ಇಪಿಎಫ್ ಕ್ಲೈಮ್ ಅನ್ನು ತಿರಸ್ಕರಿಸಲು ಇವೇ ಪ್ರಮುಖ ಕಾರಣಗಳು
Epf Claim Rejection Reasons: ಹಲವು ಬಾರಿ ಇಪಿಎಫ್ ಹಣವನ್ನು ಹಿಂಪಡೆಯಲು ಅರ್ಜಿ ಹಾಕಿದಾಗಲೆಲ್ಲಾ ಕ್ಲೈಮ್ಗಳನ್ನು ತಿರಸ್ಕರಿಸಲಾಗುತ್ತದೆ. ಅಷ್ಟಕ್ಕೂ, ಇಪಿಎಫ್ ಕ್ಲೈಮ್ ಅನ್ನು ತಿರಸ್ಕರಿಸಲು ಇರುವ ಕೆಲವು ಪ್ರಮುಖ ಕಾರಣಗಳೇನು ಎಂದು ತಿಳಿಯೋಣ...
Epf Claim Rejection Reasons: ಭಾರತ ಸರ್ಕಾರದಿಂದ ನಡೆಸಲ್ಪಡುವ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಒಂದು ಪಿಂಚಣಿ ಯೋಜನೆಯಾಗಿದೆ. ಇಪಿಎಫ್‌ಓ ಸದಸ್ಯರು ತಮ್ಮ ಉದ್ಯೋಗಿಗಳ ಪಿಂಚಣಿ ನಿಧಿ (EPF) ಖಾತೆಯಲ್ಲಿ ಪ್ರತಿ ತಿಂಗಳು ನಿಗದಿತ ಮೊತ್ತವನ್ನು ಠೇವಣಿ ಮಾಡುತ್ತಾರೆ. ನಿಯಮಾನುಸಾರ, ಅಗತ್ಯವಿದ್ದಾಗ ಉದ್ಯೋಗಸ್ಥರು ಕೆಲವು ನಿಯಮಗಳನ್ನು ಅನುಸರಿಸುವ ಮೂಲಕ ಈ ಹಣವನ್ನು ಹಿಂಪಡೆಯಬಹುದು. ಆದಾಗ್ಯೂ, ಹಲವು ಸಂದರ್ಭಗಳಲ್ಲಿ ಕೆಲವು ಕಾರಣಗಳಿಂದಾಗಿ ಇಪಿಎಫ್ ಕ್ಲೈಮ್ ತಿರಸ್ಕರಿಸಲಾಗುತ್ತದೆ.
ಅಷ್ಟಕ್ಕೂ ಯಾವ ಕಾರಣಗಳಿಗೆ ಇಪಿಎಫ್ ಕ್ಲೈಮ್ ಅನ್ನು ತಿರಸ್ಕರಿಸಬಹುದು? ಇದನ್ನು ತಪ್ಪಿಸಲು ಏನು ಮಾಡಬೇಕು ಎಂದು ತಿಳಿಯೋಣ...
ಆನ್‌ಲೈನ್ ಇಪಿಎಫ್ ಕ್ಲೈಮ್ ನಿರಾಕರಣೆಗೆ ಪ್ರಮುಖ ಕಾರಣಗಳು ಈ ಕೆಳಕಂಡಂತಿವೆ:
* ಅಪೂರ್ಣ KYC:
ಇಪಿಎಫ್ ಕ್ಲೈಮ್ ನಿರಾಕರಣೆಗೆ ಪ್ರಮುಖ ಕಾರಣ ಕೆವೈಸಿ ವಿವರಗಳು ಅಪೂರ್ಣವಾಗಿರುವುದು ಮತ್ತು ಮಾನ್ಯವಾಗಿಲ್ಲದಿರುವುದು. ಇದನ್ನು ತಪ್ಪಿಸಲು ಈವು ಇಪಿಎಫ್ ಕ್ಲೈಮ್ ಮಾಡುವ ಮೊದಲು ಕೆವೈಸಿ ಸಂಬಂಧಿತ ಫಾರ್ಮಾಲಿಟಿಗಳನ್ನು ಪೂರ್ಣಗೊಳಿಸಲು ಮರೆಯಬೇಡಿ.
ಇದನ್ನೂ ಓದಿ- Good News! ಹೊಸ ವರ್ಷದಲ್ಲಿ ಎಫ್ಡಿ ಹೂಡಿಕೆ ಮೇಲೆ ಬಂಪರ್ ರೀಟರ್ನ್ ಪಡೆಯಿರಿ, ಬಡ್ಡಿ ದರ ಹೆಚ್ಚಿಸಿದ 4 ಬ್ಯಾಂಕುಗಳು!
* ಆಧಾರ್‌ಗೆ ಯುಎಎನ್ ಲಿಂಕ್:
ನೀವು ನಿಮ್ಮ ಆಧಾರ್ ಅನ್ನು ಯುಎಎನ್ ಸಂಖ್ಯೆಗೆ ಲಿಂಕ್ ಮಾಡದಿದ್ದಾಗಲೂ ಕೂಡ ನಿಮ್ಮ ಇಪಿಎಫ್ ಕ್ಲೈಮ್ ತಿರಸ್ಕರಿಸಬಹುದು. ಇದನ್ನು ತಪ್ಪಿಸಲು ಇಪಿಎಫ್ ಕ್ಲೈಮ್ ಮಾಡುವ ಮೊದ್ಲೌ ನಿಮ್ಮ ಯುಎಎನ್ ಅನ್ನು ತಪ್ಪದೇ ಆಧಾರ್‌ನೊಂದಿಗೆ ಲಿಂಕ್ ಮಾಡಿ.
