ನವದೆಹಲಿ: ಸಿಎನ್‌ಜಿ ಕಾರುಗಳಿಗೆ ಭಾರತದಲ್ಲಿ ಉತ್ತಮ ಬೇಡಿಕೆಯಿದೆ. ಅವುಗಳ ಅತ್ಯುತ್ತಮ ಮೈಲೇಜ್ ಮತ್ತು ಅತ್ಯಂತ ಕಡಿಮೆ ವೆಚ್ಚಕ್ಕಾಗಿ ಇವುಗಳಿಗೆ ಆದ್ಯತೆ ನೀಡಲಾಗುತ್ತಿದೆ. ಮಾರುಕಟ್ಟೆಯಲ್ಲಿ ಸಿಎನ್‌ಜಿ ಕಾರುಗಳ ಹಲವು ಆಯ್ಕೆಗಳಿವೆ, ಆದರೆ ಇವುಗಳಲ್ಲಿ ಹೆಚ್ಚಿನವು ಕೇವಲ 5 ಸೀಟರ್‌ಗಳಾಗಿವೆ. ಹೀಗಾಗಿ 7 ಸೀಟರ್ ಸಿಎನ್‍ಜಿ ವಾಹನಗಳತ್ತ ಗ್ರಾಹಕರು ಹೆಚ್ಚಿನ ಆಸಕ್ತಿ ವಹಿಸಿದ್ದಾರೆ.


COMMERCIAL BREAK
SCROLL TO CONTINUE READING

ಗ್ರಾಹಕರಿಗೆ ಇಷ್ಟವಾಗುವ 7 ಸೀಟರ್ CNG ಕಾರುಗಳು ಬಗ್ಗೆ ನಾವು ನಿಮಗೆ ಮಾಹಿತಿ ನೀಡುತ್ತಿದ್ದೇವೆ. ವಿಶೇಷವೆಂದರೆ ಇದರಲ್ಲಿ ನೀವು 26 ಕಿಮೀವರೆಗೆ ಮೈಲೇಜ್ ಪಡೆಯಲಿದ್ದೀರಿ.


ಮಾರುತಿ ಸುಜುಕಿ ಎರ್ಟಿಗಾ


ಮಾರುತಿ ಸುಜುಕಿ ಎರ್ಟಿಗಾ ದೇಶದಲ್ಲಿ ಹೆಚ್ಚು ಮಾರಾಟವಾಗುವ 7 ಆಸನಗಳ ಕಾರುಗಳಲ್ಲಿ ಒಂದಾಗಿದೆ. ಇದು CNG ಆಯ್ಕೆಯೊಂದಿಗೆ ಬರುತ್ತದೆ. ಇದರಲ್ಲಿ ನೀವು ವೈಶಿಷ್ಟ್ಯಗಳ ದೀರ್ಘಪಟ್ಟಿ ಮತ್ತು ವಿಶಾಲವಾದ ಕ್ಯಾಬಿನ್ ಪಡೆಯುತ್ತೀರಿ. ಎರ್ಟಿಗಾ CNG 1.5-ಲೀಟರ್ ಡ್ಯುಯಲ್ಜೆಟ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಇದು 807 Bhp ಪವರ್ ಮತ್ತು 121 Nm ಟಾರ್ಕ್ ಉತ್ಪಾದಿಸುತ್ತದೆ.


ಇದನ್ನೂ ಓದಿ: TA-DA Arrears: ಸರ್ಕಾರಿ ನೌಕರರಿಗೆ ಬಂಬಾಟ್ ಲಾಟರಿ, ವೇತನದಲ್ಲಿ ಭಾರಿ ವೃದ್ಧಿ, ಜನವರಿ-ಮಾರ್ಚ್ ಬಾಕಿಯಿಂದ ಬಂಪರ್ ಲಾಭ!


ಈ ಎಂಪಿವಿ ಸಿಎನ್‌ಜಿ ಮೋಡ್‌ನಲ್ಲಿ ಪ್ರತಿ ಕೆಜಿಗೆ 26.11 ಕಿಮೀ ಮೈಲೇಜ್ ನೀಡಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಮಾರುತಿ ಸುಜುಕಿ ಎರ್ಟಿಗಾ(VXI ರೂಪಾಂತರ) ಸಿಎನ್‌ಜಿ ಬೆಲೆಯು ಭಾರತೀಯ ಮಾರುಕಟ್ಟೆಯಲ್ಲಿ 10.44 ಲಕ್ಷ ರೂ.ದಿಂದ ಪ್ರಾರಂಭವಾಗುತ್ತದೆ. ZXI ರೂಪಾಂತರದ ಕಾರಿನ ಬೆಲೆ 11.54 ಲಕ್ಷ ರೂ. ಇದೆ.


ಮಾರುತಿ ಸುಜುಕಿ Xl6


ಪಟ್ಟಿಯಲ್ಲಿರುವ 2ನೇ ಕಾರು ಕೂಡ ಮಾರುತಿಯದ್ದಾಗಿದೆ. ಇದು ಕಂಪನಿಯ ಪ್ರೀಮಿಯಂ 7 ಸೀಟರ್ ಕಾರು ಮಾರುತಿ ಸುಜುಕಿ XL6 ಆಗಿದೆ. ಇದರಲ್ಲಿ ನಿಮಗೆ ಎರ್ಟಿಗಾಕ್ಕಿಂತ ಉತ್ತಮ ವೈಶಿಷ್ಟ್ಯ ನೀಡಲಾಗಿದೆ. ಇದು 6 ಸೀಟರ್ ಆಯ್ಕೆಯಲ್ಲಿ ಬರುತ್ತದೆ. ಇದು ನೋಟದಲ್ಲಿ ಎರ್ಟಿಗಾಕ್ಕಿಂತ ಹೆಚ್ಚು ಪ್ರೀಮಿಯಂ ಆಗಿ ಕಾಣುತ್ತದೆ.


ಇದನ್ನೂ ಓದಿ: Big Update: ಮೋದಿ ಸರ್ಕಾರದ ಮಹತ್ವದ ಹೆಜ್ಜೆ, ತೈಲ ಬೆಲೆಯ ಮೇಲೆ ಶೂನ್ಯ ತೆರಿಗೆ, ಇಲ್ಲಿದೆ ಹೊಸ ದರ!


ಇತ್ತೀಚೆಗೆ XL6ಅನ್ನು CNG ಕಿಟ್‌ನೊಂದಿಗೆ ಬಿಡುಗಡೆ ಮಾಡಲಾಯಿತು. XL6 CNG ಎರ್ಟಿಗಾ CNGಯಂತೆಯೇ ಅದೇ ಎಂಜಿನ್‌ನಿಂದ ಚಾಲಿತವಾಗುತ್ತದೆ. ಇದು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಮಾತ್ರ ಲಭ್ಯವಿದೆ. ಕಂಪನಿಯ ಪ್ರಕಾರ ಇದರಲ್ಲಿ ನೀವು 26.32 km/kg ಮೈಲೇಜ್ ಪಡೆಯಲಿದ್ದೀರಿ. ಮಾರುತಿ XL6 CNG ಬೆಲೆ 12.24 ಲಕ್ಷ ರೂ. (ಎಕ್ಸ್ ಶೋ ರೂಂ, ದೆಹಲಿ) ಇದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.