Online DL Apply: DLಗಾಗಿ RTOಗೆ ಅಲೆದಾಡುವ ಅಗತ್ಯವಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಅರ್ಜಿ ಸಲ್ಲಿಸಿ
ಮನೆಯಿಂದಲೇ DLಗೆ ಅರ್ಜಿ ಸಲ್ಲಿಸಿ: DLಗಾಗಿ ಇದೀಗ ನೀವು ಯಾವುದೇ ಪ್ರಾದೇಶಿಕ ಸಾರಿಗೆ ಕಚೇರಿಗೆ ಭೇಟಿ ನೀಡುವ ಅಗತ್ಯವಿಲ್ಲ. ಇದೀಗ ಮನೆಯಲ್ಲಿಯೇ ಕುಳಿತು ಡ್ರೈವಿಂಗ್ ಲೈಸೆನ್ಸ್ಗೆ ಅರ್ಜಿ ಸಲ್ಲಿಸಬಹುದು.
ನವದೆಹಲಿ: ನೀವು ಡ್ರೈವಿಂಗ್ ಲೈಸೆನ್ಸ್‍ಗಾಗಿ ಇದೀಗ ಆರ್‌ಟಿಒ (ಪ್ರಾದೇಶಿಕ ಸಾರಿಗೆ ಕಚೇರಿ)ಗೆ ಭೇಟಿ ನೀಡುವ ಅಗತ್ಯವಿಲ್ಲ. ಏಕೆಂದರೆ ನೀವು ಮನೆಯಲ್ಲಿಯೇ ಕುಳಿತು ಡಿಲ್ ಪಡೆದುಕೊಳ್ಳಬಹುದು. ಕೇವಲ ನಿಮ್ಮ ಸ್ಮಾರ್ಟ್‍ಫೋನ್‍ನಲ್ಲಿಯೇ ಅರ್ಜಿ ಸಲ್ಲಿಸಿ ಡಿಎಲ್ ಪಡೆದುಕೊಳ್ಳಬಹುದು. ಇದಕ್ಕಾಗಿ ನೀವು ಯಾವುದೇ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ.
DLಗಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಅನೇಕರಿಗೆ ತಿಳಿದಿಲ್ಲ. ಇದೀಗ ನೀವು ಮನೆಯಲ್ಲಿಯೇ ಕುಳಿತು ಸ್ಮಾರ್ಟ್‍ಫೋನ್ ಮೂಲಕ ಡ್ರೈವಿಂಗ್ ಲೈಸನ್ಸ್ ಪಡೆಯಬಹುದು. ಮೊದಲು ಈ ಸೌಲಭ್ಯವಿರಲಿಲ್ಲ, ಆದರೆ ಇದೀಗ ಅದು ಸುಲಭವಾಗಿದೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.
ಇದನ್ನೂ ಓದಿ: ದೇಶದ ಕೋಟ್ಯಾಂತರ ರೈತರಿಗೊಂದು ಸತಸದ ಸುದ್ದಿ, ನಿತ್ಯ 50 ರೂ.ಹೂಡಿಕೆ ಮಾಡಿ 35 ಲಕ್ಷ ಲಾಭ ಪಡೆಯುವ ಸುವರ್ಣಾವಕಾಶ!
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?
- ಮೊದಲಿಗೆ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಅಧಿಕೃತ ವೆಬ್‌ಸೈಟ್‌ಗೆ ಹೋಗಬೇಕು.( https://sarathi.parivahan.gov.in/sarathiservice/stateSelection.do)
- ಇಲ್ಲಿ ರಾಜ್ಯವನ್ನು ಆಯ್ಕೆ ಮಾಡಿ ಮತ್ತು Apply for a Learner's License ಆಪ್ಶನ್ ಮೇಲೆ ಕ್ಲಿಕ್ ಮಾಡಿ.
- ಈಗ learner driving license ಫಾರ್ಮ್ ಭರ್ತಿ ಮಾಡಿ.
- ಅಗತ್ಯವಿರುವ ಎಲ್ಲಾ ಮಾಹಿತಿ ಭರ್ತಿ ಮಾಡಿ.
- ಆಧಾರ್ ಕಾರ್ಡ್ ಹೊಂದಿರುವ ಅರ್ಜಿದಾರರನ್ನು ಆಯ್ಕೆ ಮಾಡಿ.
- ಆಧಾರ್ ದೃಢೀಕರಣದ ಮೂಲಕ submit ಕ್ಲಿಕ್ ಮಾಡಿ
- ಆಧಾರ್ ಕಾರ್ಡ್ ವಿವರಗಳು ಮತ್ತು ಮೊಬೈಲ್ ಸಂಖ್ಯೆ ನಮೂದಿಸಿ.
- Generate OTP ಮೇಲೆ ಕ್ಲಿಕ್ ಮಾಡಿ.
- ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಸ್ವೀಕರಿಸಿದ OTP ನಮೂದಿಸಿ.
- ನಿಯಮಗಳು ಮತ್ತು ಷರತ್ತುಗಳನ್ನು Accept ಮಾಡಿ.
- Authentication ಬಟನ್ ಮೇಲೆ ಕ್ಲಿಕ್ ಮಾಡಿ.
- license fee payment ಆಪ್ಶನ್ ಆಯ್ಕೆ ಮಾಡಿ.
- ಆನ್‌ಲೈನ್ ಪರೀಕ್ಷೆಗೆ ಸಮಯ ಮತ್ತು ದಿನಾಂಕವನ್ನು ಆಯ್ಕೆ ಮಾಡಿ.
- ನಂತರ ಆನ್‌ಲೈನ್ ಪರೀಕ್ಷೆಯನ್ನು ತೆಗೆದುಕೊಳ್ಳಿ.
ನೀವು ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ನೀವು ದೃಢೀಕರಣ ಪತ್ರ ಪಡೆಯುತ್ತೀರಿ.
ಇದನ್ನೂ ಓದಿ: Small Scheme: ಮಹಿಳೆಯರಿಗೆ ಸಿಗಲಿದೆ ರೂ.2.32 ಲಕ್ಷ: ಕೇಂದ್ರದ ಬೊಂಬಾಟ್ ಗಿಫ್ಟ್ ಪಡೆಯಲು ಈಗಲೇ ಮಾಡಿ ಈ ಪುಟ್ಟ ಕೆಲಸ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.