ಹಿರಿಯ ನಾಗರಿಕರಿಗೆ ಜಾಕ್ಪಾಟ್... ಸೂಪರ್ ಟೂರ್ ಪ್ಯಾಕೇಜ್ ಬಿಡುಗಡೆ ಮಾಡಿದ ರೇಲ್ವೆ ಇಲಾಖೆ!
Irctc New Tour Package : ಮೇ ತಿಂಗಳಲ್ಲಿ, ರೇಲ್ವೆ ಇಲಾಖೆ ಈ ಅದ್ಭುತವಾದ ಪ್ರವಾಸದ ಪ್ಯಾಕೇಜ್ ಬಿಡುಗಡೆ ಮಾಡಿದೆ.
kedarnath package: ನಿಮ್ಮ ಕುಟುಂಬದ ಸದಸ್ಯರು 60 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ ಮತ್ತು ಧಾರ್ಮಿ ಸ್ಥಳಕ್ಕೆ ಭೇಟಿ ನೀಡಲು ಬಯಸಿದರೆ ಅವರಿಗಾಗಿ ಉಪಯುಕ್ತ ಮಾಹಿತಿ ಇಲ್ಲಿದೆ. ಕೇದಾರನಾಥ ಮತ್ತು ಬದರಿನಾಥಕ್ಕೆ ಹೋಗಲು ಪ್ಲ್ಯಾನ್ ಮಾಡುತ್ತಿದ್ದರೆ IRCTC ಯ ಈ DO DHAM (Do Dham) ಪ್ರವಾಸ ಪ್ಯಾಕೇಜ್ (ಚಾರ್ಧಾಮ್ ಯಾತ್ರಾ ಪ್ಯಾಕೇಜ್) ನಿಮಗೆ ಉತ್ತಮವಾಗಿದೆ. ಮೇ ತಿಂಗಳಲ್ಲಿ, ರೇಲ್ವೆ ಇಲಾಖೆ ಈ ಅದ್ಭುತವಾದ ಪ್ರವಾಸದ ಪ್ಯಾಕೇಜ್ ಬಿಡುಗಡೆ ಮಾಡಿದೆ. ಇದರಲ್ಲಿ ನೀವು ಎರಡು ಧಾಮಗಳನ್ನು ನೋಡಬಹುದು. ಅಂದರೆ ಕೇದಾರನಾಥ ಮತ್ತು ಬದರಿನಾಥಕ್ಕೆ ಭೇಟಿ ನೀಡುವ ಅವಕಾಶ ಪಡೆಯುತ್ತೀರಿ. ಈ ಪ್ರವಾಸ ಪ್ಯಾಕೇಜ್‌ನ ಸಂಪೂರ್ಣ ವಿವರ ಇಲ್ಲಿ ತಿಳಿಯಿರಿ.
ಈ ಪ್ರವಾಸ ಪ್ಯಾಕೇಜ್ ಮೇ 24 ರಂದು ಪ್ರಾರಂಭವಾಗುತ್ತದೆ. ಈ ದೋ ಧಾಮ್ ಪ್ರವಾಸ ಪ್ಯಾಕೇಜ್ ಕೋಲ್ಕತ್ತಾದಿಂದ ಪ್ರಾರಂಭವಾಗುತ್ತದೆ. ಈ ಪ್ರವಾಸದ ಪ್ಯಾಕೇಜ್ INR 51,100 ರಿಂದ ಪ್ರಾರಂಭವಾಗುತ್ತದೆ.
ಪ್ಯಾಕೇಜ್ ಶುಲ್ಕಗಳ ಸಂಪೂರ್ಣ ವಿವರಗಳನ್ನು ಇಲ್ಲಿ ನೀಡಲಾಗಿದೆ:
* ಈ ಪ್ಯಾಕೇಜ್‌ನಲ್ಲಿ ಒಬ್ಬರೇ ಹೊರಟಿದ್ದರೆ ನೀವು ರೂ.76,200 ಪಾವತಿಸಬೇಕು.
* ಡಬಲ್ ಶೇರಿಂಗ್ ಇದ್ದರೆ ಒಬ್ಬರಿಗೆ ರೂ.53,800 ಪಾವತಿಸಬೇಕಾಗುತ್ತದೆ.
