ಆದಾಯ ತೆರಿಗೆ ಇಲಾಖೆ, ಹಣಕಾಸು ವರ್ಷ 2022 -23 ರ ಐಟಿ ರಿಟರ್ನ್ ಸಲ್ಲಿಕೆಗೆ ಜುಲೈ 31 ಕೊನೆಯ ದಿನಾಂಕವಾಗಿ ನಿಗದಿಪಡಿಸಿತ್ತು. ನಿಗದಿತ ಸಮಯದೊಳಗೆ ತೆರಿಗೆ ಪಾವತಿಸದಿದ್ದರೆ ತೆರಿಗೆ ಪಾವತಿದಾರರು ಹೆಚ್ಚಿನ ದಂಡ ಪಾವತಿಸಬೇಕಾಗುತ್ತದೆ ಎಂದು ಆದೇಶ ಹೊರಡಿಸಲಾಗಿತ್ತು.


COMMERCIAL BREAK
SCROLL TO CONTINUE READING

ಈ ಆದೇಶದಂತೆ ದಂಡ ಪಾವತಿಸುವ ಭಯದಿಂದಾಗಿ ಕಳೆದ ತಿಂಗಳಲ್ಲಿ ಕೋಟ್ಯಾಂತರ ಸಂಖ್ಯೆಯಲ್ಲಿ ಐಟಿಆರ್ ಸಲ್ಲಿಕೆಯಾಗಿತ್ತು. ಇನ್ನು ತೆರಿಗೆದಾರರು ಎಲ್ಲಾ ಐಟಿಆರ್ ಮಾಹಿತಿಯನ್ನು ಆದಾಯ ಇಲಾಖೆ ಪರಿಶೀಲಿಸುತ್ತದೆ. ಪಾವತಿದಾರರು ತೆರಿಗೆ ಪಾವತಿಸುವ ಸಮುಯದಲ್ಲಿ ಎಚ್ಚರವಹಿಸಬೇಕಾಗುತ್ತದೆ. ಇನ್ನು ಕೆಲವೊಮ್ಮೆ ಆದಾಯ ತೆರಿಗೆ ಇಲಾಖೆಯೇ ನೋಟಿಸ್‌ನ್ನು ಕಳುಹಿಸಿರುತ್ತದೆ. 


ತೆರಿಗೆ ಪಾವತಿಯಲ್ಲಿ ತಪ್ಪು ಕಂಡುಬಂದಲ್ಲಿ ಆದಾಯ ತೆರಿಗೆ ಇಲಾಖೆ ನೋಟಸ್‌ನ್ನು ಮನೆಗೆ ಕಳುಹಿಸುತ್ತದೆ. ನೀವು ಆದಾಯ ರಿಟರ್ನ್‌ ಸಲ್ಲಿಸಿದ್ದರು ಸಹ ನಿಮಗೆ ನೋಟಿಸ್‌ ನೀಡಲಾಗುತ್ತದೆ. ಇನ್ನು ಕೆಲವು ಸಂದರ್ಭದಲ್ಲಿ ಆದಾಯ ತೆರಿಗೆ ಇಲಾಖೆಯು ಕೆಲವು ಸಂಬಳದಾರರಿಗೆ ಅವರ ಆದಾಯದ ಸಾಕ್ಷಿಗಳನ್ನು ಕೇಳಿ ನೋಟಿಸ್‌ ಕಳುಹಿಸಿದೆ. 


ಇದನ್ನೂ ಓದಿ-ಬ್ಯಾಂಕ್ ಗ್ರಾಹಕರೇ ಗಮನಿಸಿ : ಸೇವಾ ಶುಲ್ಕದ ಹೆಸರಿನಲ್ಲಿ ಗ್ರಾಹಕರಿಂದ ಕೋಟಿ ಕೋಟಿ ವಸೂಲಿ ಮಾಡುತ್ತಿದೆ ಬ್ಯಾಂಕ್


ನೀವು ನಿಮಗೆ ಯಾವುದೇ ಮೂಲದಿಂದ ಆದಾಯ ಬಂದರೂ ಅದನ್ನು ಆದಾಯ ಇಲಾಖೆಗೆ ಮಾಹಿತಿ ನೀಡಬೇಕು. ಇಲ್ಲವಾದರೇ ನಿಮಗೆ ತೆರಿಗೆ ಇಲಾಖೆ ನೋಟಿಸ್‌ ನೀಡುತ್ತದೆ. ಈ ನೋಟಿಸ್‌ನ್ನು ನೀವು ನಿರ್ಲಕ್ಷಿಸಬಾರದು. ಒಂದು ವೇಳೆ ನೀವು ತಪ್ಪು ಮಾಹಿತಿ ನೀಡಿದ್ದರೆ ಅಥವಾ ಯಾವುದೇ ಆದಾಯದ ಮಾಹಿತಿ ನೀಡದಿದ್ದರೆ ಮಾತ್ರ ಆದಾಯ ಇಲಾಖೆ ನಿಮ್ಮ ಮನೆಗೆ ನೋಟಿಸ್‌ ಕಳುಹಿಸುತ್ತದೆ. ಆ ನೋಟಿಸ್‌ನಲ್ಲಿ ಸಮಯವನ್ನು ನಿಗದಿಪಡಿಸಲಾಗಿರುತ್ತದೆ. ಆ ನಿಗದಿತ ಸಮಯದಲ್ಲಿ ನೀವು ಉತ್ತರ ನೀಡಲೇಬೇಕಾಗುತ್ತದೆ.  


ಆದಾಯ ಇಲಾಖೆಯಿಂದ ಬಂದಿರುವ ನೋಟಿಸ್‌ ಬಗ್ಗೆ ನಿಮಗೆ ಮಾಹಿತಿ ಇಲ್ಲವಾದರೇ ವೃತ್ತಿಪರರನ್ನು ಸಂಪರ್ಕಿಸಿ. ತೆರಿಗೆ ಪಾವತಿಸುವ ಮುನ್ನ ನಿಮ್ಮ ಎಲ್ಲ ಡಾಕ್ಯುಮೆಂಟ್ ಗಳನ್ನೂ ಪರೀಶೀಲಿಸಿಕೊಳ್ಳಿ. ಜೊತೆಗೆ ನೀವು ಆದಾಯ ತೆರಿಗೆ ನೋಟಿಸ್‌ಗೆ ಉತ್ತರ ನೀಡುವಾಗ ಡ್ರಾಫ್ಟ್ ಅನ್ನು ಸಿದ್ಧಪಡಿಸಿಕೊಳ್ಳಬೇಕು. ತೆರಿಗೆ ಇಲಾಖೆಗೆ ಸ್ಪಷ್ಟ ಉತ್ತರದೊಂದಿಗೆ ಪುರಾವೆಗಳನ್ನು ನೀಡಬೇಕಾಗುತ್ತದೆ. 


ಇದನ್ನೂ ಓದಿ-PPF ಅಥವಾ FD ಯಾವುದು ಉತ್ತಮ? ಹಣಕಾಸಿನ ಇಟ್ಟು ಇಟ್ಟುಕೊಂಡು ಹೂಡಿಕೆ ಮಾಡಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