ದೇಶದ ಅತಿದೊಡ್ಡ ರೈಲ್ವೆ ಜಂಕ್ಷನ್: ಇಲ್ಲಿಂದ ದೇಶದ ಮೂಲೆ ಮೂಲೆಗೂ ಸಿಗುತ್ತೆ ಟ್ರೈನ್
Indian Railways: ಭಾರತೀಯ ರೈಲ್ವೇಯ ಅತಿದೊಡ್ಡ ರೈಲ್ವೆ ಜಂಕ್ಷನ್‌ನಿಂದ ದೇಶದ ಪ್ರತಿ ಸ್ಥಳಕ್ಕೂ ರೈಲ್ವೆ ಸಂಪರ್ಕ ಲಭ್ಯವಿದೆ.
Indian Railways Largest Railway Junction: ಬಜೆಟ್ ದೃಷ್ಟಿಯಲ್ಲಿ ಅಗ್ಗ ಹಾಗೂ ಆರಾಮದಾಯಕ ಪ್ರಯಾಣಕ್ಕೆ ಹೆಸರುವಾಸಿ ಆಗಿರುವ ಭಾರತೀಯ ರೈಲ್ವೆ ಹಲವು ಕುತೂಹಲಕಾರಿ ಸಂಗತಿಗಳಿಯೂ ಸಾಕ್ಷಿಯಾಗಿದೆ. ಭಾರತ ಎಷ್ಟು ದೊಡ್ಡದಾಗಿದೆಯೋ ಅದರ ರೈಲ್ವೆ ನೆಟ್‌ವರ್ಕ್ ಸಹ ಅಷ್ಟೇ ವಿಶಾಲವಾಗಿದೆ. ದೇಶದ ಪ್ರತಿ ಮೂಲೆಗೂ ಕೂಡ ಈ ಒಂದು ರೈಲ್ವೆ ನಿಲ್ದಾಣದಿಂದ ರೈಲು ಸಂಪರ್ಕ ಸಿಗಲಿದೆ ಎಂದು ತಿಳಿದರೆ ನಿಮಗೆ ಅಚ್ಚರಿಯಾಗಬಹುದು.
ಹೌದು, ಭಾರತದ ಈ ರೈಲ್ವೆ ಜಂಕ್ಷನ್‌ನಿಂದ ದೇಶದ ಪ್ರತಿ ಸ್ಥಳಕ್ಕೂ ರೈಲ್ವೆ ಸಂಪರ್ಕ ಲಭ್ಯವಿದೆ. ಆದರೆ, ಈ ರೈಲ್ವೆ ಜಂಕ್ಷನ್ ದೆಹಲಿ, ಮುಂಬೈ ಅಥವಾ ಬೆಂಗಳೂರಿನಂತಹ ದೊಡ್ಡ ನಗರದಲ್ಲಿಲ್ಲ. ಆದಾಗ್ಯೂ, ಇದೊಂದು ದೇಶದ ಅತಿದೊಡ್ಡ ರೈಲ್ವೆ ಜಂಕ್ಷನ್.
ಇದನ್ನೂ ಓದಿ- Indian Railways: ಪ್ರಯಾಣಿಕರು ರೈಲಿನಲ್ಲಿ ಬಿಟ್ಟು ಹೋದ ಬೆಲೆಬಾಳುವ ಲಗೇಜ್ ಅನ್ನು ರೈಲ್ವೆ ಏನು ಮಾಡುತ್ತೆ!
