ನವದೆಹಲಿ: New Budget Cars In 2021: ಪ್ರತಿಯೊಂದು ನೂತನ ವರ್ಷವು ಹೊಸ ಭರವಸೆಯನ್ನು ತರುತ್ತದೆ. ಜನರು ಹೊಸ ವರ್ಷದಲ್ಲಿ ಅನೇಕ ಯೋಜನೆಗಳನ್ನು ಮಾಡುತ್ತಾರೆ. ನೀವು 2021 ರಲ್ಲಿ ಅಂದರೆ ಹೊಸ ವರ್ಷದಲ್ಲಿ ಕಾರು ಖರೀದಿಸಲು ಯೋಜಿಸುತ್ತಿದ್ದರೆ, ಕಡಿಮೆ ಬಜೆಟ್‌ನಲ್ಲಿಯೂ ಸಹ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿರುವ ಕಾರನ್ನು ನೀವು ಖರೀದಿಸಬಹುದು. ಅನೇಕ ಭಾರತೀಯ ಮತ್ತು ವಿದೇಶಿ ಕಂಪನಿಗಳು ದೇಶದ ವಾಹನ ಉದ್ಯಮದಲ್ಲಿ ತಮ್ಮ ಹಿಡಿತವನ್ನು ಬಲಪಡಿಸಲು ಪ್ರಯತ್ನಿಸುತ್ತಿವೆ. ಈ ಹಿನ್ನೆಲೆಯಲ್ಲಿ ಅವು ಮುಂದಿನ ವರ್ಷ ಅನೇಕ ಉತ್ತಮ ಕಾರುಗಳನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿವೆ. ಇಂದು ನಾವು ನಿಮಗೆ 5 ಲಕ್ಷಕ್ಕಿಂತಲೂ ಕಡಿಮೆ ಬೆಲೆಗೆ ಸಿಗುವ ನಾಲ್ಕು ಕಾರ್ ಗಳ ಕುರಿತು ಮಾಹಿತಿ ನೀಡಲಿದ್ದೇವೆ.


COMMERCIAL BREAK
SCROLL TO CONTINUE READING

Maruti XL 5
ಮಾರುತಿ ಕಂಪನಿಯ ಈ ಕಾರ್  ಮುಂದಿನ ವರ್ಷ ಫೆಬ್ರವರಿಯಲ್ಲಿ ಬಿಡುಗಡೆಯಾಗುತ್ತಿದೆ. ಇದರ ಎಕ್ಸ್‌ಶೋರೂಂ ಬೆಲೆ ಸುಮಾರು 5 ಲಕ್ಷ ರೂಪಾಯಿಗಳಾಗಿರಬಹುದು. 1.2L ಪೆಟ್ರೋಲ್ ಎಂಜಿನ್ ಹೊಂದಿರುವ ಈ ಕಾರು ಐದು ಸ್ಪೀಡ್ ಮ್ಯಾನುವಲ್, ನಾಲ್ಕು ಸ್ಪೀಡ್ ಆಟೋಮ್ಯಾಟಿಕ್ನೊಂದಿಗೆ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ. ಈ ಕಾರಿನ ವಿನ್ಯಾಸ ವ್ಯಾಗನ್ ಆರ್ ನಂತೆ ಇರಲಿದೆ. ಇದು ಪುಶ್ ಬಟನ್ ಸ್ಟಾರ್ಟ್, ಎಲ್ಇಡಿ ಡಿಆರ್ಎಲ್ ಮತ್ತು ಸ್ವಯಂಚಾಲಿತ ಹವಾಮಾನ ನಿಯಂತ್ರಣದಂತಹ ಹಲವು ವೈಶಿಷ್ಟ್ಯಗಳನ್ನು ಹೊಂದಿರಲಿದೆ.


Tata HBX
ಟಾಟಾ ಮೋಟಾರ್ಸ್‌ನ ಈ ಕಾರನ್ನು ಮಾರ್ಚ್ 2021 ರಲ್ಲಿ ಬಿಡುಗಡೆ ಮಾಡಲಾಗುವುದು. ಇದರ ಎಕ್ಸ್‌ಶೋರೂಂ ಬೆಲೆ ಸುಮಾರು 5 ಲಕ್ಷ ರೂಪಾಯಿಗಳಾಗಿರುತ್ತದೆ. 1.2L ರೆವೊಟ್ರಾನ್ ಪೆಟ್ರೋಲ್ ಎಂಜಿನ್ ಇದನ್ನು ಶಕ್ತಿಯುತ ಕಾರನ್ನಾಗಿ ಮಾಡುತ್ತದೆ. ಈ ಕಾರು ಐದು ಸ್ಪೀಡ್ ಮ್ಯಾನುವಲ್, 5 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಮಾರುಕಟ್ಟೆಗೆ ಪ್ರವೇಶಿಸಲಿದೆ. ಈ ಕಾರು 7 ಇಂಚಿನ ಫ್ಲೋಟಿಂಗ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸೆಟಪ್ ಜೊತೆಗೆ ಸ್ವಯಂಚಾಲಿತ ಗೇರ್ ಬಾಕ್ಸ್‌ನೊಂದಿಗೆ ಹೊಂದಿರುತ್ತದೆ. ಈ ಕಾರಿನ ವಿನ್ಯಾಸ ಬಹಳ ಅದ್ಭುತವಾಗಿರುತ್ತದೆ. ಟಾಟಾ ಮೋಟಾರ್ಸ್ ಕಾರುಗಳು ಭಾರತದಲ್ಲಿ ಭಾರಿ ಜನಪ್ರೀಯತೆ ಹೊಂದಿವೆ.


