ನ್ಯೂಯಾರ್ಕ್: ಅಮೆರಿಕದ ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿ(US EV Car Manufacturer) ಟೆಸ್ಲಾ(Tesla) ಕಳೆದ ವರ್ಷದಲ್ಲಿ ದಾಖಲೆಯ 1 ಮಿಲಿಯನ್‌ಗಿಂತಲೂ ಹೆಚ್ಚು ಕಾರುಗಳನ್ನು ಮಾರಾಟ ಮಾಡಿದೆ ಎಂದು ವರದಿಯಾಗಿದೆ. ಕಂಪನಿಯು ಏಪ್ರಿಲ್ 2021ರಿಂದ ಮಾರ್ಚ್ 2022ರವರೆಗೆ 1.06 ಲಕ್ಷ ಕಾರುಗಳನ್ನು ತನ್ನ ಗ್ರಾಹಕರಿಗೆ ವಿತರಿಸಿದೆ.


COMMERCIAL BREAK
SCROLL TO CONTINUE READING

ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಸುಮಾರು 310,000ಕ್ಕೂ ಹೆಚ್ಚು ಕಾರುಗಳು(Tesla EV Car) ಗ್ರಾಹಕರ ಕೈಸೇರಿದ್ದು, ಇದು ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯ ದಾಖಲೆಯಾಗಿದೆ ಎಂದು ತಿಳಿದುಬಂದಿದೆ. ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ.67ರಷ್ಟು ಹೆಚ್ಚಾಗಿದೆ.


ಇದನ್ನೂ ಓದಿ: 2022 MG ZS EV: ಒಂದೇ ಚಾರ್ಜ್‌ನಲ್ಲಿ 461 KM ವರೆಗೆ ಚಲಿಸುತ್ತಂತೆ ಈ SUV


ಕಳೆದ ಹಣಕಾಸು ವರ್ಷದಲ್ಲಿ ಕಾರು ಮಾರಾಟ ಕುರಿತಂತೆ ಟೆಸ್ಲಾ ಕಂಪನಿ(Tesla Company)ಯು ತನ್ನ ವರದಿಯನ್ನು ಪ್ರಕಟಿಸಿದೆ. ಮಾಹಿತಿಯ ಪ್ರಕಾರ ಈ ಅಂಕಿ ಅಂಶವು 317,000 ಕಾರುಗಳು ಸೇಲ್ ಆಗುತ್ತವೆ ಎಂದು ಹೇಳಿದ್ದ ವಿಶ್ಲೇಷಕರ ನಿರೀಕ್ಷೆಗಳಿಗಿಂತ ಕಡಿಮೆಯಾಗಿದೆ.


ಅಗ್ಗವಾಗಲಿದೆ ಪೆಟ್ರೋಲ್, ಡಿಸೇಲ್ ಬೆಲೆ, ಹಣಕಾಸು ಸಚಿವರು ಹೇಳಿದ್ದೇನು ?


ಅನೇಕ ಸಮಸ್ಯೆಗಳ ಮಧ್ಯೆಯೂ ಟೆಸ್ಲಾ ತಂಡವು ಅತ್ಯಂತ ಯಶಸ್ವಿಯಾಗಿ ಕಾರುಗಳನ್ನು ಗ್ರಾಹಕರಿಗೆ ಒದಗಿಸಿದೆ ಎಂದು ಕಂಪನಿ ಸಿಇಒ ಎಲೋನ್ ಮಸ್ಕ್(Elon Musk) ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ. ಟೆಸ್ಲಾ ತನ್ನ ಪ್ರತಿಸ್ಪರ್ಧಿಗಳಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ, ಸಂಪೂರ್ಣ ಆಟೋಮೊಬೈಲ್ ಉದ್ಯಮದಲ್ಲಿ ಪೂರೈಕೆ ರೇಸ್‍ನಲ್ಲಿ ಮುಂದಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.