ಬೆಂಗಳೂರು : Indias Safest Bank : ಭಾರತದಲ್ಲಿ ಅನೇಕ ಬ್ಯಾಂಕುಗಳಿವೆ. ಆ ಬ್ಯಾಂಕುಗಳಲ್ಲಿ ಕೋಟ್ಯಂತರ ಗ್ರಾಹಕರು ಖಾತೆಗಳನ್ನು ಹೊಂದಿದ್ದಾರೆ. ಸರ್ಕಾರಿ ಬ್ಯಾಂಕ್ ಗಳಿಂದ ಹಿಡಿದು, ಖಾಸಗಿ ಬ್ಯಾಂಕ್ ಗಳವರೆಗಿನ ದೊಡ್ಡ ಪಟ್ಟಿಯೇ ಇದರಲ್ಲಿದೆ. ಆದರೆ ಈಗ ಬ್ಯಾಂಕ್ ಗಳ ಬಗ್ಗೆ ರಿಸರ್ವ್ ಬ್ಯಾಂಕ್ ನಿಂದ ಕೆಲವೊಂದು ಮಾಹಿತಿ ಹೊರ ಹಾಕಿದೆ. ಯಾವ ಬ್ಯಾಂಕ್‌ನಲ್ಲಿ ನಿಮ್ಮ ಹಣ ಸುರಕ್ಷಿತವಾಗಿದೆ ಮತ್ತು ಯಾವ ಬ್ಯಾಂಕ್‌ನಲ್ಲಿ ನಿಮ್ಮ ಹಣ ಸುರಕ್ಷಿತವಾಗಿಲ್ಲ ಎನ್ನುವುದನ್ನು ಆರ್ ಬಿಐ ಹೇಳಿದೆ. ದೇಶದಲ್ಲಿನ ಬ್ಯಾಂಕ್‌ಗಳಿಗೆ ಯಾವುದೇ ರೀತಿಯ ನಷ್ಟ ಉಂಟಾದರೆ ಗ್ರಾಹಕರು ಸೇರಿದಂತೆ ದೇಶಕ್ಕೆ ಕೂಡಾ ನಷ್ಟವಾಗುತ್ತದೆ. 


COMMERCIAL BREAK
SCROLL TO CONTINUE READING

1 ಸರ್ಕಾರಿ ಮತ್ತು 2 ಖಾಸಗಿ ಬ್ಯಾಂಕ್‌ಗಳ ಹೆಸರುಗಳು  ಇದರಲ್ಲಿವೆ : 
ರಿಸರ್ವ್ ಬ್ಯಾಂಕ್ ಈಗಾಗಲೇ ಡೊಮ್ಯಾಸ್ಟಿಕ್ ಸಿಸ್ಟಮ್ಯಾಟಿಕಲಿ ಇಂಪಾರ್ಟೆಂಟ್ ಬ್ಯಾಂಕ್   (D-SIBs) 2022ರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಒಂದು ಸರ್ಕಾರಿ ಮತ್ತು 2 ಖಾಸಗಿ ಬ್ಯಾಂಕ್‌ಗಳ ಹೆಸರುಗಳು ಸೇರಿವೆ. ಇದರೊಂದಿಗೆ ಕಳೆದ ವರ್ಷ ಸೇರ್ಪಡೆಯಾದ ಬ್ಯಾಂಕ್‌ಗಳ ಹೆಸರುಗಳೂ ಇವೆ. 


ಇದನ್ನೂ ಓದಿ : 1000 ರೂಪಾಯಿ ನೋಟು ನಿಮ್ಮ ಬಳಿಯಿದ್ದರೆ ಸಿಗುವುದು ಪೂರ್ತಿ 3 ಲಕ್ಷ!


SBI ಜೊತೆ ಈ ಎರಡು ಬ್ಯಾಂಕ್ ಗಳು ಪಟ್ಟಿಯಲ್ಲಿ : 
ಆರ್‌ಬಿಐ ನೀಡಿದ ಮಾಹಿತಿಯ ಪ್ರಕಾರ, 2022 ರ ಈ ಪಟ್ಟಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವನ್ನು ಹೊರತುಪಡಿಸಿ, ಖಾಸಗಿ ವಲಯದ ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್‌ಗಳ ಹೆಸರುಗಳನ್ನು ಸೇರಿಸಲಾಗಿದೆ.  ಅಲ್ಲದೆ ಈ ಪಟ್ಟಿಯಲ್ಲಿ ನಷ್ಟವನ್ನು ಅನುಭವಿಸುತ್ತಿರುವ ಬ್ಯಾಂಕ್ ಮತ್ತು ಅವುಗಳ ನಷ್ಟದಿಂದಾಗಿ ದೇಶದ ಹಣಕಾಸು ವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ಬ್ಯಾಂಕ್ ಗಳ ಹೆಸರುಗಳು ಕೂಡಾ ಇವೆ. 


ಈ ಪಟ್ಟಿಯಲ್ಲಿ ಬರುವ ಬ್ಯಾಂಕುಗಳ ಮೇಲೆ ಕಟ್ಟುನಿಟ್ಟಿನ ನಿಗಾ  ವಹಿಸಲಾಗುವುದು. ಆರ್‌ಬಿಐ ಪಟ್ಟಿಯ ಪ್ರಕಾರ, ಎಸ್‌ಬಿಐನ ರಿಸ್ಕ್ ವೆಯ್ಟೆಡ್ ಅಸೆಟ್ ನ ಶೇಕಡಾ 0.60 ಅನ್ನು ಟೈರ್-1 ಆಗಿ ಇರಿಸಲಾಗಿದೆ.  ಇನ್ನು ICICI ಮತ್ತು HDFCಯ  ರಿಸ್ಕ್ ವೆಯ್ಟೆಡ್   ಅಸೆಟ್  0.20 ಪ್ರತಿಶತವಾಗಿದೆ.  


ಇದನ್ನೂ ಓದಿ : ಮಾರುತಿಯ ಈ ಕಾರಿನ ಮೇಲೆ ಸಿಗುತ್ತಿದೆ 65 ಸಾವಿರದವರೆಗೆ ರಿಯಾಯಿತಿ


2015 ರಿಂದ ಈ ಪಟ್ಟಿ ಬಿಡುಗಡೆ : 
ಈ ಪಟ್ಟಿಯನ್ನು 2015 ರಿಂದ, ಬಿಡುಗಡೆ ಮಾಡಲಾಗುತ್ತಿದೆ. ರಿಸರ್ವ್ ಬ್ಯಾಂಕ್ ದೇಶದ ಆರ್ಥಿಕತೆಗೆ ಅತ್ಯಂತ ಮುಖ್ಯವಾದ ಬ್ಯಾಂಕ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡುತವ  ಆರ್‌ಬಿಐ ಅವುಗಳ ಮೇಲೆ ತೀವ್ರ ನಿಗಾ ಇರಿಸುತ್ತದೆ. ಬ್ಯಾಂಕ್‌ಗಳಿಗೆ ಆರ್‌ಬಿಐ ರೇಟಿಂಗ್‌ಗಳನ್ನು ಸಹ ನೀಡಲಾಗುತ್ತದೆ. ಅದರ ನಂತರವೇ ಈ ಪ್ರಮುಖ ಬ್ಯಾಂಕ್‌ಗಳ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ಪ್ರಸ್ತುತ, ಈ ಪಟ್ಟಿಯಲ್ಲಿ 3 ಬ್ಯಾಂಕ್‌ಗಳ ಹೆಸರುಗಳನ್ನು ಸೇರಿಸಲಾಗಿದೆ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.