ನವದೆಹಲಿ: New PPF Investment Rule - ಒಂದು ವೇಳೆ ನಿಮ್ಮ ಖಾತೆ ಪೋಸ್ಟ್ ಆಫಿಸ್ ನಲ್ಲಿದ್ದರೆ ಅಥವಾ ನೀವೂ ಕೂಡ ಪೋಸ್ಟ ಆಫೀಸ್ ನ ಯಾವುದಾದರೊಂದು ಯೋಜನೆಯಲ್ಲಿ ಹೂಡಿಕೆ ಮಾಡುತ್ತಿದ್ದಾರೆ ಈ ಸುದ್ದಿ ನಿಮಗಾಗಿ. ಏಕೆಂದರೆ ಒಂದು ವೇಳೆ ನೀವು ನಿರ್ಧಿಷ್ಟ ಪ್ರಮಾಣದ ಹೂಡಿಕೆಯಿಂದ ಹಣವನ್ನು ಹಿಂಪಡೆದರೆ, TDS ಕಡಿತವಾಗುವ ಸಾಧ್ಯತೆ ಇದೆ. ಹಣ ಹಿಂಪಡೆಯುವುದರ ಮೇಲಿನ ಈ ನಿಯಮ PPF ನಿಂದ ಹಿಡಿದು ವಿಭಿನ್ನ ಹೂಡಿಕೆಯ ಯೋಜನೆಗಳಿಗೆ ಅನ್ವಯಿಸಲಿದೆ. ಆದಾಯ ತೆರಿಗೆ ಕಾಯ್ದೆ 1961 ರ 194 N ಸೆಕ್ಷನ್ ಗೆ ಸಂಬಂಧಿಸಿದ ಈ ನಿಯಮ ಜುಲೈ 1, 2020ರಿಂದ ಜಾರಿಗೆ ಬಂದಿದೆ. ಹಾಗಾದರೆ ಬನ್ನಿ ಪೋಸ್ಟ್ ಆಫೀಸ್ ನಿಂದ ಹಣ ಹಿಂಪಡೆಯುವ ಹಾಗೂ TDS ಕಡಿತಕ್ಕೆ ಸಂಬಂಧಿಸಿದ ಈ ಹೊಸ ನಿಯಮಗಳನ್ನೊಮ್ಮೆ ತಿಳಿದುಕೊಳ್ಳೋಣ.


COMMERCIAL BREAK
SCROLL TO CONTINUE READING

ಕ್ಯಾಶ್ ಹಿಂಪಡೆದರೆ TDS ನಲ್ಲಿ ಶೇ.5 ರಷ್ಟು ಕಡಿತ
ಒಂದು ವೇಳೆ ನೀವು ITR ದಾಖಲಿಸುವುದಿಲ್ಲ ಮತ್ತು ಒಂದು ಆರ್ಥಿಕ ವರ್ಷದಲ್ಲಿ 20 ಲಕ್ಷಕ್ಕಿಂತ ಅಧಿಕ ಹಾಗೂ 1 ಕೋಟಿಗಿಂತ ಕಡಿಮ ಹಣ ಹಿಂಪಡೆದರೆ, ಅದರ ಮೇಲೆ ಶೇ.2 ರಷ್ಟು TDS ಕಡಿತವಾಗಲಿದೆ. ಒಂದು ವೇಳೆ ನಿಮ್ಮ ಹಣ ಹಿಂಪಡೆತ ಒಂದು ಕೋಟಿ ಮೀರಿದರೆ ಅದರ ಮೇಲೆ ಶೇ.5 ರಷ್ಟು TDS ಕಡಿತ ಮಾಡಲಾಗುವುದು.


ITR ಪಾವತಿಸುವವರಿಗೆ ನೆಮ್ಮದಿ
ಆದರೆ, ಯಾವುದೇ ಓರ್ವ ಗ್ರಾಹಕ ತನ್ನ ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡಿದರೆ, ಅವರಿಗೆ ಈ ನಿಯಮದಿಂದ ಸ್ವಲ್ಪ ನೆಮ್ಮದಿ ನೀಡಲಾಗಿದೆ. ಅಂದರೆ, ಇಂತಹ ಸಂದರ್ಭದಲ್ಲಿ TDS ಕಡಿತದ ನಿಯಮ ಬದಲಾಗಲಿವೆ. ಇನ್ಥಗ ಪರಿಸ್ಥಿತಿಯಲ್ಲಿ ಒಂದು ಆರ್ಥಿಕ ವರ್ಷದಲ್ಲಿ ಹಣ ಹಿಂಪಡೆತ 1 ಕೋಟಿ ರೂ. ಮೀರಿದರೆ ಒಂದು ಕೋಟಿಗೂ ಮೀರಿದ ಮೊತ್ತದ ಮೇಲೆ ಶೇ.2 ರಷ್ಟು ಆದಾಯ ತೆರಿಗೆ ಪಾವತಿಸಬೇಕು. ಆದರೆ, ಇದುವರೆಗೆ ಈ ಬದಲಾವಣೆಗಳನ್ನೂ ಶಾಮೀಲುಗೊಳಿಸಲಾಗಿಲ್ಲ. TDS ಕಡಿತಕ್ಕಾಗಿ ಸೆಂಟರ್ ಫಾರ್ ಏಕ್ಸಿಲೆಂಸ್ ಇನ್ ಪೋಸ್ಟಲ್ ಟೆಕ್ನಾಲಜಿ (CEPT), 1 ಏಪ್ರಿಲ್ 2020 ರಿಂದ 31 ಡಿಸೆಂಬರ್ 2020ರವರೆಗಿನ ಅವಧಿಗಾಗಿ ಹಣ ಹೂಡಿಕೆದಾರರ ವಹಿವಾಟಿನ ಪರಿಶೀಲನೆ ಮಾಡಲು ಸೂಚಿಸಿದೆ. ಪೋಸ್ಟ್ ಆಫಿಸ್ ಈ ನಿಯಮಗಳ ಪ್ರಚಾರ ಹಾಗೂ ಪ್ರಸಾರದ ಮೇಲೂ ಕೂಡ ಕಾರ್ಯನಿರ್ವಹಿಸುತ್ತಿದೆ.


