ನವದೆಹಲಿ: ಹೂಡಿಕೆ ಮಾಡಲು ಬಯಸುವ ಆದರೆ ರಿಸ್ಕ್ ತೆಗೆದುಕೊಳ್ಳಲು ಇಚ್ಛಿಸದವರಿಗೆ, ಸ್ಥಿರ ಠೇವಣಿ (Fixed Deposit) ಉತ್ತಮ ಆಯ್ಕೆಯಾಗಿದೆ. ಆದರೆ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿದರಗಳು ಕಳೆದ ಕೆಲವು ತಿಂಗಳುಗಳಿಂದ ಗಣನೀಯವಾಗಿ ಇಳಿದಿವೆ, ಈ ಕಾರಣದಿಂದಾಗಿ ಎಫ್‌ಡಿ ಮೇಲೆ ಹೂಡಿಕೆದಾರರ ಪ್ರವೃತ್ತಿ ಸ್ವಲ್ಪ ಕಡಿಮೆಯಾಗಿದೆ. ಆದರೆ 7% ರಿಂದ 7.5% ವರೆಗೆ ಬಡ್ಡಿ ಪಾವತಿಸುತ್ತಿರುವ ಕೆಲವು ಬ್ಯಾಂಕುಗಳ ಬಗ್ಗೆ ನಾವು ನಿಮಗೆ ಹೇಳಲಿದ್ದೇವೆ.


COMMERCIAL BREAK
SCROLL TO CONTINUE READING

ಪ್ರಸ್ತುತ, ದೇಶದ ಅತಿದೊಡ್ಡ ಬ್ಯಾಂಕ್ ಎಸ್‌ಬಿಐ (SBI) 1 ವರ್ಷದಿಂದ 2 ವರ್ಷಗಳ ನಡುವೆ ಸ್ಥಿರ ಠೇವಣಿಗಳಿಗೆ 4.90% ಬಡ್ಡಿಯನ್ನು ಪಾವತಿಸುತ್ತಿದೆ. ಎಫ್‌ಡಿಯ ಅವಧಿ ಮತ್ತು ಬಡ್ಡಿದರಗಳು ಬ್ಯಾಂಕಿನಿಂದ ಬ್ಯಾಂಕ್‌ಗೆ ಬದಲಾಗುತ್ತವೆ. ಸಾಮಾನ್ಯವಾಗಿ ಸ್ಥಿರ ಠೇವಣಿಗಳು (Fixed Deposit) 7 ದಿನಗಳಿಂದ 10 ವರ್ಷಗಳವರೆಗೆ ಇರುತ್ತವೆ. ಹೆಚ್ಚಿನ ದೊಡ್ಡ ವಾಣಿಜ್ಯ ಬ್ಯಾಂಕುಗಳಲ್ಲಿ ಸ್ಥಿರ ಠೇವಣಿಗಳ ಮೇಲೆ ನೀಡಲಾಗುವ ಬಡ್ಡಿ ದರಗಳು ಕಡಿಮೆ, ಆದರೆ ಸಣ್ಣ ಹಣಕಾಸು ಬ್ಯಾಂಕುಗಳಲ್ಲಿ ಎಫ್‌ಡಿಗೆ ಹೆಚ್ಚಿನ ಬಡ್ಡಿ ಪಾವತಿಸಲಾಗುತ್ತಿದೆ. ಅನೇಕ ಸಣ್ಣ ಹಣಕಾಸು ಬ್ಯಾಂಕುಗಳು ಎಫ್‌ಡಿ ಮೇಲೆ 2.5% ರಿಂದ 7.5% ವರೆಗಿನ ಬಡ್ಡಿ ನೀಡುತ್ತಿವೆ.


1. Jana Small Finance Bank 
ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ (Jana Small Finance Bank) ಸ್ಥಿರ ಠೇವಣಿಗಳ (Fixed Deposit) ಮೇಲೆ 2.5% ರಿಂದ 7.50% ವರೆಗೆ ಬಡ್ಡಿ ನೀಡುತ್ತಿದೆ, ಅವುಗಳ ಅವಧಿ 7 ದಿನಗಳಿಂದ 10 ವರ್ಷಗಳವರೆಗೆ. ಹಿರಿಯ ನಾಗರಿಕರಿಗೆ ಬ್ಯಾಂಕ್ 0.50% ಹೆಚ್ಚುವರಿ ಬಡ್ಡಿಯನ್ನು ಸಹ ಪಾವತಿಸುತ್ತದೆ. ಆದ್ದರಿಂದ ಹಿರಿಯ ನಾಗರಿಕರು 4% ರಿಂದ 8% ವರೆಗೆ ಬಡ್ಡಿ ಗಳಿಸಬಹುದು. ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಸಹ 2 ರಿಂದ 3 ವರ್ಷಗಳ ಠೇವಣಿಗಳ ಮೇಲೆ ಹೆಚ್ಚಿನ ಬಡ್ಡಿಯನ್ನು ನೀಡುತ್ತದೆ.


