ನವದೆಹಲಿ: ಓಲಾ ಎಲೆಕ್ಟ್ರಿಕ್ ಭಾರತದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ನಂ.1 ಬ್ರ್ಯಾಂಡ್ ಆಗಿದೆ. ಇತರ ಕಂಪನಿಗಳೂ ತಮ್ಮ ಹಿಡಿತವನ್ನು ಗಟ್ಟಿ ಮಾಡಿಕೊಳ್ಳುವ ಪ್ರಯತ್ನ ಆರಂಭಿಸಿವೆ. ಗ್ರೀವ್ಸ್ ಕಾಟನ್ ಲಿಮಿಟೆಡ್ ಮಾಲೀಕತ್ವದ ಆಂಪಿಯರ್ ಕಂಪನಿಯು ಓಲಾ ನಂತರ 2ನೇ ಸ್ಥಾನದಲ್ಲಿದೆ. ದೇಶೀಯ ಮಾರುಕಟ್ಟೆ ಪಾಲನ್ನು ಹೆಚ್ಚಿಸಲು ಆಂಪಿಯರ್ ಕೆಲವು ಹೊಸ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಪರಿಚಯಿಸಲು ಯೋಜಿಸುತ್ತಿದೆ. ಹೊಸ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಕೈಗೆಟಕುವ ದರದಲ್ಲಿ ಮತ್ತು ಪ್ರೀಮಿಯಂ ವಿಭಾಗದಲ್ಲಿರಲಿವೆ ಎಂದು ಕಂಪನಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ನಾಗೇಶ್ ಬಸವನಹಳ್ಳಿ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಕಂಪನಿಯು ಆಂಪಿಯರ್ ಬ್ರಾಂಡ್‌ನ ಅಡಿ Primu, Magnus EX  ಮತ್ತು Rio Plusನಂತಹ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದೆ. ಕಂಪನಿಯು ಆಂಪಿಯರ್ NXG ಮತ್ತು ಆಂಪಿಯರ್ NXU ಸೇರಿದಂತೆ 5 ಹೊಸ ಉತ್ಪನ್ನಗಳನ್ನು ಆಟೋ ಎಕ್ಸ್‌ಪೋ 2023ರಲ್ಲಿ ಪರಿಚಯಿಸಿದೆ. ಇದಲ್ಲದೆ ಹೊಸ ಆಂಪಿಯರ್ ಪ್ರೈಮಸ್ ಇ-ಸ್ಕೂಟರ್ ಅನ್ನು ಸಹ ಪ್ರದರ್ಶಿಸಲಾಗಿದೆ.


ಇದನ್ನೂ ಓದಿ: Lalit Modi: ಐಪಿಎಲ್ ಸೃಷ್ಟಿಕರ್ತ ಲಲಿತ್ ಮೋದಿ ಸ್ಥಿತಿ ನೋಡಿ.. ಐಸಿಯುನಲ್ಲಿ ನರಳುತ್ತಿರುವ ಖ್ಯಾತ ಉದ್ಯಮಿ


‘ಹಲವು ವರ್ಷಗಳ ಹಿಂದೆ ಕಂಪನಿಯು ಎಲೆಕ್ಟ್ರಿಕ್ ಜರ್ನಿ ಆರಂಭಿಸಿದಾಗ ವಾರ್ಷಿಕ ಆದಾಯ ಸುಮಾರು 18 ಕೋಟಿ ರೂ. ಇದ್ದು, ಕಳೆದ ತ್ರೈಮಾಸಿಕದಲ್ಲಿ 320 ಕೋಟಿ ರೂ.ಗೆ ಏರಿಕೆಯಾಗಿದೆ' ಎಂದು ನಾಗೇಶ್ ತಿಳಿಸಿದರು. ‘ಮ್ಯಾಗ್ನಸ್ ಬ್ರಾಂಡ್ ಅಡಿ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ 1,00,000ಕ್ಕೂ ಹೆಚ್ಚು ಯುನಿಟ್‌ಗಳು ಮಾರಾಟವಾಗಿವೆ. ನಮ್ಮ ಉತ್ಪನ್ನಗಳು ಜನರಿಗೆ ತುಂಬಾ ಇಷ್ಟವಾಗಿದೆ. ಈಗ ನಾವು ಮ್ಯಾಗ್ನಸ್ ಹೊರತುಪಡಿಸಿ ಜನರಿಗೆ ಇಷ್ಟವಾಗುವಂತಹ ಉತ್ಪನ್ನ ತಯಾರಿಸುತ್ತಿದ್ದು, ಹೊಸದನ್ನು ತರುತ್ತಿದ್ದೇವೆ’ ಎಂದು ಹೇಳಿದ್ದಾರೆ.


'ಮುಂದಿನ ದಿನಗಳಲ್ಲಿ ಮತ್ತಷ್ಟು ಅಗ್ಗದ ಸ್ಕೂಟರ್‌ಗಳು ಬರಲಿವೆ. ಇವುಗಳ ಬೆಲೆ 85,000 ರಿಂದ 1 ಲಕ್ಷ ರೂ.ವರೆಗೆ ಇರಲಿದೆ. ಕಂಪನಿಯು ಅಗ್ಗದ ಹಾಗೂ ಹೆಚ್ಚಿನ ಬೆಲೆಯ ವಾಹನಗಳನ್ನು ಹೊಸ ಹೊಸ ವೈಶಿಷ್ಟ್ಯಗಳೊಂದಿಗೆ ಪರಿಚಯಿಸಲು ಸಿದ್ಧತೆ ನಡೆಸಿದೆ. ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮಾರುಕಟ್ಟೆ ಬೆಳೆಯುತ್ತಿದೆ ಮತ್ತು ಕಳೆದ ವರ್ಷ ಸುಮಾರು 2.5 ಲಕ್ಷ ಯುನಿಟ್‌ಗಳು ಮಾರಾಟವಾಗಿವೆ. ಈ ಅಂಕಿ ಅಂಶವು ಈ ವರ್ಷ ಸುಮಾರು 7 ಲಕ್ಷ ಯೂನಿಟ್‌ಗಳನ್ನು ತಲುಪಲಿದೆ ಮತ್ತು ಮುಂದಿನ ವರ್ಷ ಇದು ಸುಮಾರು 13 ಲಕ್ಷ ಯೂನಿಟ್ ಆಗಲಿದೆ ಎಂದು ಅಂದಾಜಿಸಲಾಗಿದೆ. ಶೇ.13-14ರಷ್ಟು ಮಾರುಕಟ್ಟೆ ಪಾಲನ್ನು ನಮ್ಮ ಕಂಪನಿ ಹೊಂದಿದೆ' ಎಂದು ಅವರು ಹೇಳಿದರು.


ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಸಂತದ ಸುದ್ದಿ, ಕನಿಷ್ಠ ವೇತನದಲ್ಲಿ ಶೀಘ್ರದಲ್ಲೇ ಹೆಚ್ಚಳ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.