Income Tax Return : ತೆರಿಗೆ ವಿಧಿಸಬಹುದಾದ ಮಿತಿಗಿಂತ ಹೆಚ್ಚಿನ ಆದಾಯ ಹೊಂದಿರುವವರು ತೆರಿಗೆ ಪಾವತಿಸಬೇಕಾಗುತ್ತದೆ. ಪ್ರಸ್ತುತ, ದೇಶದಲ್ಲಿ ಎರಡು ವಿಭಿನ್ನ ತೆರಿಗೆ ನಿಯಮಗಳ ಅಡಿಯಲ್ಲಿ  ಆದಾಯ ತೆರಿಗೆಯನ್ನು ಪಾವತಿಸಲಾಗುತ್ತದೆ. ಹೊಸ ತೆರಿಗೆ ಪದ್ಧತಿ ಮತ್ತು ಹಳೆಯ ತೆರಿಗೆ ಪದ್ಧತಿಯಲ್ಲಿ ಯಾವುದಾದರು ಒಂದು ಆಯ್ಕೆಯನ್ನು ಆರಿಸುವ ಮೂಲಕ ತೆರಿಗೆ ಪಾವತಿಸಬಹುದಾಗಿದೆ. ಎರಡೂ ತೆರಿಗೆ ವ್ಯವಸ್ಥೆಗಳಲ್ಲಿ  ಬೇರೆ ಬೇರೆ ತೆರಿಗೆ ಸ್ಲ್ಯಾಬ್‌ಗಳನ್ನು ನೀಡಲಾಗಿದೆ. ಈ ಸ್ಲ್ಯಾಬ್‌ಗಳಿಗೆ ಅನುಸಾರವಾಗಿ ತೆರಿಗೆಯನ್ನು ಸಲ್ಲಿಸಬೇಕಾಗುತ್ತದೆ. 


COMMERCIAL BREAK
SCROLL TO CONTINUE READING

ಆದಾಯ ತೆರಿಗೆ ರಿಟರ್ನ್ :
ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್, ಈ ಬಾರಿಯ ಬಜೆಟ್ ನಲ್ಲಿ ಆದಾಯ ತೆರಿಗೆಯಲ್ಲಿ ಹಲವಾರು ಬದಲಾವಣೆಗಳನ್ನು ಘೋಷಿಸಿದ್ದರು. ಈ ಘೋಷಣೆಯ ಅನ್ವಯ ತೆರಿಗೆ ಪದ್ಧತಿಯನ್ನು ಬದಲಾಯಿಸಲಾಯಿತು. ಇದರೊಂದಿಗೆ ಆದಾಯ ತೆರಿಗೆ ಸ್ಲ್ಯಾಬ್‌ಗಳನ್ನೂ ಬದಲಾಯಿಸಲಾಯಿತು. ಹೊಸ ತೆರಿಗೆ ಪದ್ಧತಿಯ ಪ್ರಕಾರ 3 ಲಕ್ಷದವರೆಗೆ ಶೂನ್ಯ ತೆರಿಗೆಯನ್ನು ಇರಿಸಲಾಗಿದೆ. 


ಇದನ್ನೂ ಓದಿ : ಕರ್ನಾಟಕದ ಈ ಬ್ಯಾಂಕ್ ಸೇರಿದಂತೆ 8 ಬ್ಯಾಂಕ್ ಗಳ ಲೈಸನ್ಸ್ ರದ್ದು ಮಾಡಿದ RBI!


ವಾರ್ಷಿಕವಾಗಿ 3-6 ಲಕ್ಷ ಆದಾಯದ ಮೇಲೆ 5% ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಮತ್ತೊಂದೆಡೆ,  6-9 ಲಕ್ಷ ರೂಪಾಯಿಗಳಾಗಿದ್ದರೆ, 10% ಆದಾಯ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.  ಇನ್ನು ಯಾರ ವಾರ್ಷಿಕ ಆದಾಯ  9-12 ಲಕ್ಷ ರೂ.ಗಳವರೆಗೆ ಇದೆಯೋ ಅವರು 15% ತೆರಿಗೆಯನ್ನು ಪಾವತಿಸಬೇಕಾಗುತ್ತದೆ.  ಇನ್ನು 12-15 ಲಕ್ಷ ರೂಪಾಯಿ ಆದಾಯವಿರುವ ಜನರು, 20% ತೆರಿಗೆಯನ್ನು  ನೀಡಬೇಕಾಗುತ್ತದೆ. ಇದಲ್ಲದೆ, 15 ಲಕ್ಷ ರೂ.ಗಿಂತ ಹೆಚ್ಚಿನ ಆದಾಯ ಹೊಂದಿರುವ ಜನರು 30% ತೆರಿಗೆಯನ್ನು ಸಲ್ಲಿಸಬೇಕಾಗುತ್ತದೆ.


ಇನ್ನು ಹಳೆಯ ತೆರಿಗೆ ಪದ್ಧತಿಯನ್ನು ನೋಡುವುದಾದರೆ 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ವೈಯಕ್ತಿಕ ತೆರಿಗೆದಾರರು 2.5 ಲಕ್ಷದವರೆಗೆ ಯಾವುದೇ ತೆರಿಗೆಯನ್ನು ಪಾವತಿಸಬೇಕಾಗಿಲ್ಲ. ವಾರ್ಷಿಕ 2.5 ರಿಂದ 5 ಲಕ್ಷ ರೂಪಾಯಿಗಳ ಆದಾಯದ ಮೇಲೆ 5% ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಅದೇ ಸಮಯದಲ್ಲಿ, ವಾರ್ಷಿಕ 5-10 ಲಕ್ಷ ರೂಪಾಯಿಗಳ ಆದಾಯದ ಮೇಲೆ 20 ಪ್ರತಿಶತ ತೆರಿಗೆಯನ್ನು,  ವಾರ್ಷಿಕ 10 ಲಕ್ಷ ರೂ.ಗಿಂತ ಹೆಚ್ಚಿನ ಆದಾಯ ಹೊಂದಿರುವವರು ಶೇ.30ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ.


ಇದನ್ನೂ ಓದಿ : ರೇಷನ್ ಕಾರ್ಡ್ ಇದ್ದರೆ ಉಚಿತ ರೇಷನ್ ಮಾತ್ರವಲ್ಲ, ಈ ಪ್ರಯೋಜನವೂ ಸಿಗುವುದು


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.