Stock Market Crash: ಭಾರತ ಸೇರಿದಂತೆ ಜಗತ್ತಿನಾದ್ಯಂತ ಷೇರು ಮಾರುಕಟ್ಟೆಗಳಲ್ಲಿ ಭಾರೀ ಕುಸಿತವು ಮುಂದುವರಿದಿದೆ. ಲಕ್ಷಾಂತರ ಹೂಡಿಕೆದಾರರಿಗೆ ಸಾವಿರಾರು ಕೋಟಿ ನಷ್ಟವಾಗಿದೆ. ಈ ಮಧ್ಯೆ ಮತ್ತೊಂದು ಶಾಕಿಂಗ್‌ ನ್ಯೂಸ್‌ ಬಂದಿದೆ. ಅಮೆರಿಕದ ಉದ್ಯಮಿ, ಹಣಕಾಸು ತಜ್ಞ ಮತ್ತು ವಿಶ್ವದ ಅತ್ಯುತ್ತಮ ವೈಯಕ್ತಿಕ ಹಣಕಾಸು ಪುಸ್ತಕ ʼರಿಚ್ ಡ್ಯಾಡ್ ಪೂರ್ ಡ್ಯಾಡ್ʼನ ಲೇಖಕ ರಾಬರ್ಟ್ ಟೊರು ಕಿಯೋಸಾಕಿ ಭಯಾನಕ ಭವಿಷ್ಯವನ್ನು ನುಡಿದಿದ್ದಾರೆ. ಫೆಬ್ರವರಿಯಲ್ಲಿ ಇತಿಹಾಸದಲ್ಲೇ ಅತಿದೊಡ್ಡ ಷೇರು ಮಾರುಕಟ್ಟೆ ಕುಸಿತವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಈ ಬಗ್ಗೆ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ರಾಬರ್ಟ್ ಕಿಯೋಸಾಕಿಯವರ ಪ್ರಕಾರ, ʼಸ್ಟಾಕ್ ಮಾರುಕಟ್ಟೆ ಕುಸಿತವು ಬಿಟ್‌ಕಾಯಿನ್‌ನಲ್ಲಿ ಭಾರೀ ಏರಿಕೆಯನ್ನು ಉಂಟುಮಾಡುತ್ತದೆ ಎಂದು ಹೇಳಿದ್ದಾರೆ. ಹೂಡಿಕೆದಾರರಿಗೆ ಮಹತ್ವದ ಸಲಹೆ ನೀಡಿರುವ ಅವರು, ʼಸಕಾಲದಲ್ಲಿ ಷೇರುಗಳನ್ನ ಮಾರಿಕೊಂಡು ಬಿಟ್‌ಕಾಯಿನ್, ಚಿನ್ನ ಮತ್ತು ಬೆಳ್ಳಿಯಲ್ಲಿ ಹೂಡಿಕೆ ಮಾಡುವಂತೆ ತಿಳಿಸಿದ್ದಾರೆ. ಬಿಟ್‌ಕಾಯಿನ್ ಅನ್ನು ಸುರಕ್ಷಿತ ಹೂಡಿಕೆಯಾಗಿ ಕಿಯೋಸಾಕಿಯವರು ಅನುಮೋದಿಸಿದ ನಂತರ ಕ್ರಿಪ್ಟೋಕರೆನ್ಸಿ ಚಿಲ್ಲರೆ ಹೂಡಿಕೆದಾರರಲ್ಲಿ ಜನಪ್ರಿಯವಾಗುತ್ತಿದೆ.


ಇದನ್ನೂ ಓದಿ: Income Tax ಕಟ್ಟುವ ಪದ್ದತಿಯೇ ಇಲ್ಲದ ದೇಶಗಳು ಯಾವುವು ಗೊತ್ತಾ?


ಹೂಡಿಕೆದಾರರಿಗೆ ಉತ್ತಮ ಅವಕಾಶ ಸಿಗಲಿವೆ!


