February Month Highest Selling TVS Scooter: TVS ಫೆಬ್ರವರಿ 2023 ಕ್ಕೆ ತನ್ನ ಮಾರಾಟದ ಬ್ರೇಕ್ ಅಪ್ ಬಿಡುಗಡೆ ಮಾಡಿದೆ. TVS ಮೋಟಾರ್‌ನ ಒಟ್ಟು ದ್ವಿಚಕ್ರ ವಾಹನಗಳ ಮಾರಾಟ (ದೇಶೀಯ + ರಫ್ತು) ಫೆಬ್ರವರಿ 2023 ರಲ್ಲಿ 2,65,872 ಯುನಿಟ್‌ಗಳಷ್ಟಿದೆ. ಕಂಪನಿಯ ದೇಶೀಯ ದ್ವಿಚಕ್ರ ವಾಹನ ಮಾರಾಟದಲ್ಲಿ ಶೇ.27.83 ರಷ್ಟು ಪ್ರಗತಿ ಕಂಡುಬಂದಿದೆ. ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ವ್ಯಾಪಕ ಶ್ರೇಣಿಯ ಮೋಟಾರ್‌ಸೈಕಲ್‌ಗಳನ್ನು ಮಾರಾಟ ಮಾಡುತ್ತಿದೆ. ಆದರೆ, ಕಂಪನಿಯ ಎರಡು ಸ್ಕೂಟರ್‌ಗಳ ಮುಂದೆ ಎಲ್ಲಾ ಬೈಕ್‌ಗಳು ಫೇಲಾಗಿವೆ. ಕಂಪನಿಯ ಫೆಬ್ರವರಿ ಮಾರಾಟದಲ್ಲಿ ಜೂಪಿಟರ್ ಸ್ಕೂಟರ್ ಭಾರಿ ಪ್ರಾಬಲ್ಯ ಮೆರೆದಿದೆ.


COMMERCIAL BREAK
SCROLL TO CONTINUE READING

ಫೆಬ್ರುವರಿ ತಿಂಗಳಿನಲ್ಲಿ ಈ ಸ್ಕೂಟರ್ ನ ಒಟ್ಟು  53,891 ಯುನಿಟ್‌ಗಳನ್ನು ಮಾರಾಟ ಮಾಡುವ ಮೂಲಕ ಕಂಪನಿಯ ಅತ್ಯುತ್ತಮ ಮಾರಾಟವಾದ ದ್ವಿಚಕ್ರ ವಾಹನ ಎನಿಸಿಕೊಂಡಿದೆ. ಜ್ಯೂಪೀಟರ್ ಶೇ. 14.44 ರಷ್ಟು ವಾರ್ಷಿಕ ಬೇಡಿಕೆಯ ಬೆಳವಣಿಗೆಯನ್ನು ಕಂಡಿದೆ. ಕಂಪನಿಯ ಒಟ್ಟು ಮಾರುಕಟ್ಟೆ ಪಾಲಿನಲ್ಲಿ ಜ್ಯೂಪೀಟರ್ ಶೇ. 24.34 ಹೊಂದಿದೆ. ಎರಡನೇ ಸ್ಥಾನದಲ್ಲಿ XL ಮೊಪೆಡ್ ಇದೆ, ಇದು 35,346 ಯೂನಿಟ್ ಗಳ ಮಾರಾಟ ಕಂಡಿದೆ. ಜ್ಯೂಪೀಟರ್, ಎಕ್ಸ್‌ಎಲ್, ಅಪಾಚೆ ಮತ್ತು ರೈಡರ್ ಗಳನ್ನು  ಅಗ್ರ-4 ಮಾದರಿಗಳಲ್ಲಿ ಸೇರಿಸಲಾಗಿದೆ ಮತ್ತು ಅವುಗಳ ಮಾರುಕಟ್ಟೆ ಪಾಲು ಶೇ. 70ರಷ್ಟಿದೆ.