Honda Brio 2020
ಮುಂದಿನ ವರ್ಷ ಮಾರುಕಟ್ಟಗೆ  ಕಡಿಮೆ ಬಜೆಟ್ ಕಾರನ್ನು ಬಿಡುಗಡೆ ಮಾಡಲು ಹೋಂಡಾ ಸಿದ್ಧತೆ ನಡೆಸಿದೆ. ಈ ಕಾರನ್ನು ಮುಂದಿನ ವರ್ಷ ಜೂನ್‌ನಲ್ಲಿ ಬಿಡುಗಡೆ ಮಾಡಲಾಗುವುದು. ಇದರ ಎಕ್ಸ್‌ಶೋರೂಂ ಬೆಲೆ 5 ಲಕ್ಷ ರೂಪಾಯಿ ಇರಬಹುದು ಎಂದು ನಿರೀಕ್ಷಿಸಲಾಗಿದೆ. ಕಂಪನಿಯು ಈ ಕಾರಿನ ಹಿಂದಿನ ಆವೃತ್ತಿಯನ್ನು ಇಂಡೋನೇಷ್ಯಾದಲ್ಲಿ ಬಿಡುಗಡೆ ಮಾಡಿದೆ. ಆದರೆ ಈ ಹೊಸ ಕಾರಿನ ವಿನ್ಯಾಸವು ಸಂಪೂರ್ಣವಾಗಿ ಭಿನ್ನವಾಗಿರಲಿದೆ. 1.2 L ಐ-ವಿಟಿಇಸಿ ಪೆಟ್ರೋಲ್ ಎಂಜಿನ್ ಹೊಂದಿದ ಈ ಕಾರು ಹಲವು ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿದೆ. ಕೀಲೆಸ್ ಎಂಟ್ರಿ, ಸ್ವಯಂಚಾಲಿತ ಹವಾಮಾನ ನಿಯಂತ್ರಣ, ಡ್ಯುಯಲ್ ಏರ್ ಬ್ಯಾಗ್ ಮತ್ತು ಎಲ್ಇಡಿ ಹೆಡ್ಲ್ಯಾಂಪ್ ಮತ್ತು ಟೆಲಿ ದೀಪಗಳು ಈ ಕಾರಿನ ಕೆಲ ಹೊಸ ವೈಶಿಷ್ಟ್ಯಗಳಾಗಿವೆ.


Hyundai Nexo
ಮುಂದಿನ ವರ್ಷ ಅಕ್ಟೋಬರ್‌ನಲ್ಲಿ ಹ್ಯುಂಡೈ ತನ್ನ ಎಲೆಕ್ಟ್ರಿಕ್ ಕಾರನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲಿದೆ. ಇದರ ಎಕ್ಸ್‌ಶೋರೂಂ ಬೆಲೆ ಸುಮಾರು 5 ಲಕ್ಷ ರೂಪಾಯಿಗಳು ಎಂದು ನಿರೀಕ್ಷಿಸಲಾಗಿದೆ. 120 ಕಿ.ವ್ಯಾ ಮೋಟಾರ್ ಎಂಜಿನ್ ಹೊಂದಿರುವ ಈ ಕಾರು ತುಂಬಾ ಶಕ್ತಿಯುತವಾಗಿರಲಿದೆ. ವಿಶೇಷವೆಂದರೆ ಈ ಕಾರಿನ ಇಂಧನ ಟ್ಯಾಂಕ್ ಸಾಮರ್ಥ್ಯ 156.6 ಲೀಟರ್ ಆಗಿರುತ್ತದೆ. ಮುಂಬೈನಲ್ಲಿ ಈ ಕಾರ್  ಎಲೆಕ್ಟ್ರಿಕ್ ಕಾರ್ ಆಗಲಿದೆ. ಈ ಹ್ಯಾಚ್‌ಬ್ಯಾಕ್ ಕಾರಿನ ವಿನ್ಯಾಸ ಬಹಳ ಆಕರ್ಷಕವಾಗಿದೆ. ಈ ಕಾರು 5 ಆಸನಗಳನ್ನು ಹೊಂದಿರಲಿದೆ.