* ನಿಯಮಗಳನ್ನು ಆನುಸರಿಸದೇ ಇರುವುದು:
ಯಾವುದೇ ಕಂಪನಿಯಲ್ಲಿ ನೀವು ಕನಿಷ್ಠ 6 ತಿಂಗಳುಗಳ ಕಾಲ ಕೆಲಸ ಮಾಡಿದ್ದರಷ್ಟೇ ಪಿಂಚಣಿ ಹಣವನ್ನು ಪಡೆಯಲು ಅರ್ಹರಾಗಿರುತ್ತೀರಿ. 6 ತಿಂಗಳು ಪೂರ್ಣಗೊಳ್ಳುವ ಮೊದಲು, ನೀವು ಹಣ ಹಿಂಪಡೆಯಲು ಫಾರ್ಮ್ 19 ಅನ್ನು ಬಳಸಿಕೊಂಡು ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿದೆ. ಪಿಂಚಣಿ ಹಿಂತೆಗೆದುಕೊಳ್ಳುವಿಕೆಗೆ ಫಾರ್ಮ್ 10C ಮತ್ತು ಫಾರ್ಮ್ 31 ಅನ್ನು ಭಾಗಶಃ ಹಿಂಪಡೆಯಲು ಬಳಸಬಹುದಾಗಿದೆ. ಈ ನಿಯಮಗಳನ್ನು ಆನುಸರಿಸದೇ ಇದ್ದಲ್ಲಿ ನಿಮ್ಮ ಕ್ಲೈಮ್ ಅನ್ನು ತಿರಸ್ಕರಿಸಬಹುದು.
* ಹೊಂದಿಕೆಯಾಗದ ಮಾಹಿತಿ:
ನೀವು ನಿಮ್ಮ ಇಪಿಎಫ್ ಕ್ಲೈಮ್ ಮಾಡುವಾಗ ನೀಡಿದ ಮಾಹಿತಿಯು ಇಪಿಎಫ್ ಡೇಟಾಬೇಸ್‌ನಲ್ಲಿ ನೋಂದಾಯಿಸಲಾದ ವಿವರಗಳಿಗೆ ಹೊಂದಿಕೆಯಾಗದಿದ್ದರೆ ಅಂತಹ ಸಂದರ್ಭದಲ್ಲಿಯೂ ಸಹ ನಿಮ್ಮ ಕ್ಲೈಮ್ ಅನ್ನು ತಿರಸ್ಕರಿಸಬಹುದು. ಇದನ್ನು ತಪ್ಪಿಸಲು ನೀವು ಇಪಿಎಫ್ ಗಾಗಿ ಅರ್ಜಿ ಸಲ್ಲಿಸುವಾಗ ಹೆಸರು, ಹುಟ್ಟಿದ ದಿನಾಂಕ ಮತ್ತು ಇಪಿಎಫ್ ಖಾತೆ ಸಂಖ್ಯೆಯಂತಹ ನಿಮ್ಮ ವೈಯಕ್ತಿಕ ವಿವರಗಳು ನಿಮ್ಮ ಇಪಿಎಫ್ ಖಾತೆಯೊಂದಿಗೆ ಹೊಂದಾಣಿಕೆಯಾಗುತ್ತವೆಯೇ ಎಂಬುದನ್ನು ಪರಿಶೀಲಿಸಲು ಮರೆಯಬೇಡಿ.
ಇದನ್ನೂ ಓದಿ- ವರ್ಷ 2024ರಲ್ಲಿ ಬಂಬಾಟ್ ರೀಟರ್ನ್ ನೀಡಲಿದೆ ಈ ಸರ್ಕಾರಿ ಯೋಜನೆ, ನಿಯಮಿತ 4 ಸಾವಿರ ರೂ.ಗಳ ಹೂಡಿಕೆ 22 ಲಕ್ಷ ರೂ.ಗಳಾಗಲಿದೆ!
ಇಪಿಎಫ್ ಹಣವನ್ನು ಯಾವಾಗ ಹಿಂಪಡೆಯಬಹುದು?
ಇಪಿಎಫ್ ಖಾತೆಯಲ್ಲಿ ಠೇವಣಿ ಮಾಡಿದ ಹಣವನ್ನು ಭಾಗಶಃ ಅಥವಾ ಸಂಪೂರ್ಣವಾಗಿ ಹಿಂಪಡೆಯಬಹುದು. ಉದ್ಯೋಗಿ ನಿವೃತ್ತರಾದಾಗ ಅಥವಾ ನಿರಂತರವಾಗಿ 2 ತಿಂಗಳಿಗಿಂತ ಹೆಚ್ಚು ಕಾಲ ನಿರುದ್ಯೋಗಿಯಾಗಿದ್ದಾಗ ಪಿಎಫ್ ಹಣವನ್ನು ಸಂಪೂರ್ಣವಾಗಿ ಹಿಂಪಡೆಯಬಹುದು. ಅದೇ ರೀತಿ, ವೈದ್ಯಕೀಯ ತುರ್ತುಸ್ಥಿತಿ, ಮದುವೆ, ಗೃಹ ಸಾಲ ಪಾವತಿ ಮುಂತಾದ ಸಂದರ್ಭಗಳಲ್ಲಿ ಪಿಎಫ್ ಹಣದ ಭಾಗಶಃ ಹಣವನ್ನು ಹಿಂಪಡೆಯಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.