ಈ ಠೇವಣಿಗಳ ಮೇಲೆ ಬ್ಯಾಂಕ್ 7.25% ನೀಡುತ್ತಿದ್ದರೆ, ಹಿರಿಯ ನಾಗರಿಕರಿಗೆ ಈ ಅವಧಿಯ ಬಡ್ಡಿದರ 7.75% ಆಗಿದೆ. ಬ್ಯಾಂಕ್ ತಾಜಾ ಎಫ್‌ಡಿ ದರ ಡಿಸೆಂಬರ್ 22 ರಿಂದ ಅನ್ವಯವಾಗುತ್ತದೆ


  • ಅವಧಿ ಎಫ್ಡಿ             ಬಡ್ಡಿ ದರಗಳು

  • 7-14 ದಿನಗಳು    -     2.50%

  • 15-60 ದಿನಗಳು    -    3.00%

  • 61-90 ದಿನಗಳು     -    3.75%

  • 91-180 ದಿನಗಳು    -    4.50%

  • 181-364 ದಿನಗಳು     -    6.00%

  • 1 ವರ್ಷ         -    6.75%

  • 1-2 ವರ್ಷಗಳು     -    7.00%

  • 2 ವರ್ಷಗಳು - 3 ವರ್ಷಗಳು     -    7.00%

  • 3 ವರ್ಷ -5 ವರ್ಷಗಳು     -    7.25%

  • 5 ವರ್ಷಗಳು         -    7.00%

  • 5 ವರ್ಷಗಳು -10 ವರ್ಷಗಳು     -    6.50%


ಇದನ್ನೂ ಓದಿ - ದೊಡ್ಡ ಬದಲಾವಣೆಯತ್ತ Transport Ministry, ಈ ಕೆಲಸ ಮಾಡಿದರಷ್ಟೇ ವಾಹನ ಚಲಾಯಿಸಲು ಸಾಧ್ಯ


2. Utkarsh Small Finance Bank 
ಉತ್ಕರ್ಶ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಸ್ಥಿರ ಠೇವಣಿಗಳ ಮೇಲೆ 3% ರಿಂದ 7% ವರೆಗೆ ಬಡ್ಡಿಯನ್ನು ಪಾವತಿಸುತ್ತದೆ. ಹಿರಿಯ ನಾಗರಿಕರು ಶೇಕಡಾ 3.50 ರಿಂದ 7.50 ರವರೆಗೆ ಅಂದರೆ 0.5 ಪ್ರತಿಶತದಷ್ಟು ಹೆಚ್ಚಿನ ಬಡ್ಡಿಯನ್ನು ಪಡೆಯುತ್ತಾರೆ. ಈ ಬಡ್ಡಿಯು 7 ದಿನಗಳಿಂದ 10 ವರ್ಷಗಳವರೆಗೆ ಇರುತ್ತದೆ. 700 ದಿನಗಳ ಮೆಚ್ಯೂರಿಟಿ ಅವಧಿಗೆ ಬ್ಯಾಂಕ್ ಹೆಚ್ಚಿನ ಬಡ್ಡಿಯನ್ನು ಪಾವತಿಸುತ್ತದೆ, ಇದು 3% ರಿಂದ 7% ವ್ಯಾಪ್ತಿಯಲ್ಲಿರುತ್ತದೆ.


  • ಅವಧಿ ಎಫ್ಡಿ         -    ಬಡ್ಡಿ ದರಗಳು

  • 7-45 ದಿನಗಳು     -    3.00%

  • 46-90 ದಿನಗಳು     -    3.25%

  • 91-180 ದಿನಗಳು     -    4.00%

  • 181-364 ದಿನಗಳು     -    6.00%

  • 365-699 ದಿನಗಳು     -    6.75%

  • 700 ದಿನಗಳು     -    7.00%

  • 701-3652 ದಿನಗಳು     -    6.75%


ಈ ದರಗಳು ಹೊಸ ಸ್ಥಿರ ಠೇವಣಿಗಳಿಗೆ ಮತ್ತು ಅಸ್ತಿತ್ವದಲ್ಲಿರುವ ಎಫ್‌ಡಿಗಳ ನವೀಕರಣಗಳಿಗೆ ಅನ್ವಯವಾಗುತ್ತವೆ.


ಇದನ್ನೂ ಓದಿ - 7th Pay Commission: ಬದಲಾಗುತ್ತಿದೆ ಪೆನ್ಶನ್ ನಿಯಮ, ಜೀವನಪೂರ್ತಿ ಪೆನ್ಶನ್ ಯಾರಿಗೆ?


3. Suryoday Small Finance Bank 
ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಸಾಮಾನ್ಯ ಗ್ರಾಹಕರಿಗೆ 4% ರಿಂದ 7.50% ವರೆಗೆ ಸ್ಥಿರ ಠೇವಣಿಗಳಿಗೆ ಬಡ್ಡಿದರಗಳನ್ನು ನೀಡುತ್ತಿದೆ. 5 ವರ್ಷಗಳ ಮುಕ್ತಾಯದ ಎಫ್‌ಡಿಗಳಿಗೆ ಬ್ಯಾಂಕ್ ಹೆಚ್ಚಿನ ಬಡ್ಡಿದರವನ್ನು ನೀಡುತ್ತಿದೆ.


  • ಅವಧಿ ಎಫ್ಡಿ        -    ಬಡ್ಡಿ ದರಗಳು

  • 7-14 ದಿನಗಳು     -    4.00%

  • 15-45 ದಿನಗಳು     -    4.00%

  • 46-90 ದಿನಗಳು     -    5.00%

  • 91 ದಿನಗಳು - 6 ತಿಂಗಳುಗಳು     -    5.50%

  • 6-9 ತಿಂಗಳು         -    6.25%

  • 9 ತಿಂಗಳು - 1 ವರ್ಷ     -    6.50%

  • 1-2 ವರ್ಷಗಳು     -    6.75%

  • 2-3 ವರ್ಷಗಳು     -    7.15%

  • 3 ವರ್ಷಗಳು - 5 ವರ್ಷಗಳು     -    7.25%

  • 5 ವರ್ಷಗಳು         -    7.50%

  • 5-10 ವರ್ಷಗಳು     -    7.00%
     


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.