Top 10 Selling Cars: ಮೇ ತಿಂಗಳಿನಲ್ಲಿ ಅತಿಹೆಚ್ಚು ಮಾರಾಟವಾದ ಟಾಪ್ 10 ಕಾರುಗಳು
ಅತಿಹೆಚ್ಚು ಮಾರಾಟವಾದ ಕಾರುಗಳು: ಮಾರುತಿ ಸುಜುಕಿ ವ್ಯಾಗನ್ಆರ್ ಮತ್ತು ಸ್ವಿಫ್ಟ್ ಅತ್ಯಂತ ಜನಪ್ರಿಯ ಕಾರುಗಳಾಗಿವೆ. ಇವುಗಳ ಮಾರಾಟವೂ ತುಂಬಾ ಚೆನ್ನಾಗಿದೆ. ಆದರೆ ಮೇ ತಿಂಗಳಲ್ಲಿ ಕೇವಲ ಒಂದು ಮಾರುತಿ ಕಾರು ವ್ಯಾಗನಾರ್ ಮತ್ತು ಸ್ವಿಫ್ಟ್ ಎರಡನ್ನೂ ಹಿಂದಿಕ್ಕಿ ಅತಿಹೆಚ್ಚು ಮಾರಾಟವಾದ ಕಾರು ಎನಿಸಿಕೊಂಡಿದೆ.
ನವದೆಹಲಿ: ಮಾರುತಿ ಸುಜುಕಿ ವ್ಯಾಗನ್ಆರ್ ಮತ್ತು ಸ್ವಿಫ್ಟ್ ಅತ್ಯಂತ ಜನಪ್ರಿಯ ಕಾರುಗಳಾಗಿವೆ. ಇವುಗಳ ಮಾರಾಟವೂ ತುಂಬಾ ಚೆನ್ನಾಗಿದೆ. ಈ ಎರಡೂ ಕಾರುಗಳು ವಿವಿಧ ತಿಂಗಳುಗಳಲ್ಲಿ ಉತ್ತಮ ಮಾರಾಟ ಕಂಡಿವೆ. ಆದರೆ ಮೇ ತಿಂಗಳಲ್ಲಿ ಮಾರುತಿಯ ಒಂದು ಕಾರು ವ್ಯಾಗನ್ಆರ್ ಮತ್ತು ಸ್ವಿಫ್ಟ್ ಎರಡನ್ನೂ ಹಿಂದಿಕ್ಕಿದೆ. ಈ ಮಾರುತಿ ಕಾರು ಎಲ್ಲಾ ಕಾರುಗಳಿಗೆ ಸೈಡ್ ಹೊಡೆದು ಅತಿಹೆಚ್ಚು ಮಾರಾಟವಾದ ಕಾರು ಎನಿಸಿಕೊಂಡಿದೆ. ಈ ಕಾರು ಯಾವುದು ಅಂತೀರಾ..? ಅದುವೆ ಮಾರುತಿ ಸುಜುಕಿ ಬಲೆನೊ.
ಹೌದು, ಮೇ 2023ರಲ್ಲಿ ಮಾರುತಿ ಸುಜುಕಿ ಬಲೆನೊ ಅತಿಹೆಚ್ಚು ಮಾರಾಟ ಕಂಡಿದೆ. ಇದರ 18,700 ಯುನಿಟ್ಗಳು ಮಾರಾಟವಾಗಿವೆ. ಮಾರುತಿ ಸುಜುಕಿ ಸ್ವಿಫ್ಟ್ 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡೆರೆ, ವ್ಯಾಗನ್ಆರ್ 3ನೇ ಸ್ಥಾನ ಪಡೆದುಕೊಂಡಿದೆ. ಮೇ 2023ರಲ್ಲಿ ಸ್ವಿಫ್ಟ್ ಒಟ್ಟು 17,300 ಯುನಿಟ್ಗಳು ಮಾರಾಟವಾಗಿದ್ದರೆ, ವ್ಯಾಗನ್ಆರ್ 16,300 ಯುನಿಟ್ಗಳನ್ನು ಮಾರಾಟ ಮಾಡಿದೆ. ಮೇ ತಿಂಗಳಲ್ಲಿ ಅತಿಹೆಚ್ಚು ಮಾರಾಟವಾದ ಟಾಪ್-3 ಕಾರುಗಳ ಎಲ್ಲಾ 3 ಮಾದರಿಗಳು ಮಾರುತಿ ಸುಜುಕಿ ಕಂಪನಿಗೆ ಸೇರಿರುವುದು ವಿಶೇಷ.
