ಬೆಂಗಳೂರು : 2 ದಿನಗಳ ನಂತರ ಹೊಸ ತಿಂಗಳು ಪ್ರಾರಂಭವಾಗಲಿದೆ.  ಈ ತಿಂಗಳೂ ಅನೇಕ ಬದಲಾವಣೆಗಳು ಸಂಭವಿಸಲಿವೆ. ಬ್ಯಾಂಕ್, ಐಟಿಆರ್ ಮತ್ತು ಎಲ್‌ಪಿಜಿ ಸಿಲಿಂಡರ್ ಸೇರಿದಂತೆ ಹಲವು ನಿಯಮಗಳಲ್ಲಿ ಬದಲಾವಣೆಯಾಗಲಿದೆ. ಇದು ನೇರವಾಗಿ ನಿಮ್ಮ ಪಾಕೆಟ್ ಮೇಲೆ ಪರಿಣಾಮ ಬೀರುತ್ತದೆ. ಇದಲ್ಲದೆ, ದೇಶದ ಕೋಟಿಗಟ್ಟಲೆ ಇಪಿಎಫ್‌ಒ ಖಾತೆದಾರರ ನಿಯಮಗಳಲ್ಲಿ ಬದಲಾವಣೆಯಾಗಲಿದೆ.


COMMERCIAL BREAK
SCROLL TO CONTINUE READING

EPFO ನಿಯಮಗಳಲ್ಲಿ ಬದಲಾವಣೆ : 
ಜೂನ್ 1 ರಿಂದ ಇಪಿಎಫ್‌ಒ ನಿಯಮಗಳಲ್ಲಿ ಬದಲಾವಣೆಯಾಗಲಿದೆ. ನಿಯಮಗಳ ಪ್ರಕಾರ, ಎಲ್ಲಾ ಖಾತೆದಾರರು ತಮ್ಮ ಪಿಎಫ್ ಖಾತೆಯನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡುವುದು ಅವಶ್ಯಕ. ಜೂನ್ 1 ರವರೆಗೆ ನಿಮ್ಮ ಆಧಾರ್ ಅನ್ನು ಪಿಎಫ್‌ನೊಂದಿಗೆ ಲಿಂಕ್ ಮಾಡದಿದ್ದರೆ, ನಷ್ಟಗಳನ್ನು ಅನುಭವಿಸಬೇಕಾಗಬಹುದು. ಈ ಕುರಿತು ಇಪಿಎಫ್‌ಒ ಅಧಿಸೂಚನೆ ಹೊರಡಿಸಿದೆ. 


ಇದನ್ನೂ ಓದಿ : PPF: ಕೋಟ್ಯಾಂತರ ಗ್ರಾಹಕರಿಗೆ ಈ ದಿನ ಸಿಗಲಿದೆ ಶುಭ ಸುದ್ಧಿ


ITR ವೆಬ್‌ಸೈಟ್‌ನಲ್ಲಿ ಬದಲಾವಣೆ : 
ITR ಫೈಲ್ ಮಾಡುವವರಿಗೆ ದೊಡ್ಡ ಸುದ್ದಿ ಇದೆ. ಹೊಸ ಐಟಿಆರ್ ವೆಬ್‌ಸೈಟ್ ಜೂನ್ 7 ರಿಂದ ಪ್ರಾರಂಭವಾಗಲಿದೆ. ಅಂದರೆ, ಜೂನ್ 1 ರಿಂದ 6 ರವರೆಗೆ ಈ ವೆಬ್‌ಸೈಟ್ ಅನ್ನು ಬಳಸಲು  ಸಾಧ್ಯವಾಗುವುದಿಲ್ಲ. ಹೊಸ ವೆಬ್‌ಸೈಟ್ www.incometaxgov.in ಗೆ ಭೇಟಿ ನೀಡಬೇಕು  ಆದರೆ ಅದನ್ನು 6 ದಿನಗಳವರೆಗೆ ಬಳಸಲಾಗುವುದಿಲ್ಲ. ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ಸೇವೆ ಕಾರ್ಯನಿರ್ವಹಿಸುವುದಿಲ್ಲ. 


