ಬೆಂಗಳೂರು : ಪಿಎಂ ಕಿಸಾನ್ ಸಮ್ಮಾನ್ ನಿಧಿಯ 11 ನೇ ಕಂತನ್ನು ದೇಶಾದ್ಯಂತ 10 ಕೋಟಿಗೂ ಹೆಚ್ಚು ರೈತರಿಗೆ ನೀಡಲಾಗಿದೆ. ಮೇ 31ರಂದು ಕಾರ್ಯಕ್ರಮವೊಂದರಲ್ಲಿ 11ನೇ ಕಂತಿನ ಹಣವನ್ನು ಪ್ರಧಾನಿ ಮೋದಿ ರೈತರ ಖಾತೆಗೆ ವರ್ಗಾಯಿಸಿದ್ದರು. ಈ ಕಂತಿನ ಬಿಡುಗಡೆಯ ನಂತರ ಬಹಳಷ್ಟು ಅರ್ಹರಲ್ಲದ ರೈತರು ಕೂಡಾ ಹಣವನ್ನು ಪಡೆದುಕೊಂಡಿದ್ದಾರೆ ಎನ್ನುವ ಅಂಶ ಬೆಳಕಿಗೆ ಬಂದಿದೆ. 


COMMERCIAL BREAK
SCROLL TO CONTINUE READING

ಈ ಹಿಂದೆಯೂ ಈ ಯೋಜನೆಯನ್ನು ದುರುಪಯೋಗಪಡಿಸಿಕೊಂಡು ಲಾಭ ಪಡೆದವರಿಗೆ ನೋಟಿಸ್‌ ಕಳುಹಿಸಲಾಗಿತ್ತು. ಈ ಯೋಜನೆಯ ಫಲಾನುಭವಿಗಳಿಗೆ ಸರ್ಕಾರ ಸಾಮಾಜಿಕ ಲೆಕ್ಕ ಪರಿಶೋಧನೆಯನ್ನೂ ಆರಂಭಿಸಿತ್ತು. ಯಾರು ಈ ಯೋಜನೆಯನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಕಂಡು ಹಿಡಿಯುವ ಉದ್ದೇಶದಿಂದ ಸಾಮಾಜಿಕ ಲೆಕ್ಕ ಪರಿಶೋಧನೆಯನ್ನು ನಡೆಸಲಾಗುತ್ತಿದೆ.  


ಇದನ್ನೂ ಓದಿ : ರೈಲಿನಲ್ಲಿ ರಾತ್ರಿ ಪ್ರಯಾಣದ ವೇಳೆ ಮಾಡುವ ಈ ತಪ್ಪುಗಳು ಜೈಲು ಪಾಲಾಗಿಸಬಹುದು ..!


ಕಂತಿನ ಹಣವನ್ನು ಯಾರಿಗೆ ಹಿಂತಿರುಗಿಸಬೇಕು ? :
ನೀವು ಕಂತಿನ ಹಣವನ್ನು ಹಿಂದಿರುಗಿಸಬೇಕೇ ಅಥವಾ ಬೇಡವೇ ಎನ್ನುವುದನ್ನು  ಆನ್‌ಲೈನ್‌ನಲ್ಲಿ ಪರಿಶೀಲಿಸಬಹುದು. 
1. ಇದಕ್ಕಾಗಿ, ಪಿಎಂ ಕಿಸಾನ್‌ನ ವೆಬ್‌ಸೈಟ್‌ಗೆ ಭೇಟಿ ನೀಡಬೇಕು.  
2. ಇಲ್ಲಿ ಫಾರ್ಮರ್ ಕಾರ್ನರ್‌ನಲ್ಲಿ  ಆನ್‌ಲೈನ್‌ ಪೇಮೆಂಟ್ ಆಪ್ಷನ್ ಕಾಣಿಸುತ್ತದೆ. 
3. ಇಲ್ಲಿ ಕ್ಲಿಕ್ ಮಾಡಿದಾಗ, ತೆರೆಯುವ ವೆಬ್ ಪುಟದಲ್ಲಿ ಕೇಳಲಾದ ಎಲ್ಲಾ ಮಾಹಿತಿಯನ್ನು ನಮೂದಿಸಿ. 
4. ಇದರ ನಂತರ, ನೀವು ನಿಮ್ಮ ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ ಅಥವಾ ಮೊಬೈಲ್ ಸಂಖ್ಯೆಯನ್ನು ಇಲ್ಲಿ ನಮೂದಿಸಬೇಕು.
5. ಎಲ್ಲಾ ಮಾಹಿತಿಯನ್ನು ನಮೂದಿಸಿದ ನಂತರ, ಒಮ್ಮೆ ಕ್ರಾಸ್ ಚೆಕ್ ಮಾಡಿ ಮತ್ತು ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ ಮತ್ತು 'getdata' ಕ್ಲಿಕ್ ಮಾಡಿ. 
6. ಇಲ್ಲಿ ಕ್ಲಿಕ್ ಮಾಡಿದ ನಂತರ, 'You are not eligble for any refund amount ಎಂಬ ಸಂದೇಶ ಬಂದರೆ ನೀವು ಹಣವನ್ನು ಮರುಪಾವತಿಸಬೇಕಾಗಿಲ್ಲ. ಆದರೆ ಇಲ್ಲಿ Refund Amount ಎಮಬ್ ಸಂದೇಶ ಬಂದರೆ ಹಣವನ್ನು ಹಿಂತಿರುಗಿಸಬೇಕಾಗುತ್ತದೆ. 


ಓದನು ವೇಳೆ ನೀವು ಹಣವನ್ನು ಹಿಂತಿರುಗಿಸದಿದ್ದರೆ, ಯಾವುದೇ ಸಮಯದಲ್ಲಿಯಾದರೂ  ಸರ್ಕಾರದಿಂದ ನೋಟಿಸ್ ಪಡೆಯಬಹುದು.


ಇದನ್ನೂ ಓದಿ : Today Vegetable Price: ಮಾರುಕಟ್ಟೆಯಲ್ಲಿ ಇಳಿಕೆ ಕಂಡ ತರಕಾರಿ ಬೆಲೆ: ಗ್ರಾಹಕರೇ ಇಲ್ಲಿ ಗಮನಿಸಿ


ಯೋಜನೆಯ ಲಾಭ ಪಡೆಯಲು ಯಾರು ಅರ್ಹರಲ್ಲ? :
ನಿಯಮಗಳ ಪ್ರಕಾರ, ಐಟಿಆರ್ ಅನ್ನು ಸಲ್ಲಿಸುವ ಅಥವಾ ಸರ್ಕಾರಿ ಉದ್ಯೋಗಿಯಾಗಿರುವ ಯಾವುದೇ ವ್ಯಕ್ತಿ ಪಿಎಂ ಕಿಸಾನ್ ಅಡಿಯಲ್ಲಿ ಪ್ರಯೋಜನವನ್ನು ಪಡೆಯುವುಡು ಸಾಧ್ಯವಾಗುವುದಿಲ್ಲ. ಜಮೀನು ಪತಿ ಮತ್ತು ಹೆಂಡತಿ ಇಬ್ಬರ ಹೆಸರಲ್ಲಿದ್ದರೆ, ಕುಟುಂಬದಲ್ಲಿ ಒಬ್ಬ ವ್ಯಕ್ತಿ ಮಾತ್ರ ವಾರ್ಷಿಕ 6000 ರೂ. ಪಡೆಯುವುದು ಸಾಧ್ಯವಾಗುತ್ತದೆ. 


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.