ದೇಶದ ಅತಿದೊಡ್ಡ ರೈಲ್ವೆ ಜಂಕ್ಷನ್:
ಭಾರತೀಯ ರೈಲ್ವೆಯ ಅತಿದೊಡ್ಡ ರೈಲ್ವೆ ಜಂಕ್ಷನ್ ಉತ್ತರ ಮಧ್ಯ ರೈಲ್ವೆ ಅಡಿಯಲ್ಲಿ ಬರುತ್ತದೆ. ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣಕ್ಕೆ 7 ವಿವಿಧ ಮಾರ್ಗಗಳ ರೈಲುಗಳು ಈ ಜಂಕ್ಷನ್ ಮೂಲಕ ಹಾದು ಹೋಗುತ್ತವೆ. ಈ ನಿಲ್ದಾಣದಲ್ಲಿ ಒಟ್ಟು 10 ಪ್ಲಾಟ್‌ಫಾರ್ಮ್‌ಗಳಿದ್ದು, ಇವುಗಳ ಮೇಲೆ ಸದಾ ರೈಲುಗಳ ಸಂಚಾರವಿರುತ್ತದೆ. ಇದು ಉತ್ತರ ಪ್ರದೇಶದ ಮಥುರಾ ಜಿಲ್ಲೆಯಲ್ಲಿ ನಿರ್ಮಿಸಲಾಗಿರುವ ಮಥುರಾ ರೈಲ್ವೆ ಜಂಕ್ಷನ್.
ಮಥುರಾ ರೈಲ್ವೆ ಜಂಕ್ಷನ್ ಇತಿಹಾಸ:
1875 ರಲ್ಲಿ ಈ ಜಂಕ್ಷನ್‌ನಲ್ಲಿ ಮೊದಲ ಬಾರಿಗೆ ರೈಲು ಸಂಚರಿಸಿತು. ಗಮನಾರ್ಹವಾಗಿ ದಿನ ನಿತ್ಯ ಸುಮಾರು 200 ರೈಲುಗಳು ಈ ನಿಲ್ದಾಣದಲ್ಲಿ ನಿಲ್ಲುತ್ತವೆ. ಇವುಗಳಲ್ಲಿ ದೇಶದ ಸೂಪರ್ ಫಾಸ್ಟ್ ರೈಲುಗಳಾದ ರಾಜಧಾನಿ, ಶತಾಬ್ದಿ, 114 ಸೂಪರ್ ಫಾಸ್ಟ್, 57 ಮುಖ್ಯ ಎಕ್ಸ್‌ಪ್ರೆಸ್, 6 ಸಂಪರ್ಕ ಕ್ರಾಂತಿ ಇತ್ಯಾದಿ ರೈಲುಗಳು ಸೇರಿವೆ. ಸುಮಾರು 13 ರೈಲುಗಳು ಇದೇ ರೈಲು ನಿಲ್ದಾಣದಿಂದ ತಮ್ಮ ಪ್ರಯಾಣವನ್ನು ಆರಂಭಿಸುತ್ತವೆ.
ಇದನ್ನೂ ಓದಿ- ಒಮ್ಮೆ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ಪಿಂಚಣಿ.. PMVVY ಯೋಜನೆಯ ವಿವರಗಳು ಇಂತಿವೆ..!
ಭಾರತದ ಅತಿ ದೊಡ್ಡ ರೈಲು ನಿಲ್ದಾಣ:
ಭಾರತದ ಅತಿ ದೊಡ್ಡ ರೈಲು ನಿಲ್ದಾಣವೆಂದರೆ ಹೌರಾ ಜಂಕ್ಷನ್. ಇದು ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿದೆ. ಹೌರಾ ಜಂಕ್ಷನ್ ರೈಲು ನಿಲ್ದಾಣದಲ್ಲಿ ಒಟ್ಟು 23 ಪ್ಲಾಟ್‌ಫಾರ್ಮ್‌ಗಳಿವೆ. ಇದು ಭಾರತದ ಅತ್ಯಂತ ಹಳೆಯ, ಅತಿ ದೊಡ್ಡ ಮತ್ತು ಜನನಿಬಿಡ ರೈಲ್ವೆ ಸಂಕೀರ್ಣವಾಗಿದೆ ಮತ್ತು ವಿಶ್ವದ ಅತ್ಯಂತ ಜನನಿಬಿಡ ಮತ್ತು ದೊಡ್ಡ ರೈಲು ನಿಲ್ದಾಣಗಳಲ್ಲಿ ಒಂದಾಗಿದೆ. ಇಲ್ಲಿ ಪ್ರತಿ ದಿನ ಸುಮಾರು 286 ರೈಲುಗಳು ಸಂಚರಿಸುತ್ತವೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.