ಇದನ್ನೂ ಓದಿ-ದೇಶದ ಕೋಟ್ಯಾಂತರ ಪಿಂಚಣಿದಾರರಿಗೆ ಭಾರಿ ಸಂತಸದ ಸುದ್ದಿ ಪ್ರಕಟಿಸಿದ ನಿರ್ಮಲಾ ಸೀತಾರಾಮನ್!


TVS ಜೂಪಿಟರ್ ಫೆಬ್ರವರಿ 2023 ರಲ್ಲಿ ಹೋಂಡಾ ಆಕ್ಟಿವಾ ನಂತರ ಎರಡನೇ ಅತಿ ಹೆಚ್ಚು ಮಾರಾಟವಾದ ಸ್ಕೂಟರ್ ಆಗಿದೆ. ಟಿವಿಎಸ್ ಜೂಪಿಟರ್ ಸ್ಕೂಟರ್‌ನ ಆರಂಭಿಕ ಬೆಲೆ 71,390 ರೂ. ಇದು ಭಾರತದಲ್ಲಿ 6 ರೂಪಾಂತರಗಳು ಮತ್ತು 15 ಬಣ್ಣಗಳಲ್ಲಿ ಮಾರಾಟವಾಗುತ್ತಿದೆ. ಇದರ ಟಾಪ್ ರೂಪಾಂತರದ ಬೆಲೆ 87,123 ರೂಗಳಿಂದ ಪ್ರಾರಂಭವಾಗುತ್ತದೆ. ಇದು 7.88 PS ಪವರ್ ಮತ್ತು 8.8 Nm ಟಾರ್ಕ್ ಅನ್ನು ಉತ್ಪಾದಿಸುವ 109.7 ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದು ಮುಂಭಾಗದಲ್ಲಿ ಡಿಸ್ಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕಿಂಗ್ ಸಿಸ್ಟಂ ಹೊಂದಿದೆ.


ಇದನ್ನೂ ಓದಿ-DA Hike Approved: ಸರ್ಕಾರಿ ನೌಕರರಿಗೆ ಭಾರಿ ಸಂತಸದ ಸುದ್ದಿ, ಶೇ.4 ರಷ್ಟು ತುಟ್ಟಿಭತ್ಯೆ ಹೆಚ್ಚಳಕ್ಕೆ ಮೋದಿ ಸಂಪುಟ ಅನುಮೋದನೆ


ಈ ಸ್ಕೂಟರ್ ಕೂಡ ಅದ್ಭುತ ಪ್ರದರ್ಶನ ತೋರಿಸಿದೆ
iQube ಎಲೆಕ್ಟ್ರಿಕ್ ಸ್ಕೂಟರ್ ಫೆಬ್ರವರಿ 2023 ರಲ್ಲಿ 593.57% ವಾರ್ಷಿಕ ಬೆಳವಣಿಗೆಯನ್ನು ದಾಖಲಿಸಿದೆ, ಇದರ 15,522 ಘಟಕಗಳನ್ನು ಕಂಪನಿ ಮಾರಾಟ ಮಾಡಿದೆ. iQube ನಲ್ಲಿ 2.25kWh ಬ್ಯಾಟರಿಯನ್ನು ನೀಡಲಾಗಿದೆ. ಇದು ಸುಮಾರು 5 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ ಮತ್ತು ಸಂಪೂರ್ಣ ಚಾರ್ಜ್‌ನಲ್ಲಿ 75 ಕಿಮೀ ಓಡುತ್ತದೆ. ಇಕೋ ಮೋಡ್‌ನಲ್ಲಿ ಗಂಟೆಗೆ 40 ಕಿಮೀ ಮತ್ತು ಸ್ಪೋರ್ಟ್ ಮೋಡ್‌ನಲ್ಲಿ 78 ಕಿಮೀ ವೇಗವನ್ನು ಇದು ಸಾಧಿಸಬಹುದು ಎಂದು ಟಿವಿಎಸ್ ಹೇಳಿಕೊಂಡಿದೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.