ʼರಿಚ್ ಡ್ಯಾಡ್ ಪೂರ್ ಡ್ಯಾಡ್ʼನ ಪ್ರಸಿದ್ಧ ಲೇಖಕ ರಾಬರ್ಟ್ ಕಿಯೋಸಾಕಿಯವರು ಷೇರು ಮಾರುಕಟ್ಟೆಗೆ ದಿಟ್ಟ ಭವಿಷ್ಯ ನುಡಿದಿದ್ದಾರೆ. ತಮ್ಮ ಟ್ವೀಟ್‌ನಲ್ಲಿ ಅವರು, ʼಫೆಬ್ರವರಿ ತಿಂಗಳಿನಲ್ಲಿ ಇತಿಹಾಸದಲ್ಲೇ ಅತಿದೊಡ್ಡ ಷೇರು ಮಾರುಕಟ್ಟೆ ಕುಸಿತ ಸಂಭವಿಸುತ್ತದೆʼ ಎಂದು ಹೇಳಿದ್ದಾರೆ. ಕಿಯೋಸಾಕಿ ಪ್ರಕಾರ, ʼಈ ನಿರೀಕ್ಷಿತ ಕುಸಿತವು ಸಾಂಪ್ರದಾಯಿಕ ಹೂಡಿಕೆ ಮಾರುಕಟ್ಟೆಗಳಲ್ಲಿ ಶಾಕ್‌ ಉಂಟುಮಾಡುತ್ತದೆ, ಆದರೆ ತ್ವರಿತವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವವರಿಗೆ ಇದು ಒಂದು ದೊಡ್ಡ ಅವಕಾಶವೆಂದು ಹೇಳಿದ್ದಾರೆ. ತನ್ನ 2013ರ ಪುಸ್ತಕ ರಿಚ್ ಡ್ಯಾಡ್ಸ್ ಪ್ರೊಫೆಸಿ (Rich Dad's Prophecy)ಯಲ್ಲಿ ಅವರು, ಹಿಂದಿನ ಆರ್ಥಿಕ ಹಿಂಜರಿತವನ್ನು ಮೀರಿಸುವಂತಹ ಸ್ಟಾಕ್ ಮಾರುಕಟ್ಟೆ ಕುಸಿತದ ಬಗ್ಗೆ ಎಚ್ಚರಿಸಿದ್ದಾರೆ. ಅವರ ಇತ್ತೀಚಿನ ಟ್ವೀಟ್ ಈ ಭವಿಷ್ಯವಾಣಿಯು ನಿಜವಾಗುತ್ತಿದೆ ಎಂದು ತೋರಿಸುತ್ತದೆ. ಫೆಬ್ರವರಿಯಲ್ಲಿ ಸ್ಟಾಕ್‌ ಮಾರ್ಕೆಟ್ ಕ್ರ್ಯಾಶ್ ಸಂಭವಿಸುವ ನಿರೀಕ್ಷೆಯಿದೆ. ಆದರೆ, ಹೂಡಿಕೆದಾರರು ಇದರಿಂದ ವಿಚಿಲಿತರಾಗುವ ಅವಶ್ಯತೆಯಿಲ್ಲ, ಅತ್ಯುತ್ತಮ ಷೇರುಗಳನ್ನು ಖರೀದಿಸಲು ಇದು ಒಂದು ಉತ್ತಮ ಅವಕಾಶವನ್ನು ಒದಗಿಸುತ್ತದೆ ಎಂದು ಹೇಳಿದ್ದಾರೆ. 


ಹೂಡಿಕೆ ಮಾಡಿ ಎಂದು ತಮ್ಮ ಅಭಿಮಾನಿಗಳಿಗೆ ಅವರು ಶಿಫಾರಸು ಮಾಡಿದ್ದಾರೆ. 


ಇದನ್ನೂ ಓದಿ: 9 ನೇ ತರಗತಿಯಿಂದ ಪ್ರತಿ ತಿಂಗಳು 1,000 ರೂ.ವಿದ್ಯಾರ್ಥಿ ವೇತನ !ಸರ್ಕಾರದ ಅಧಿಸೂಚನೆ ಪ್ರಕಟ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.