ನವದೆಹಲಿ  : ಮಹೀಂದ್ರಾ ಕಾರು (Mahindra Car)ಖರೀದಿಸುವ ಕನಸನ್ನು ನನಸು ಮಾಡಿಕೊಳ್ಳುವುದು ನಿಮಗೆ ದುಬಾರಿ ಎನಿಸಬಹುದು. ಆದರೆ ಈಗ ಅತ್ಯಂತ ಕಡಿಮೆ ವೆಚ್ಚದಲ್ಲಿ , ಮಹಿಂದ್ರಾ ಕಾರಿನಲ್ಲಿ ಓಡಾಡುವ ಅವಕಾಶ ಸಿಗಲಿದೆ. ಮಹೀಂದ್ರಾ ಕ್ವಿಕ್ಲಿಜ್ (Quiklyz) ಹೆಸರಿನ ಕಂಪನಿಯೊಂದಿಗೆ ಪಾಲುದಾರಿಕೆಯನ್ನು ಮಾಡಿಕೊಂಡಿದೆ. ಇದು ಗ್ರಾಹಕರಿಗೆ  ವೆಹಿಕಲ್ ಲೀಸಿಂಗ್ (Vehicle leasing)ಮತ್ತು ಚಂದಾದಾರಿಕೆ ನೀಡುವ ವೇದಿಕೆಯಾಗಿದೆ. ಇಲ್ಲಿ ಗ್ರಾಹಕರಿಗೆ ಈಗ ಸುಲಭವಾಗಿ ಮಹೀಂದ್ರಾ ಕಾರನ್ನು ಬಾಡಿಗೆಗೆ ಪಡೆಯುವ ಆಯ್ಕೆ ಸಿಗುತ್ತದೆ. ಈ ಪ್ಲಾಟ್‌ಫಾರ್ಮ್ ಮೂಲಕ, ಮಹೀಂದ್ರಾ ಆಟೋ ಪೋರ್ಟಲ್ ಅಥವಾ ಡೀಲರ್‌ಶಿಪ್‌ಗೆ ಭೇಟಿ ನೀಡುವ ಮೂಲಕ ಮಹೀಂದ್ರಾ ಕಾರನ್ನು ಬಾಡಿಗೆಗೆ ಪಡೆಯಬಹುದು. 


COMMERCIAL BREAK
SCROLL TO CONTINUE READING

ಈ ಸೌಲಭ್ಯವು 8 ನಗರಗಳಲ್ಲಿ ಲಭ್ಯವಿದೆ : 
ಪ್ರಸ್ತುತ, ಈ ಸೌಲಭ್ಯವನ್ನು ಬೆಂಗಳೂರು (Bengaluru), ಮುಂಬೈ, ಪುಣೆ, ದೆಹಲಿ, ನೋಯ್ಡಾ, ಗುರುಗ್ರಾಮ್,  ಹೈದರಾಬಾದ್ ಮತ್ತು ಚೆನ್ನೈ ಸೇರಿದಂತೆ ಭಾರತದ ಪ್ರಮುಖ ನಗರಗಳಲ್ಲಿ ಮಾತ್ರ ಒದಗಿಸಸಲಾಗಿದೆ. 


ಇದನ್ನೂ ಓದಿ : SBI ಗ್ರಾಹಕರಿಗೆ ಸಿಹಿ ಸುದ್ದಿ : ಎಸ್‌ಬಿಐ FD ಮೇಲಿನ ಬಡ್ಡಿದರ ಹೆಚ್ಚಳ - ಇಲ್ಲಿದೆ ಹೊಸ ದರ 


ಬಳಕೆಗೆ ಅನುಗುಣವಾಗಿ ಪಾವತಿ :
ಗ್ರಾಹಕರ ಅಗತ್ಯತೆಗಳಿಗೆ ಅನುಗುಣವಾಗಿ ಪೇ ಪರ್ ಯೂಸ್ ಮಾದರಿಯಲ್ಲಿ ಈ ಯೋಜನೆಯನ್ನು ಪರಿಚಯಿಸಲಾಗಿದೆ ಎಂದು ಮಹೀಂದ್ರಾ ಆಟೋಮೋಟಿವ್ ಎಂಡಿ ಮತ್ತು ಸಿಇಒ ವಿಜಯ್ ನಕ್ರಾ ತಿಳಿಸಿದ್ದಾರೆ. ಇದರಿಂದ ಗ್ರಾಹಕರಿಗೆ ತುಂಬಾ ಅನುಕೂಲವಾಗಲಿದೆ. 


ಇದರಿಂದ ಪ್ರಯೋಜನವಾಗುತ್ತದೆ :
ಗುತ್ತಿಗೆ ಅವಧಿ ಮುಗಿದ ನಂತರ, ಗ್ರಾಹಕರು ತಮ್ಮ ಕಾರನ್ನು ಹಿಂತಿರುಗಿಸಬಹುದು.  ಮತ್ತೆ ಲೀಸ್ (Car on lease) ಮೇಲೆ ತಮಗಾಗಿ ಹೊಸ ಕಾರನ್ನು ಆರಿಸಿಕೊಳ್ಳಬಹುದು. ವರ್ಷಕ್ಕೆ 10,000 ಕಿಮೀಗಳಿಂದ ಪ್ರಾರಂಭವಾಗುವ ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳುವುದರ ಹೊರತಾಗಿ, ಗ್ರಾಹಕರು ತಮ್ಮ ಆದ್ಯತೆಯ ಕಾರನ್ನು 24 ರಿಂದ 60 ತಿಂಗಳುಗಳವರೆಗೆ ಬಾಡಿಗೆಗೆ ಪಡೆಯಬಹುದು ಎಂದು ಕ್ವಿಕ್ಲಿಜ್ (Quiklyz)ಹೇಳುತ್ತದೆ. 


ಇದನ್ನೂ ಓದಿ :  PF ಖಾತೆದಾರರಿಗೆ EPFO ನಿಂದ ಎಚ್ಚರಿಕೆ ಘಂಟೆ!


ಪ್ರತಿ ತಿಂಗಳು ಇಷ್ಟು ಬಾಡಿಗೆ ಕಟ್ಟಬೇಕಾಗುತ್ತದೆ :
ಆಯ್ಕೆಮಾಡಿದ ಮಹೀಂದ್ರಾ ಕಾರಿಗೆ (Mahindra Car)ನೀವು ಪ್ರತಿ ತಿಂಗಳು ಎಷ್ಟು ಬಾಡಿಗೆ ಪಾವತಿಸಬೇಕಾಗುತ್ತದೆ ಎನ್ನುವ ಪ್ರಶ್ನೆ ಈಗ ಏಳುತ್ತದೆ. ಮಹೀಂದ್ರಾ ಕಾರಿನ  ಮಾಸಿಕ ಬಾಡಿಗೆ 21,000 ರೂ.ನಿಂದ ಪ್ರಾರಂಭವಾಗುತ್ತದೆ. ಇದರ ನಂತರ ಗ್ರಾಹಕರು ಪೆಟ್ರೋಲ್ (petrol) ಹೊರತುಪಡಿಸಿ ಬೇರೆ ಏನನ್ನೂ ಖರ್ಚು ಮಾಡಬೇಕಾಗಿಲ್ಲ. ಅಂದರೆ, ವಿಮೆ (Insuramce), ನಿರ್ವಹಣೆ ಮತ್ತು  ರೋಡ್  ಸೈಡ್ ಅಸಿಸ್ಟೆಂಸ್ ಅನ್ನು ಕಂಪನಿಯೇ ಮಾಡುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.