* ಟ್ರಿಪಲ್ ಹಂಚಿಕೆಯಲ್ಲಿ, ಒಬ್ಬ ಪ್ರಯಾಣಿಕನಿಗೆ 51,100 ರೂ.
* 5 ರಿಂದ 11 ವರ್ಷದೊಳಗಿನ ಮಗು ನಿಮ್ಮ ಜೊತೆಗಿದ್ದರೆ, ಮಗುವಿಗೆ ಪ್ರತ್ಯೇಕ ಸೀಟ್ ತೆಗೆದುಕೊಂಡರೆ ರೂ.36800 ಪಾವತಿಸಬೇಕಾಗುತ್ತದೆ.
ಇದನ್ನೂ ಓದಿ: ಬ್ಯಾಂಕ್ ಎಟಿಎಂ ಗೆ ಹೋಗುವ ಅಗತ್ಯವೇ ಇಲ್ಲ ! ಮನೆ ಬಾಗಿಲಿಗೆ ಬರುತ್ತದೆ ಕ್ಯಾಶ್! ಶುರುವಾಗಿದೆ Aadhaar ATM
ಪ್ರವಾಸ ಪ್ಯಾಕೇಜ್ ಎಷ್ಟು ದಿನಗಳವರೆಗೆ ಇರುತ್ತದೆ?
ಈ ಪ್ರವಾಸದ ಪ್ಯಾಕೇಜ್ 7 ರಾತ್ರಿಗಳು ಮತ್ತು 8 ಹಗನ್ನು ಒಳಗೊಂಡಿರುತ್ತದೆ. ಪ್ರವಾಸದ ಪ್ಯಾಕೇಜ್‌ನಲ್ಲಿ ನಿಮ್ಮನ್ನು ಬದರಿನಾಥ್ ಮತ್ತು ಕೇದಾರನಾಥಕ್ಕೆ ಭೇಟಿ ನೀಡಲು ಕರೆದೊಯ್ಯಲಾಗುತ್ತದೆ.
ಈ ಪ್ರವಾಸ ಪ್ಯಾಕೇಜ್‌ಗಾಗಿ ಎಲ್ಲಿ ಬುಕ್ ಮಾಡಬೇಕು?
IRCTC ಯ ಈ ಪ್ರವಾಸ ಪ್ಯಾಕೇಜ್ ಅನ್ನು ಬುಕ್ ಮಾಡಲು, ನೀವು IRCTC ಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು.
ಬುಕ್ ಮಾಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ:
ಈ ಪ್ರವಾಸ ಪ್ಯಾಕೇಜ್ ಕುರಿತು ಹೆಚ್ಚಿನ ಮಾಹಿತಿಗಾಗಿ ನೀವು IRCTC ಅಧಿಕೃತ ವೆಬ್‌ಸೈಟ್ https://www.irctctourism.com/pacakage_description?packageCode=EHA038A ಗೆ ಭೇಟಿ ನೀಡಬಹುದು.
ಈ ಪ್ರವಾಸ ಪ್ಯಾಕೇಜ್‌ನಲ್ಲಿ ಯಾವ ಸೌಲಭ್ಯಗಳನ್ನು ಒದಗಿಸಲಾಗಿದೆ?
* ಬ್ಯುಸಿನೆಸ್ ಕ್ಲಾಸ್ ವಿಮಾನ ಟಿಕೆಟ್
* ಹೋಟೆಲ್ ವಸತಿ
* ಪ್ರತಿದಿನ ಬೆಳಗಿನ ಉಪಾಹಾರ ಮತ್ತು ರಾತ್ರಿಯ ಊಟವನ್ನು ನೀಡಲಾಗುವುದು
* ಪ್ರವಾಸಿ ವಾಹನದ ಮೂಲಕ ಎಲ್ಲಾ ಸ್ಥಳಗಳಿಗೆ ಭೇಟಿ ನೀಡುವ ಅವಕಾಶ.
* ಪ್ರವಾಸ ವಿಮೆ ಇರುತ್ತದೆ.
ಇದನ್ನೂ ಓದಿ: ಆಭರಣ ಪ್ರಿಯರಿಗೆ ಬಿಗ್‌ಶಾಕ್.. ವಾರಾಂತ್ಯದಲ್ಲಿ ಮೂರು ಪಟ್ಟು ಹೆಚ್ಚಾದ ಚಿನ್ನದ ದರ.. ಬೆಳ್ಳಿ ಹೇಗಿದೆ?
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.