ಬ್ಯಾಂಕ್ ಆಫ್ ಬರೋಡಾ ಚೆಕ್ ಪಾವತಿ ವಿಧಾನದಲ್ಲಿ ಬದಲಾವಣೆ : 
ಬ್ಯಾಂಕ್ ಆಫ್ ಬರೋಡಾ ಕೂಡಾ ತನ್ನ ನಿಯಮಗಳನ್ನು ಬದಲಾಯಿಸಲಿದೆ. ಈ ಬ್ಯಾಂಕ್‌ನಲ್ಲಿ ಖಾತೆಯನ್ನು ಹೊಂದಿದ್ದರೆ, ಜೂನ್ ಒಂದರಿಂದ ಬ್ಯಾಂಕ್ ಚೆಕ್ ಪಾವತಿ ವಿಧಾನ ಬದಲಾಗಳಿದೆ ಎನ್ನುವುದು ನಿಮಗೆ ತಿಳಿದಿರಲಿ. ಬ್ಯಾಂಕ್ ಆಫ್ ಬರೋಡಾ ಹೇಳಿಕೆಯ ಪ್ರಕಾರ, ಗ್ರಾಹಕರು 2 ಲಕ್ಷ ರೂಪಾಯಿ ಚೆಕ್ ನೀಡಿದ್ದರೆ, ಗ್ರಾಹಕರು ಮೊದಲು ತಮ್ಮ ಚೆಕ್‌ನ ವಿವರಗಳನ್ನು ದೃಢೀಕರಿಸಬೇಕು. 


ಇದನ್ನೂ ಓದಿ : Share Market Update: ಮಾರುಕಟ್ಟೆಯಲ್ಲಿ ಭಾರಿ ಗೂಳಿ ಜಿಗಿತ, 63000 ಗಡಿ ದಾಟಿದ ಸೆನ್ಸೆಕ್ಸ್


ಸಣ್ಣ ಉಳಿತಾಯ ಯೋಜನೆಯ ದರಗಳಲ್ಲಿ ಬದಲಾವಣೆ :
ಸರ್ಕಾರವು ಸಣ್ಣ ಉಳಿತಾಯ ಯೋಜನೆಯ ಬಡ್ಡಿದರಗಳನ್ನು ಸಹ ಬದಲಾಯಿಸಬಹುದು. ಕೇಂದ್ರ ಸರ್ಕಾರವು ಪ್ರತಿ ತ್ರೈಮಾಸಿಕದಲ್ಲಿ ಬಡ್ಡಿದರಗಳನ್ನು ಪರಿಶೀಲಿಸುತ್ತದೆ. ಜೂನ್ 1 ರಿಂದ ಹೊಸ ಬಡ್ಡಿ ದರಗಳು  ಜಾರಿಯಾಗಲಿವೆ. 


ಗ್ಯಾಸ್ ಸಿಲಿಂಡರ್‌ಗಳ ಬೆಲೆಯಲ್ಲಿ ಹೆಚ್ಚಳ : 
ಗ್ಯಾಸ್ ಸಿಲಿಂಡರ್‌ಗಳ ಬೆಲೆಗಳನ್ನು ಸರ್ಕಾರಿ ತೈಲ ಕಂಪನಿಗಳು ಪ್ರತಿ ತಿಂಗಳು ಪರಿಶೀಲಿಸುತ್ತವೆ. ಒಂದನೇ ತಾರೀಕಿನಂದು ಐಒಸಿಎಲ್ ಸೇರಿದಂತೆ ತೈಲ ಕಂಪನಿಗಳು ಗ್ಯಾಸ್ ಸಿಲಿಂಡರ್ ಬೆಲೆಯನ್ನು ಹೆಚ್ಚಿಸುತ್ತವೆ ಅಥವಾ ಕಡಿತಗೊಳಿಸುತ್ತವೆ. ಪ್ರಸ್ತುತ ದೇಶದ ಹಲವು ನಗರಗಳಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ 1000 ರೂ.ಗಿಂತ ಹೆಚ್ಚಿದೆ. 


ಇದನ್ನೂ ಓದಿ : ಇಳಿಕೆಯಾಯಿತು ಬಂಗರಾದ ಬೆಲೆ : ಆಭರಣ ಕೊಳ್ಳಲು ಸರಿಯಾದ ಸಮಯವಿದು


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