ಇದನ್ನೂ ಓದಿ: ಇಂದಿನ ಅಡಿಕೆ ಧಾರಣೆ: ರಾಜ್ಯದ ಮಾರುಕಟ್ಟೆಯಲ್ಲಿ ಮತ್ತೆ ಏರಿಕೆ ಕಂಡ ಅಡಿಕೆ ದರ!
ಟಾಪ್ 10 ಮಾರಾಟವಾದ ಕಾರುಗಳು (ಮೇ 2023)
1. ಮಾರುತಿ ಬಲೆನೊ - 18,700 ಯುನಿಟ್ಗಳು ಮಾರಾಟ
2. ಮಾರುತಿ ಸ್ವಿಫ್ಟ್ - 17,300 ಯುನಿಟ್ಗಳು ಮಾರಾಟ
3. ಮಾರುತಿ ವ್ಯಾಗನ್ಆರ್ - 16,300 ಯುನಿಟ್ಗಳು ಮಾರಾಟ
4.ಹ್ಯುಂಡೈ ಕ್ರೆಟಾ - 14,449 ಯುನಿಟ್ಗಳು ಮಾರಾಟ
6. ಮಾರುತಿ ಬ್ರೆಝಾ - 13,398 ಯುನಿಟ್ಗಳು ಮಾರಾಟ
7. ಮಾರುತಿ ಇಕೊ - 12,800 ಯುನಿಟ್ಗಳು ಮಾರಾಟ
8. ಮಾರುತಿ ಡಿಜೈರ್ - 11,300 ಯುನಿಟ್ಗಳು ಮಾರಾಟ
9. ಟಾಟಾ ಪಂಚ್ - 11,100 ಯುನಿಟ್ಗಳು ಮಾರಾಟ
10. ಮಾರುತಿ ಎರ್ಟಿಗಾ - 10,500 ಯುನಿಟ್ಗಳು ಮಾರಾಟ
ಇದನ್ನೂ ಓದಿ: Fitch Ratings: 2023-24 ಆರ್ಥಿಕ ವರ್ಷದಲ್ಲಿ ಭಾರತದ ಜಿಡಿಪಿ ಮುನ್ಸೂಚನೆಯನ್ನು ಮತ್ತೊಮ್ಮೆ ಅಂದಾಜಿಸಿದ ಫೀಚ್
ಹೆಚ್ಚು ಮಾರಾಟವಾದ ಕಾರು- ಮಾರುತಿ ಬಲೆನೊ
ಮಾರುತಿ ಬಲೆನೊ ಬೆಲೆ 6.61 ಲಕ್ಷದಿಂದ 9.88 ಲಕ್ಷ ರೂ (ಎಕ್ಸ್ ಶೋ ರೂಂ, ದೆಹಲಿ). ಇದು 1.2-ಲೀಟರ್ ಡ್ಯುಯಲ್ಜೆಟ್ ಪೆಟ್ರೋಲ್ ಎಂಜಿನ್ನೊಂದಿಗೆ ಬರುತ್ತದೆ, ಇದು ಸಿಎನ್ಜಿ ಆಯ್ಕೆಯನ್ನು ಸಹ ಹೊಂದಿದೆ. ಇದರ ಎಂಜಿನ್ ಪೆಟ್ರೋಲ್ನಲ್ಲಿ 90 PS ಮತ್ತು 113 Nm ಅನ್ನು ಉತ್ಪಾದಿಸುತ್ತದೆ. ಆದರೆ CNGಯಲ್ಲಿ 77.49 PS ಮತ್ತು 98.5 Nm ಇದೆ. ಇದು 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು 5-ಸ್ಪೀಡ್ AMT ಆಯ್ಕೆ ಹೊಂದಿದೆ. ಎಂಜಿನ್ನೊಂದಿಗೆ ಐಡಲ್-ಸ್ಟಾರ್ಟ್/ಸ್ಟಾಪ್ ತಂತ್ರಜ್ಞಾನವನ್ನು ಸಹ ಒದಗಿಸಲಾಗಿದೆ, ಇದು ಮೈಲೇಜ್ ಸುಧಾರಿಸಲು ಸಹಾಯ ಮಾಡುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.