ಈ ರೀತಿ ವಿಭಾಗಮಟ್ಟದಲ್ಲಿ ಕೆಲಸ ನಡೆಯಲಿದೆ
CEPT ಈ ಅವಶ್ಯಕ ಸೂಚನೆಗಳನ್ನು ಸಂಬಂಧಪಟ್ಟ ಸರ್ಕಲ್  ಗಳ ಸಿಬಿಎಸ್ ಹಾಗೂ ಸಿಪಿಸಿ ಗಳಿಗೆ ಕಳುಹಿಸಲಿದೆ. ನಂತರ ಇಂತಹ ಖಾತೆಗಳ ಸಂಪೂರ್ಣ ಮಾಹಿತಿ, ಹೂಡಿಕೆದಾರರ ಪ್ಯಾನ್ ನಂಬರ್ ಹಾಗೂ ಎಷ್ಟು TDS ಕಡಿತವಾಗಬೇಕಿದೆ ಇತ್ಯಾದಿಗಳ ಮಾಹಿತಿ CEPT ಮೂಲಕ ಪೂರೈಸಲಾಗುವುದು. ಸಂಬಂಧಿತ ಸರ್ಕಲ್ ಗಳ ಸಿಪಿಸಿ ಇಂಚಾರ್ಚ್ ಈ ಎಲ್ಲಾ ಮಾಹಿತಿಗಳನ್ನು ಸಂಬಂಧಿದ ಅಂಚೆ ಕಚೇರಿಗಳಿಗೆ ಕಳುಹಿಸಲಿದೆ. ಇದರಿಂದ ಯಾವುದೇ ರೀತಿಯ ತಪ್ಪು ತಡೆಗಳು ನಡೆಯದಂತೆ ಗ್ರಾಹಕರ TDS ಕಡಿತ ನಡೆಯಲಿದೆ.


ಇದನ್ನೂ ಓದಿ- PVC Aadhar Card: 'PVC ಆಧಾರ್ ಕಾರ್ಡ್': ಅಪ್ಲಿಕೇಶನ್ ಹಾಕುವುದು ಹೇಗೆ? ಇಲ್ಲಿದೆ ಮಾಹಿತಿ


ಬಳಿಕ ಸಂಬಂಧಪಟ್ಟ ಅಂಚೆ ಕಚೇರಿ ತನ್ನ ಹೂಡಿಕೆದಾರನ TDS ಕಡಿತ ಮಾಡಿ ನಂತರ ಖಾತೆದಾರನಿಗೆ ಲಿಖಿತ ರೂಪದಲ್ಲಿ ಈ ಕಡಿತದ ಮಾಹಿತಿ ನೀಡಲಿದೆ. ಇನ್ನೊಂದೆಡೆ TDS ಮೊತ್ತಕ್ಕೆ ಸಂಬಂಧಿಸಿದ ಇಂತಹ ವೌಚರ್ಸ್ ಗಳ ಮೇಲೆ ಸಂಬಂಧಪಟ್ಟ ಪೋಸ್ಟ್ ಮಾಸ್ಟರ್ ಸಹಿ ಪಡೆದು HO/SBCO ಗಳಿಗೆ ಕಳುಹಿಸಲಾಗುವುದು. 


ಇದನ್ನೂ ಓದಿ-ಕರೋನ ಕಾಲದಲ್ಲಿ KFCಗಾಗಿ ಹೆಚ್ಚಿದ ಬೇಡಿಕೆ; ಕಳೆದ ಒಂದೇ ವರ್ಷದಲ್ಲಿ ತೆರೆಯಿತು 30 ರೆಸ್ಟೋರೆಂಟ್‌


ಈ ನಿಯಮಗಳ ಅಡಿ ಬರುವ ಪ್ರಕ್ರಿಯೆ ಹಾಗೂ ಸಂಬಂಧಪಟ್ಟ ಪೋಸ್ಟ್ ಮಾಸ್ಟರ್ ನಿಯಮಗಳ ಅಡಿ ಜರಗುವ TDS ಕಡಿತಕ್ಕಾಗಿ ವೈಯಕ್ತಿಕ ರೂಪದಲ್ಲಿ ಜವಾಬ್ದಾರಿ ಇರಲಿದೆ.


ಇದನ್ನೂ ಓದಿ-Recharge Plan:ಕೇವಲ ರೂ.108ಕ್ಕೆ 60 ದಿನಗಳವರೆಗೆ ಅನಿಯಮಿತ ಕಾಲಿಂಗ್, ನಿತ್ಯ 1 GB ಡೇಟಾ ಉಚಿತ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ... 
Android Link -
 https://bit.ly/3hDyh4G 
Apple Link - https://apple.co/3loQYe  
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.